May 7, 2024

MALNAD TV

HEART OF COFFEE CITY

ಸಂವಿಧಾನದ ಮೂಲಕ ಸಮಾನತೆ ಕಲ್ಪಿಸಿದವರು ಬಾಬಾ ಸಾಹೇಬ್ ಅಂಬೇಡ್ಕರ್

1 min read

ಚಿಕ್ಕಮಗಳೂರು-ಸoವಿಧಾನ ಎಂಬ ಅತ್ಯಮೂಲ್ಯ ಗ್ರಂಥವನ್ನು ದೇಶಕ್ಕೆ ಕೊಡುಗೆ ನೀಡುವ ಮೂಲಕ ಸರ್ವರಿಗೂ ಸಮಾನತೆ ಒದಗಿಸಿದ ಭಾರತ ರತ್ನ ಡಾ. ಬಿ.ಆರ್.ಅಂಬೇಡ್ಕರ್ ಅವರು ಎಂದಿಗೂ ಜನಮಾನಸದಲ್ಲಿ ಅಮರರಾಗಿರಲಿದ್ದಾರೆ ಎಂದು ಕೋಟೆ ರಂಗನಾಥ್ ಸ್ಮರಿಸಿದರು.ನಗರದ ಹಿರೇಮಗಳೂರಿನ ಮತ್ತಿನಮ್ಮ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ೬೫ನೇ ಪರಿನಿಬ್ಬಾಣ ದಿನದ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಪ್ಪಾರ್ಚನೆ ಸಲ್ಲಿಸಿ ಅವರು ಮಾತನಾಡಿದರು.

ಸರ್ವ ಸಮುದಾಯಕ್ಕೂ ಸಮಾನತೆ ಒದಗಿಸಬೇಕು ಎಂಬ ನಿಟ್ಟಿನಲ್ಲಿ ಅಂಬೇಡ್ಕರ್ ಅವರು ನಿರಂತರ ಪರಿಶ್ರಮದಿಂದಾಗಿ ದೇಶಕ್ಕೆ ಅಮೂಲ್ಯವಾದ ಸಂವಿಧಾನ ಗ್ರಂಥವನ್ನು ನೀಡಿದ್ದಾರೆ. ಇದರಲ್ಲಿ ಶೋಷಿತರು, ಮಹಿಳೆಯರು, ಹಿಂದುಳಿದವರು ಸೇರಿದಂತೆ ಎಲ್ಲಾ ವರ್ಗಕ್ಕೂ ಸಮಾನ ಮೀಸಲಾತಿ ವ್ಯವಸ್ಥೆಯನ್ನು ಕಲ್ಪಸಿ ಸಮ ಸಮಾಜದ ಆಶಯವನ್ನು ಬಿತ್ತಿದ್ದಾರೆ ಎಂದು ತಿಳಿಸಿದರು.ಬಡತನ, ಜಾತಿ ವ್ಯವಸ್ಥೆ, ಶೋಷಣೆಯಲ್ಲಿ ಬೆಳೆದ ಬಾಬಾ ಸಾಹೇಬರು ಇದೆಲ್ಲವನ್ನು ಹೋಗಲಾಡಿಸಲು ಶಿಕ್ಷಣ, ಸಂಘಟನೆ, ಹೋರಾಟದಿಂದ ಮಾತ್ರ ಸಾಧ್ಯ ಎಂಬುದನ್ನು ಅರಿತಿದ್ದರು. ಅವರ ಆಶಯ ಚಿಂತನೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಇಂದಿನ ಸಮಾಜ ಸಾಗಬೇಕಿದೆ. ಜಾತಿ ವ್ಯವಸ್ಥೆಯನ್ನು ತೊಡೆದು ಹಾಕುವ ಮೂಲಕ ಅವಕಾಶ ವಂಚಿತ ಸಮಾಜವನ್ನು ಮೇಲ್ಮಟ್ಟಕೆ ತರುವ ಕೆಲಸವಾಗಬೇಕಿದೆ ಎಂದರು.ಅಂಬೇಡ್ಕರ್ ರೂಪಿಸಿದ ಸಂವಿಧಾನ ಇಂದು ಅನೇಕ ದೇಶಗಳಿಗೆ ಮಾದರಿಯಾಗಿದೆ, ಸ್ವಾತಂತ್ರ, ಸಮಾನತೆ, ಬಾತೃತ್ವವೆಂಬ ತಳಹದಿಯ ಮೇಲೆ ಸಂವಿಧಾನ ರಚಿತವಾಗಿದ್ದು, ಕಾನೂನಿನ ಮೂಲಕ ಮಹಿಳೆಯರು, ಶೋಷಿತರು, ಬಡ ವರ್ಗದವರು ಸೇರಿದಂತೆ ಸರ್ವ ಜನಾಂಗಕ್ಕೂ ಸಮಾನ ನ್ಯಾಯ ಒದಗಿಸಿದ್ದಾರೆ. ಸಂವಿಧಾನದ ಆಶಯಗಳನ್ನು ಈಡೇರಿಸುವಲ್ಲಿ ನಾವುಗಳು ಸಾಗಬೇಕಿದೆ ಎಂದರು.ದೇಶದಲ್ಲಿ ಇಂದಿಗೂ ಕೆಲವಡೆ ಅಸ್ಪಶ್ಯತೆ, ಜಾತೀಯತೆ ಎಂಬುದು ತಾಂಡವವಾಡುತ್ತಿದೆ. ಮಹಿಳೆಯರ ಮೇಲೆ ದೌರ್ಜನ್ಯ, ಹಿಂಸೆಯoತಹ ಪ್ರಕರಣಗಳು ದಾಖಲಾಗುತ್ತಿದೆ, ಸಂವಿಧಾನ ವಿರೋಧಿಯಾಗಿ ಹಲವು ಕಾಯ್ದೆ ಕಾನೂನುಗಳು ಜಾರಿಗೊಳ್ಳುತ್ತಿದ್ದು ಇದಕ್ಕೆ ಕಡಿವಾಣ ಹಾಕಬೇಕಿದೆ ಎಂದರು.
ಈ ಸಂದರ್ಭದಲ್ಲಿ ಹಿರೇಮಗಳೂರು ಕೇಶವ, ರೇವನಾಥ್, ಮಂಜುನಾಥ್, ರಾಜ್‌ಕುಮಾರ್, ಮೋಹನ್, ಶ್ರೀದೇವಿ ಮೋಹನ್ ಉಪಸ್ಥಿತರಿದ್ದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!