May 16, 2024

MALNAD TV

HEART OF COFFEE CITY

ರೇಣುಕಾಚಾರ್ಯರ ಮೂರ್ತಿ ನಿರ್ಮಾಣಕ್ಕೆ ರಂಭಾಪುರಿ ಮಠಕ್ಕೆ ಬಂದ 250 ಟನ್ ತೂಕದ ಬೃಹತ್ ಕಲ್ಲು

1 min read

 

ಚಿಕ್ಕಮಗಳೂರು.: ವೀರಶೈವ ಸಮುದಾಯದ ಪಂಚಪೀಠಗಳಲ್ಲೇ ಮೊದಲನೇ ಪೀಠವಾದ ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರಿನ ರಂಭಾಪುರಿ ಪೀಠದ ಆವರಣದಲ್ಲಿ ನಿರ್ಮಾಣವಾಗುತ್ತಿರುವ ರೇಣುಕಾಚಾರ್ಯರ ಏಕಶಿಲಾ ಮೂರ್ತಿ ನಿರ್ಮಾಣಕ್ಕೆ 250 ಟನ್ ತೂಕದ ಬೃಹತ್ ಕಲ್ಲು ರಂಭಾಪುರಿ ಮಠದ ಆವರಣಕ್ಕೆ ಆಗಮಿಸಿದೆ. ತುಮಕೂರು ಜಿಲ್ಲೆಯ ಮಡಕಶಿರಾ ಕ್ವಾರಿಯಿಂದ 250 ಟನ್ ತೂಕದ ಬೃಹತ್ ಶಿಲೆ ರಂಭಾಪುರಿ ಮಠದ ಆವರಣಕ್ಕೆ ಆಗಮಿಸಿದೆ. ರಂಭಾಪುರಿ ಮಠದ ಡಾ.ವೀರ ಸೋಮೇಶ್ವರ ಜಗದ್ಗುರುಗಳ ಆಶಯದಂತೆ ರಂಭಾಪುರಿ ಮಠದ ಆವರಣದಲ್ಲಿ 51 ಅಡಿ ಎತ್ತರದ ಬೃಹತ್ ಏಕಶಿಲಾ ಮೂರ್ತಿ ತಯಾರಾಗುತ್ತಿದೆ. ಈಗಾಗಲೇ ಮೂರ್ತಿ ನಿರ್ಮಾಣಕ್ಕೆ 100 ಹಾಗೂ 150 ಟನ್ ತೂಕದ ಪಾಣಿಪೀಠದ ಎರಡು ಬೃಹತ್ ಶಿಲೆಗಳು ರಂಭಾಪುರಿ ಮಠದ ಆವರಣಕ್ಕೆ ಆಗಮಿಸಿದ್ದು, ಮೂರ್ತಿ ನಿರ್ಮಾಣದ ಕಾರ್ಯ ಕೂಡ ಆರಂಭವಾಗಿದೆ. ಈ ಭಾರೀ ತೂಕದ ಬೃಹತ್ ಶಿಲೆ ನಿರ್ಮಾಣದ ಕಲ್ಲನ್ನ ಸಾಗಾಣಿಕೆಯ ಜವಾಬ್ದಾರಿಯನ್ನ ಬೆಂಗಳೂರಿನ ಶ್ರೀಧರ್ ಬಾಬು ತಂಡ ಹೊತ್ತಿದೆ. 112 ಚಕ್ರದ ಉದ್ದವಾದ ಲಾರಿಯಲ್ಲಿ ಈ ಕಲ್ಲನ್ನ ರಂಭಾಪುರಿ ಮಠದ ಆವರಣಕ್ಕೆ ತರುವುದೇ ಶ್ರೀಧರ್‍ಬಾಬು ತಂಡಕ್ಕೆ ದೊಡ್ಡ ಸವಾಲಾಗಿತ್ತು. ಮೂರ್ತಿ ನಿರ್ಮಾಣಕ್ಕೆ ಅಗತ್ಯವಿರುವ 300 ಟನ್ ತೂಕದ 4ನೇ ಶಿಲೆಯೂ ಶೀಘ್ರದಲ್ಲೇ ರಂಭಾಪುರಿ ಮಠದ ಆವರಣಕ್ಕೆ ಆಗಮಿಸಲಿದೆ. 51 ಅಡಿ ಎತ್ತರದ ರೇಣುಕಾಚಾರ್ಯ ಸುಂದರ ಮೂರ್ತಿಯನ್ನ ಕೆತ್ತನೆಯ ಜವಾಬ್ದಾರಿಯನ್ನ ಬೆಂಗಳೂರಿನ ಅಶೋಶ್ ಗುಡಿಗಾರ, ಗೌತಮ ಗುಡಿಗಾರ ಹಾಗೂ ಸಹ ಕುಶಲಕರ್ಮಿಗಳು ಹೊತ್ತಿದ್ದಾರೆ. ರಂಭಾಪುರಿ ಮಠದ ಆವರಣದಲ್ಲಿ ಮೂರ್ತಿ ಕೆತ್ತನೆಯ ಕಾರ್ಯ ನಡೆಯುತ್ತಿದ್ದು ಪೀಠದ ಆವರಣದಲ್ಲಿ ಶೀಘ್ರವೇ 51 ಅಡಿಯ ರೇಣುಕಾಚಾರ್ಯ ಮೂರ್ತಿ ತಲೆ ಎತ್ತಲಿದೆ

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!