May 19, 2024

MALNAD TV

HEART OF COFFEE CITY

ಕಳವು ಪ್ರಕರಣಗಳಲ್ಲಿ ವಶಪಡಿಸಿಕೊಂಡ ವಸ್ತುಗಳ ಹಸ್ತಾಂತರ ಪೊಲೀಸ್ ಇಲಾಖೆಗೆ ಪ್ರಶಂಸೆ

1 min read

ಚಿಕ್ಕಮಗಳೂರು: ಕಳೆದ ಒಂದು ವರ್ಷದಲ್ಲಿ ಜಿಲ್ಲೆಯ ೨೦ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ೭೭ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಮಾರು ೮೨.೫ ಲಕ್ಷ ಮೌಲ್ಯದ ವಸ್ತುಗಳನ್ನು ಪತ್ತೆಮಾಡಿ ವಾರಸುದಾರರಿಗೆ ಮರಳಿ ನೀಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಎಂ.ಹೆಚ್ ಅಕ್ಷಯ್ ತಿಳಿಸಿದರು.

ನಗರದ ರಾಮನಹಳ್ಳಿಯ ಡಿಎಆರ್ ಮೈದಾನದಲ್ಲಿ ಮಂಗಳವಾರ ಪ್ರಾಪರ್ಟಿ ರಿಟರ್ನ್ ಪೆರೇಟ್ ಕಾರ್ಯಕ್ರಮದಲ್ಲಿ ವಾರಸುದಾರರಿಗೆ ವಿವಿಧ ವಸ್ತುಗಳನ್ನು ಹಸ್ತಾಂತರಿಸಿ ಅವರು ಮಾತನಾಡಿದ ಅವರು, ೪೧.೨೭ ಲಕ್ಷ ಮೌಲ್ಯದ ೯೦೦ ಗ್ರಾಂ ಚಿನ್ನ ಹಾಗೂ ೧೨ ಕೆಜಿ ಬೆಳ್ಳಿಯ ಆಭರಣಗಳು, ೨೧.೫೪ ಲಕ್ಷ ಮೌಲ್ಯದ ೪೫ ದ್ವಿಚಕ್ರ, ನಾಲ್ಕು ಚಕ್ರ ಹಾಗೂ ತ್ರಿಚಕ್ರ ವಾಹನನಗಳು, ೭.೧೭ ಲಕ್ಷ ನಗದು, ೩.೩೦ ಲಕ್ಷ ಮೌಲ್ಯದ ಅಡಿಕೆ, ೧.೪೧ ಲಕ್ಷ ಮೌಲ್ಯದ ಎಲೆಕ್ಟಾ0ನಿಕ್ ಉಪಕರಣಗಳು ಹಾಗೂ ೭.೮೨ ಲಕ್ಷ ಮೌಲ್ಯದ ಇತರೆ ವಸ್ತುಗಳು ಸೇರಿದಂತೆ ೮೨,೫೩,೫೧೧ ಲಕ್ಷ ಮೌಲ್ಯದ ವಸ್ತುಗಳನ್ನು ಹಸ್ತಾಂತರಿಸಲಾಗಿದೆ ಎಂದು ತಿಳಿಸಿದರು ಇದೇ ವೇಳೆ ಮಾತನಾಡಿದ ಅವರು, ಕಳ್ಳತನಕ್ಕೆ ಸಂಬಂಧಿಸಿದಂತೆ ಜಾಗೃತಿ ಮೂಡಿಸಲು ಹಾಗೂ ಕಳ್ಳತವನ್ನು ತಡೆಗಟ್ಟಲು ಎಲ್ಲಾ ರೆಸಿಡೆನ್ಷಿಯಲ್ ಏರಿಯಾಗಳಲ್ಲಿ ವಾರ್ಡ್ ಮೀಟಿಂಗ್ ಮಾಡಿ ನಾಗರೀಕರಿಗೆ ಕ್ಯಾಮೇರಾ ಅಳವಡಿಸಿಕೊಳ್ಳಲು ಮನವಿ ಮಾಡಲಾಗಿದೆ. ಗ್ರಾಮೀಣ ಪ್ರದೇಶದ ಎಲ್ಲಾ ದೇವಸ್ಥಾನಗಳಲ್ಲಿ ದೇವಾಲಯದ ಆಡಳಿತ ಮಂಡಳಿ ಜೊತೆ ಚರ್ಚಸಿ ಕ್ಯಾಮೇರಾ ಹಾಗೂ ಅಲರಾಂ ಅಳವಡಿಸಲಾಗುತ್ತಿದ್ದು ಈಗಾಗಲೇ ಸಖರಾಯಪಟ್ಟಣ ಹಾಗೂ ಕಡೂರು ಪೊಲೀಸ್ ಠಾಣಾ ವ್ಯಾಪ್ತಿಯ ದೇವಾಲಯಗಳಲ್ಲಿ ಇದನ್ನು ಬಹುತೇಕ ಜಾರಿಗೆ ತರಲಾಗಿದೆ ಎಂದು ಹೇಳಿದರು.
ಇಲಾಖೆಯಲ್ಲಿ ರಾತ್ರಿ ಪಾಳಿಯವನ್ನು ಸಕ್ರಿಯಗೊಳಿಸಲಾಗಿದ್ದು ರೆಸಿಡೆನಿಸ್ಸಿಯಲ್ ಏರಿಯಾದಲ್ಲಿ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ತಗೆದುಕೊಳ್ಳಲಾಗಿದೆ ಎಂದು ತಿಳಿಸಿದರು.

 

 

* ಪೊಲೀಸ್ ಇಲಾಖೆಗೆ ಪ್ರಶಂಸೆ

ಕಳ್ಳತನವಾಗಿದ್ದ ವಸ್ತುಗಳನ್ನು ಅತ್ಯಂತ ಶೀಘ್ರದಲ್ಲಿ ಕಾರ್ಯಾಚರಣೆ ಮಾಡಿ ಹಿಂದುರುಗಿಸಿದ ಪೊಲೀಸ್ ಇಲಾಖೆಗೆ ವಸ್ತುಗಳನ್ನು ಕಳೆದುಕೊಂಡಿದ್ದ ವಾರಸುದಾರರು ಪ್ರಶಂಸೆ ವ್ಯಕ್ತಪಡಿಸಿದರು. ಚಿನ್ನಾಭರಣ, ಬೆಳ್ಳಿ, ನಗದು, ವಾಹನಗಳು ಸೇರಿದಂತೆ ಕೃಷಿ ಉಪಕರಣಗಳನ್ನು ಕಳೆದುಕೊಂಡಿದ್ದ ಹಲವರು ಸ್ಥಳದಲ್ಲಿಯೇ ಅವರ ವಸ್ತುಗಳನ್ನು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಎಂ. ಎಚ್ ಅಕ್ಷಯ್ ಹಸ್ತಾಂತರಿಸಿದ ಕೂಡಲೇ ಅವರ ಮುಖದಲ್ಲಿ ಮಂದಹಾಸ ಮೂಡುವ ಜೊತೆಗೆ ಇಲಾಖೆಯ ಕಾರ್ಯಕ್ಕೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ

 

 

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!