May 19, 2024

MALNAD TV

HEART OF COFFEE CITY

ಕನ್ನಡ ಭಾಷೆ, ಸಾಹಿತ್ಯದ ಉಳಿವಿಗಾಗಿ ಶ್ರಮಿಸೋಣ_ ಸೂರಿ ಶ್ರೀನಿವಾಸ

1 min read

ತರೀಕೆರೆ: ಕನ್ನಡ ಭಾಷೆ, ಸಂಸ್ಕೃತಿ, ಸಾಹಿತ್ಯದ ಉಳಿವಿಗಾಗಿ ನಾವೆಲ್ಲರೂ ಶ್ರಮಿಸೋಣ, ಸಾಹಿತ್ಯ ಪರಿಷತ್ತಿನ ಜೊತೆ ಜೊತೆಗೆ ಕನ್ನಡ ಕಟ್ಟುವ ಕೆಲಸ ಮಾಡೋಣ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸೂರಿ ಶ್ರೀನಿವಾಸ್ ಹೇಳಿದರು.ಪಟ್ಟಣದ ಆದಿತ್ಯಾ ಪ್ಯಾಲೇಸ್ ಸಭಾಂಗಣದಲ್ಲಿ ನಡೆದ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಸರ್ವ ಸದಸ್ಯರ ಸಭೆಯಲ್ಲಿ ಅಭಿನಂದನೆಯನ್ನು ಸ್ವೀಕರಿಸಿ ಮಾತನಾಡಿದರು. ಯಾವುದೇ ಜಾತಿ, ಮತ, ಪಂಥ ಎನ್ನದೆ ಕನ್ನಡದ ಎಲ್ಲಾ ಮನಸ್ಸುಗಳು ಒಂದಾಗಿ ನನ್ನನ್ನು ಗೆಲ್ಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅವರೆಲ್ಲರ ಋಣ ನನ್ನ ಮೇಲಿದೆ, ನಾನು ಸಹ ಅವರ ಮನಸ್ಸುಗಳನ್ನು ಹುಸಿಗೊಳಿಸದೆ ಹಸನುಗೊಳಿಸುವ ಕೆಲಸ ಮಾಡುತ್ತೇನೆ, ತರೀಕೆರೆಯಲ್ಲಿ ಮತ್ತು ಎಲ್ಲಾ ಹೋಬಳಿಗಳಲ್ಲಿ ಎಲ್ಲರ ಸಹಕಾರ ಪಡೆದು ಕನ್ನಡ ಭವನ ಕಟ್ಟುತ್ತೇನೆ ಎಂದರು.

ತರೀಕೆರೆ ಸಾಹಿತ್ಯ ಸಮೃದ್ಧಿಯ ತವರೂರು, ಈ ನೆಲದಲ್ಲಿ ಅನೇಕ ಸಾಹಿತ್ಯ ದಿಗ್ಗಜರು ಜನಿಸಿದ್ದಾರೆ, ಆ ಮಹಾನಿಯರ ಒಳಗೊಂಡoತೆ ಜಿಲ್ಲೆಯ ಯುವ ಲೇಖಕರ ಕಿರು ಪರಿಚಯದ ಹೊತ್ತಿಗೆ ತರುತ್ತೇನೆ, ಯುವ ಲೇಖಕರಿಗೆ ಅನುಕೂಲವಾಗುವಂತಹ ಕಥಾ ಕಮ್ಮಟ, ಕಾವ್ಯ ಕಮ್ಮಟ, ಕವಿಗೋಷ್ಠಿ, ಸಾಹಿತ್ಯ ಚಿಂತಕರೊoದಿಗೆ ಸಂವಾದ ಕಾರ್ಯಕ್ರಮಗಳನ್ನು ಏರ್ಪಡಿಸಿ ಸಾಹಿತ್ಯದ ಅಭಿರುಚಿ ಹೆಚ್ಚಿಸುತ್ತೇನೆ ಹಾಗೂ ಎಲ್ಲರ ಅಭಿಪ್ರಾಯ ಸಂಗ್ರಹಣೆ ಮಾಡಿ ತಾಲ್ಲೂಕು ಅಧ್ಯಕ್ಷರ ಆಯ್ಕೆಯನ್ನು ಮಾಡುತ್ತೇನೆ ಎಂದರು.ನಾಡಗೀತೆ ಹಾಡಿ ಮಾತನಾಡಿದ ಬಿ.ಎಸ್. ಭಗವಾನ್ ಚುನಾವಣೆ ಮುಗಿದಿದೆ ನಾವೆಲ್ಲರೂ ಒಂದಾಗಿ ಸೂರಿಯವರನ್ನು ಗೆಲ್ಲಿಸಿದ್ದೇವೆ, ಇದು ಸೂರಿಯವರ ಗೆಲುವಲ್ಲ ಇದು ನಮ್ಮೆಲ್ಲರ ಗೆಲುವು, ಎಲ್ಲರೂ ಒಟ್ಟಾಗಿ ಸಾಮರಸ್ಯದಿಂದ ಕನ್ನಡದ ತೇರನ್ನು ಎಳೆಯೋಣ ಎಂದರು.ಅರಿವು ವೇದಿಕೆಯ ಅಧ್ಯಕ್ಷ ಕೆ ಎಸ್ ಶಿವಣ್ಣ, ಹಿರಿಯ ಸಾಹಿತಿ ರೇವಣ್ಣ, ಲೇಖಕರಾದ ರವಿದಳವಾಯಿ, ನೌಕರ ಸಂಘದ ಮಾಜಿ ಅಧ್ಯಕ್ಷ ಎಂ.ಬಿ ರಾಮಚಂದ್ರಪ್ಪ, ರಾಷ್ಟ್ರೀಯ ಚರ್ಚಾಪಟು ಇಮ್ರಾನ್ ಅಹಮ್ಮದ್ ಬೇಗ್, ಶಿಕ್ಷಕರಾದ ಎಸ್.ಟಿ ತಿಪ್ಪೇಶಪ್ಪ, ನಾಗೇಶ್ ಮಾತನಾಡಿದರು.

ಸಭೆಯಲ್ಲಿ ಕಡೂರಿನ ಸಾಹಿತ್ಯ ಪರಿಷತ್ತಿನ ಸದಸ್ಯರಾದ ಸಿಂಗಟಗೆರೆ ಸಿದ್ದಪ್ಪ, ಮುಗಳಿಕಟ್ಟೆ ಲೋಕೇಶ್, ಪ್ರಕಾಶ್, ಶಾಂತಮೂರ್ತಿ ತರೀಕೆರೆ ಸಾಹಿತ್ಯ ಪರಿಷತ್ತಿನ ಸದಸ್ಯರಾದ ನವೀನ್ ಪೆನ್ನಯ್ಯ, ಜಯಸ್ವಾಮಿ, ದರ್ಶನ್, ವೆಂಕಟೇಶ್, ಗಿರೀಶ್, ಕಲ್ಲೇಶ, ಕಿರಣ್, ಮುಹೀಬ್, ವಿಜಯ್ ಕುಮಾರ್, ದಾದಾಪೀರ್, ಉಪಸ್ಥಿತರಿದ್ದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!