May 6, 2024

MALNAD TV

HEART OF COFFEE CITY

ಅಮೃತ ಕಲಶ ಯಾತ್ರೆ: ‘ನನ್ನ ಮಣ್ಣು ನನ್ನ ದೇಶ’ ಅಭಿಯಾನ

1 min read

ಕೊಪ್ಪ: ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನಲ್ಲಿ #meri meti mera desh# ಅಭಿಯಾನದಡಿಯಲ್ಲಿ ಅಮೃತ ಕಲಶ ಯಾತ್ರೆ ಹಾಗೂ ಕಾರ್ಯಕ್ರಮವನ್ನು ಕೊಪ್ಪ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮವನ್ನು ನಾಡಗೀತೆಯೊಂದಿಗೆ ಪ್ರಾರಂಭಿಸಲಾಯಿತು.

ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿ ಪುಟ್ಟೇಗೌಡರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಹಾಯಕ ನಿರ್ದೇಶಕ (ಗ್ರಾ.ಉ) ಚೇತನ್ ಕೆ.ಜಿ ರವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಭಾರ ಪ್ರಾಂಶುಪಾಲರಾದ ಸತೀಶ್ ಎಸ್.ಡಿ ವಹಿಸಿದ್ದರು.

ಈ ಕಾರ್ಯಕ್ರಮದಲ್ಲಿ ಮಾಜಿ ಸೈನಿಕರಾದ ಕ್ಯಾಪ್ಟನ್‌ ಎ.ಗೋಪಲ್‌, ಎನ್.ಕೆ ವಿಜಯ ನಿಲುವಾಗಿಲು, ರಮೇಶ್‌ ಶಾಸ್ತ್ರಿ, ಶ್ರೀ ಎ.ಎನ್.‌ ಸುಬ್ಬಣ್ಣ, ಸಂದೀಪ್‌ ಬಿ.ಎಂ ರವರೆಲ್ಲರನ್ನು ಸನ್ಮಾನಿಸಲಾಯಿತು. ಮುಖ್ಯ ಅತಿಥಿಗಳಾಗಿ ಅಕ್ಷರ ದಾಸೋಹ ಸಹಾಯಕ ನಿರ್ದೇಶಕರಾದ ಅಂಜನಪ್ಪ ಎಲ್, ಹರಂದೂರು ಗ್ರಾಮ ಪಂಚಾಯತಿ ಅಧ್ಯಕ್ಷರಾದ ಸುರೇಶ್ ಭಾಗವಹಿಸಿದ್ದರು.

22 ಗ್ರಾಮಪಂಚಾಯಿತಿಗಳಿಂದ ಸಂಗ್ರಹಿಸಿದ ಪವಿತ್ರವಾದ ಮಣ್ಣನ್ನು ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಹಾಗೂ ವೇದಿಕೆಯಲ್ಲಿ ಉಪಸ್ಥಿತರಾದ ಗಣ್ಯರು,ನೆಹರು ಯುವ ಕೇಂದ್ರದ ಸ್ವಯಂ ಸೇವಕರಾದ ಶಿವಾನಂದ.ಎ. ಎಸ್ ಇವರಿಗೆ ಹಸ್ತಾಂತರಿಸಿದರು. ಇದೇ ಸಂದರ್ಭದಲ್ಲಿ ನರೇಗಾ ಐಇಸಿ ಸಂಯೋಜಕರಾದ ಕು ಸುಮಲತಾರವರು ಪಂಚ‌ಪ್ರಾಣ ಶಪಥ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು‌.
ಪಟ್ಟಣ ಪಂಚಾಯಿತಿ ಕೊಪ್ಪ,ಹಾಗೂ ಅಂಚೆ ಇಲಾಖೆ ಕೊಪ್ಪ ಇವರ ಪವಿತ್ರವಾದ ಮಣ್ಣನ್ನು ಅಮೃತ ಕಲಶ ಯಾತ್ರೆಯಲ್ಲಿ ಸಂಗ್ರಹಿಸಲಾಯಿತು. ಅಷ್ಟೇ ಅಲ್ಲದೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವೀರಗಾಸೆ ಕಲಾ ತಂಡದವರು ನೃತ್ಯ ಮಾಡುವುದರ ಮೂಲಕ ಅಮೃತ ಕಲಶ ಯಾತ್ರೆಯಲ್ಲಿ ಇನ್ನಷ್ಟು ಮೆರುಗು ತಂದರು. ನಂತರ ಅಮೃತ ಕಲಶ ಯಾತ್ರೆಯನ್ನು ಸರಕಾರಿ ಪ್ರಥಮ ದರ್ಜೆ ಕಾಲೇಜು ಕೊಪ್ಪದಿಂದ ಮೊದಲ್ಗೊಂಡು ತಾಲ್ಲೂಕು ಕಚೇರಿ, ಬಾಳಗಡಿ ಮಾರ್ಗವಾಗಿ ಪ್ರಥಮ ದರ್ಜೆ ಕಾಲೇಜಿನ ಮುಂಭಾಗದಲ್ಲಿ ಮುಕ್ತಾಯಗೊಳಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಕೊಪ್ಪ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಶ್ರೀ ಚಂದ್ರಶೇಖರ್‌ ಹಾಗೂ ಸಿಬ್ಬಂದಿಗಳು, ತಾಲ್ಲೂಕು ಪಂಚಾಯಿತಿ ಸಿಬ್ಬಂದಿಗಳು, ಅಂಚೆ ಇಲಾಖೆಯ ಸಿಬ್ಬಂದಿಗಳು, ಎನ್.ಆರ್.‌ಎಲ್.ಎಂ ಜಿಪಿಎಲ್‌ಎಫ್‌ ನ ಸಿಬ್ಬಂದಿಗಳು, ಕೊಪ್ಪ ಪ್ರಥಮ ದರ್ಜೆ ಕಾಲೇಜಿನ ಎನ್.ಎಸ್.ಎಸ್‌ ನ ಯೋಜನಾಧಿಕಾರಿಗಳಾದ ವೆಂಕಟೇಶ್‌ ಮೂರ್ತಿರವರು ಹಾಗೂ ವಿಧ್ಯಾರ್ಥಿ,ವಿಧ್ಯಾರ್ಥಿನಿಯರು, ಕಾಲೇಜಿನ ಉಪನ್ಯಾಸಕರು, ಹಾಗೂ ಮತ್ತಿತರರು ಭಾಗವಹಿಸಿದ್ದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!