May 7, 2024

MALNAD TV

HEART OF COFFEE CITY

ದೇವರ ಹುಂಡಿಯಲ್ಲಿ 2 ಸಾವಿರ ಮುಖಬೆಲೆಯ ಜೆರಾಕ್ಸ್ ನೋಟು ಪತ್ತೆ…!

1 min read

ಭಕ್ತನೋರ್ವ ದೇವರಿಗೆ 2 ಸಾವಿರ ರೂಪಾಯಿ ನೋಟನ್ನ ಕಲರ್ ಜೆರಾಕ್ಸ್ ಮಾಡಿಸಿ ದೇವರ ಕಾಣಿಕೆ ಹುಂಡಿಯಲ್ಲಿ ಹಾಕಿರೋ ಘಟನೆ ಚಿಕ್ಕಮಗಳೂರು ಜಿಲ್ಲೆ ಕಳಸ ತಾಲೂಕಿನ ದಕ್ಷಿಣ ಕಾಶಿ ಎಂದೇ ಖ್ಯಾತಿಯಾಗಿರುವ ಕಳಸೇಶ್ವರ ಸ್ವಾಮಿ ದೇಗುಲದಲ್ಲಿ ನಡೆದಿದೆ. ಹರಕೆ ಕಟ್ಟಿಕೊಂಡಿದ್ದಾನೆಯೋ ಅಥವ ಕಟ್ಟಿದ ಹರಕೆ ತೀರಿಸಿದ್ದಾನೋ ಗೊತ್ತಿಲ್ಲ. ಆದ್ರೆ, ಹುಂಡಿ ಹಣ ಎಣಿಕೆ ಕಾರ್ಯದ ವೇಳೆ 2000 ಸಾವಿರ ಮುಖಬೆಲೆಯ ಜೆರಾಕ್ಸ್ ನೋಟು ಪತ್ತೆಯಾಗಿದೆ. ಆದರೆ, ಇದನ್ನ ಮಕ್ಕಳು ಆಟವಾಡಲು ಬಳಸು ನಕಲಿ ನೋಟುಗಳು. ಇದನ್ನ ದೊಡ್ಡವರೇ ಹಾಕಿದ್ದಾರೋ ಅಥವ ಮಕ್ಕಳು ಹಾಕಿದ್ದಾರೋ ಸ್ಪಷ್ಟವಾದ ಮಾಹಿತಿ ಇಲ್ಲ. ಆದರೆ, ಹುಂಡಿಯಲ್ಲಿ ಸಿಕ್ಕಿರುವ ಹಣವನ್ನ ನೋಡಿದ ಎಣಿಕಾ ಸಿಬ್ಬಂದಿಗಳು ಆ ನೋಟನ್ನ ಹರಿದು ಹಾಕಿದ್ದಾರೆ. ಈ ಹಿಂದೆ ಇದೇ ದೇವಾಲಯದಲ್ಲಿ ಹುಂಡಿ ಎಣಿಕ ಕಾರ್ಯದ ವೇಳೆ ಭಕ್ತನೋರ್ವ ಇಡೀ ವಂಶವೃಕ್ಷ ಬರೆದು ಎಲ್ಲರಿಗೂ ಒಳ್ಳೆಯದು ಮಾಡು, ಮದುವೆಗೆ ಹೆಣ್ಣು ಸಿಗುವಂತೆ ಮಾಡು. ಪಿಯುಸಿ ಪಾಸ್ ಮಾಡು. ಮಾವನಿಗೆ ಒಳ್ಳೆ ಬುದ್ಧಿ ಕೊಡು ಎಂದು ಬರೆದು ಹಾಕಿದ್ದನು. 2000 ರೂಪಾಯಿಯ ನಕಲಿ ನೋಟು ನೋಡಿದ ಹುಂಡಿ ಎಣಿಕಾ ಸಿಬ್ಬಂದಿಗಳು ನಸುನಕ್ಕು ಆ ನೋಟನ್ನ ಹರಿದು ಹಾಕಿದ್ದಾರೆ.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!