May 19, 2024

MALNAD TV

HEART OF COFFEE CITY

ಆಕಸ್ಮಿಕ ಬೆಂಕಿಗೆ ಬೀದಿಗೆ ಬಿದ್ದ ಬಡ ಕುಟುಂಬ ಸಹಾಯ ಹಸ್ತಕ್ಕಾಗಿ ಮೊರೆ

1 min read

ಆಕಸ್ಮಿಕವಾಗಿ ಬಿದ್ದ ಬೆಂಕಿಗೆ ಮನೆಯೊಂದು ಸಂಪೂರ್ಣ ಸುಟ್ಟು ಹೋಗಿದ್ದು, ಅದೃಷ್ಟವಶಾತ್ ಮನೆಯ ಸದಸ್ಯರು ಪ್ರಾಣಪಾಯದಿಂದ ಬಚಾವಾಗಿದ್ದಾರೆ. ಆಕಸ್ಮಿಕ ಬೆಂಕಿಯಿಂದ ಸಾವಿರಾರು ರೂಪಾಯಿ ನಷ್ಟವಾಗಿರುವ ಘಟನೆ ನಗರದ ದಂಟರಮಕ್ಕಿಯಲ್ಲಿ ನಡೆದಿದೆ.

ತಾವು ವಾಸವಿದ್ದ ಮನೆಯಲ್ಲಿ ಪ್ರತಿದಿನದಂತೆ ಗಂಡ ಹೆಂಡತಿ ಊಟ ಮಾಡಿ ಮಲಗಿದ್ದು, ಕಳೆದ ರಾತ್ರಿ 2 ಗಂಟೆಯ ಸುಮಾರಿಗೆ ಇದ್ದಕಿಂದ್ದಂತೆ ಹಂಚಿನ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಗಾಬರಿಗೊಂಡ ಗೃಹಿಣಿ ಮುಫಿಜಾನ್ ಗಂಡನನ್ನು ಎಬ್ಬಿಸಿ ಹೊರಗೆ ಬಂದು ಅಕ್ಕಪಕ್ಕದವರ ಸಹಾಯ ಕೇಳಿದ್ದಾರೆ. ಧಾವಿಸಿ ಬಂದ ನೆರೆಹೊರೆಯವರು ಬೆಂಕಿ ನಂದಿಸಲು ಸಹಕರಿಸಿದ್ದಾರೆ. ವಿಷಯ ತಿಳಿದ ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬೆಂಕಿ ಅನಾಹುತದಿಂದ ಬಡಕುಟುಂಬ ಬೀದಿಗೆ ಬಿದ್ದಿದೆ.  ವಿಷಯ ತಿಳಿದ ಜಾಮೀಯ ಮಸೀದಿಯ ಪಧಾದಿಕಾರಿಗಳು ಸ್ಥಳಕ್ಕೆ ಆಗಮಿಸಿ ನೊಂದ ಕುಟುಂಬಕ್ಕೆ ಸಾಂತ್ವಾನ ಹೇಳಿ ಸಹಾಯ ಹಸ್ತ ಚಾಚಿದ್ದಾರೆ. ಜನಪ್ರತಿನಿಧಿಗಳ, ಅದಿಕಾರಿಗಳ, ಸರ್ಕಾರದ ಸಹಾಯದ ನಿರೀಕ್ಷೆಯಲ್ಲಿ ಕುಟುಂಬವಿದೆ.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!