April 29, 2024

MALNAD TV

HEART OF COFFEE CITY

ಶಾಪಗ್ರಸ್ತ ಗ್ರಾಮದ ಜಮೀನಿನ ಕಥೆ-ವ್ಯಥೆ

1 min read

ಚಿಕ್ಕಮಗಳೂರು : ಕಾರಣಾಂತರಗಳಿಂದ ಗ್ರಾಮದಿಂದ ಗುಳೆ ಹೊರಟು ಪಾಳು ಬಿದ್ದ ಗ್ರಾಮ, ಪಾಳು ಬಿದ್ದ ಗ್ರಾಮದ ಜಮೀನಿಗಾಗಿ ಅಕಪಕ್ಕದ ಮತ್ತೆರೆಡು ಗ್ರಾಮಗಳ ಗ್ರಾಮಸ್ಥರ ನಡುವೆ ಸಂಘರ್ಷ. ಈ ಸಂಘರ್ಷ ಇಂದು ನಿನ್ನೆಯದಲ್ಲ, ಸರಿ ಸುಮಾರು ದಶಕಗಳದ್ದು, ಜಮೀನು ತಮಗೆ ಸೇರಿದ್ದು ಎನ್ನುವ ಮತ್ತೊಂದು ಗ್ರಾಮದ ಗ್ರಾಮದವರು ಬೆಳೆದ ಬೆಳೆ ಕೈ ಸೇರುವ ಮುನ್ನವೆ ಟ್ರಾಕ್ಟರ್ ಬಳಸಿ ಬೆಳೆ ನಾಶ ಪಡಿಸಿರುವ ದೃಶ್ಯ. ಬೆಳೆದ ಬೆಳೆ ಮಣ್ಣು ಪಾಲಾಗಿರುವುದನ್ನು ಕಂಡು ಮಮ್ಮಲ ಮರಗುವ ರೈತ ಕುಟುಂಬ. ಇದು ಶಾಪಗ್ರಸ್ತ ಗ್ರಾಮದ ಜಮೀನಿಗಾಗಿ ಮತ್ತೆರೆಡು ಗ್ರಾಮಗಳ ಸಂಘರ್ಷ ಅದು ಯಾವ ಎರಡು ಗ್ರಾಮಗಳ ಸಂಘರ್ಷ ಅಂತಿರಾ.. ಈ ಸ್ಟೋರಿ ನೋಡಿ.

ಕಡೂರು ತಾಲೂಕಿನ ಹೋರಿತಿಮ್ಮನಹಳ್ಳಿ ಹಾಗೂ ಜೋಡಿತಿಮ್ಮನಹಳ್ಳಿ ಗ್ರಾಮಗಳ ನಡುವೆ ಹಿಂದೊಮ್ಮ ಹನುಮಾಪುರ ಎಂಬ ಗ್ರಾಮವಿತ್ತು. ಕಾರಣಾಂತರಗಳಿಂದ ಅಂಬಾಪುರ ಗ್ರಾಮದ ಗ್ರಾಮಸ್ಥರು ಬೇರೆಡೆ ಗೂಳೆ ಹೊರಟು, ಊರು ಪಾಳು ಬಿದ್ದಿತ್ತು. ಪಾಳು ಬಿದ್ದ ಹನುಮಾಪುರ ಗ್ರಾಮಕ್ಕೆ ಸೇರಿದ ಸ.ನಂ62ರಲ್ಲಿ 1.35ಗುಂಟೆ ಜಮೀನನ್ನು ಪಕ್ಕದಲ್ಲೆ ಸ.ನಂ.8ರಲ್ಲಿ 15ಗುಂಟೆ ಜಮೀನು ಹೊಂದಿದ ಹೋರಿ ತಿಮ್ಮನಹಳ್ಳಿ ಗ್ರಾಮದ ಧರಣಿಕುಮಾರ್ ಸುಮಾರು 10 ರಿಂದ 15 ವರ್ಷಗಳಿಂದ ಬೇಸಾಯ ಮಾಡಿಕೊಂಡು ಬರುತ್ತಿದ್ದಾರೆ. ಈ ಜಮೀನನ್ನು ಮಂಜೂರು ಮಾಡುವಂತೆ 2018ರಲ್ಲಿ ಫಾರಂ ನಂ.57ರಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಈ ನಡುವೆ ಜೋಡಿ ತಿಮ್ಮಾಪುರ ಗ್ರಾಮದ ತೆಲಗುಗೌಡ ಸಮುದಾಯಕ್ಕೆ ಸೇರಿದ ಜನರು ಇದು ನಮ್ಮ ಗ್ರಾಮಕ್ಕೆ ಸೇರಿದ ಜಮೀನು ಎಂದು ತಕರಾರು ತೆಗೆದು ಬೆಳೆದ ಬೆಳೆ ನಾಶ ಮಾಡಿದ್ದಾರೆ.

ಹನುಮಾಪುರ ಗ್ರಾಮಕ್ಕೆ ಸೇರಿದ ಜಮೀನು ಹಾಗೂ ತನಗೆ ಸೇರಿದ ಒಟ್ಟು ನಾಲ್ಕು ಎಕರೆ ಪ್ರದೇಶದಲ್ಲಿ ಹೋರಿತಿಮ್ಮಹಳ್ಳಿ ಗ್ರಾಮದ ಧರಣಿಕುಮಾರ್ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಆಲೂಗೆಡೆ ಬೆಳೆ ಬೆಳೆದಿದ್ದಾರೆ. ಏಕಾಏಕಿ ಜಮೀನಿಗೆ ನುಗ್ಗಿದ ಜೋಡಿತಿಮ್ಮಾಪುರ ಗ್ರಾಮದ ಜನರು ಆಲೂಗಡ್ಡೆ ಬೆಳೆಯ ಮೇಲೆ ಟ್ಯಾಕ್ಟರ್ ಹೊಡೆದು ಬೆಳೆನಾಶ ಮಾಡಿ ದೌರ್ಜನ್ಯ ಎಸಗಿದ್ದಾರೆ. ಹೋರಿ ತಿಮ್ಮನಹಳ್ಳಿ ಗ್ರಾಮದಲ್ಲಿ ಕುಳುವ ಸಮಾಜದ ಕುಟುಂಬಗಳು ಕಡಿಮೆ ಇದ್ದು, ಪ್ರಬಲ ಸಮುದಾಯವಾದ ತೆಲಗುಗೌಡ ಸಮುದಾಯದವರು ಜಮೀನಿನಲ್ಲಿ ಟ್ರಾಕ್ಟ್ರರ್ ಹೊಡೆದು ಬೆಳೆನಾಶ ಪಡಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಎರಡು ಜನಾಂಗಗಳ ನಡುವೆ ನಡೆದ ಸಂಘರ್ಷದಲ್ಲಿ ಜಮೀನಿನಲ್ಲಿ ಬೆಳೆದ ಲಕ್ಷಾಂತರ ರೂಪಾಯಿ ಹಣ ತಂದುಕೊಡಬಹುದಾಗಿದ್ದ ಆಲೂಗೆಡ್ಡೆ ಬೆಳೆ ಮಣ್ಣು ಪಾಲಾಗಿದೆ. ಈ ಸಂಬಂಧ ಬೀರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖ ಲಾಗಿದ್ದು, ತಾ.ಪಂ. ಮಾಜಿ ಸದಸ್ಯ ಗೋವಿಂದಸ್ವಾಮಿ, ಸಂಪತ್, ಪುನೀತ್, ಸಿರಿ ಎಂಬುವರು ಕೃತ್ಯ ಎಸಗಿದ್ದಾರೆಂದು ದೂರಿನಲ್ಲಿ ಆರೋಪಿಸಿದ್ದಾರೆ.

ಒಟ್ಟಿನಲ್ಲಿ ಕಾರಣಾಂತರಗಳಿಂದ ದಶಕಗಳ ಹಿಂದೆ ಗ್ರಾಮ ತೊರೆದ ಹನುಮಾಪುರ ಗ್ರಾಮಕ್ಕೆ ಸೇರಿದ ಜಮೀನು ಶಾಪಗ್ರಸ್ತವಾಗಿದ್ದು, ಹೋರಿತಿಮ್ಮನಹಳ್ಳಿ ಹಾಗೂ ಜೋಡಿತಿಮ್ಮನಹಳ್ಳಿ ಗ್ರಾಮದ ದಶಕಗಳ ವೈಷಮ್ಯಕ್ಕೆ ಕಾರಣವಾಗಿದೆ. ಯಾರದೋ ಜಮೀನಿಗೆ ಇನ್ಯಾರೋ ಜಗಳ ಮಾಡುವಂತಾಗಿ ಒಟ್ಟಿನಲ್ಲಿ ಗುಳೆ ಹೋದ ಹನುಮಾಪುರ ಗ್ರಾಮದ ಜಮೀನು ಶಾಪಗ್ರಸ್ತ ಭೂಮಿಯಾಗಿದೆ.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!