May 5, 2024

MALNAD TV

HEART OF COFFEE CITY

9 ನೇ ಬಾರಿ ಬಿಹಾರ ಸಿ.ಎಂ ಆಗುತ್ತಿರುವ ನಿತೀಶ್ ಕುಮಾರ್ ಜೀವನ 9 ಕುತೂಹಲ ಅಂಶ

1 min read

 

 

*ಮಲ್ನಾಡ್ ಟಿವಿ ವಿಶೇಷ ವರದಿ*

 

ಬಿಹಾರದ ಮುಖ್ಯಮಂತ್ರಿ ಆಗಿ ನಿತೀಶ್ ಕುಮಾರ್ ಅವರು ಇಂದು 9 ನೇ ಬಾರಿಗೆ ಅಧಿಕಾರ ಸ್ವೀಕರಿಸಿದ್ದಾರೆ. 

 

 ಈ ಸಂದರ್ಭದಲ್ಲಿ ನಿತೀಶ್ ಕುಮಾರ್ ಬದುಕಿನ 9 ಕುತೂಹಲಕಾರಿ ಅಂಶಗಳನ್ನು ಪ್ರಶ್ನೋತ್ತರ ರೂಪದಲ್ಲಿ ನಾವು ನಿಮ್ಮ ಮುಂದೆ ಇಡುತ್ತಿದ್ದೇವೆ. 

 

*ಪ್ರಶ್ನೆ 1: ನಿತೀಶ್ ಕುಮಾರ್ ಹುಟ್ಟಿದ್ದು ಯಾವಾಗ ಮತ್ತು ಅವರ ತಂದೆ ತಾಯಿ ಯಾರು?*

ಉತ್ತರ: ನಿತೀಶ್ ಕುಮಾರ್ 1951ರ ಮಾರ್ಚ್ 1 ರಂದು ಬಿಹಾರದ ಭಕ್ತಿಯಾರ್ ಪುರದಲ್ಲಿ ಜನಿಸಿದರು. ಅವರ ತಂದೆ ಕವಿರಾಜ್ ರಾಮ್ ಲಖನ್ ಸಿಂಗ್. ತಾಯಿ ನೇಪಾಳ ಮೂಲದ ಪರಮೇಶ್ವರಿ ದೇವಿ. 

 

*ಪ್ರಶ್ನೆ 2: ನಿತೀಶ್ ಕುಮಾರ್ ಅವರ ತಂದೆ ತಾಯಿ ಹಾಗೂ ಸ್ನೇಹಿತರು ಅವರಿಗೆ ಇಟ್ಟಿದ್ದ ಮುದ್ದಿನ ಹೆಸರು ಏನು?*

ಉತ್ತರ: ನಿತೀಶ್ ಕುಮಾರ್ ಅವರಿಗೆ ಅವರ ತಂದೆ ತಾಯಿ ಹಾಗೂ ಸ್ನೇಹಿತರು ಪ್ರೀತಿಯಿಂದ ಮುನ್ನ ಎಂದು ಕರೆಯುತ್ತಿದ್ದರು. 

 

*ಪ್ರಶ್ನೆ 3: ನಿತೀಶ್ ಅವರ ಶಿಕ್ಷಣ ಅರ್ಹತೆ ಏನು?*

ಉತ್ತರ: ನಿತೀಶ್ ಕುಮಾರ್ ಅವರು ಎನ್ ಐಟಿ ಪಾಟ್ನಾ ದ ಬಿಹಾರ್ ಕಾಲೇಜ್ ಆಫ್ ಎಂಜಿನಿಯರಿಂಗ್ ಸಂಸ್ಥೆಯಿಂದ ಎಲೆಕ್ಟ್ರಿಕ್ ಇಂಜಿನಿಯರಿಂಗ್ ಪದವಿ ಪಡೆದಿದ್ದಾರೆ. 

 

*ಪ್ರಶ್ನೆ 4: ನಿತೀಶ್ ಕುಮಾರ್ ಅವರ ವೃತ್ತಿಜೀವನ ಆರಂಭವಾಗಿದ್ದು ಎಲ್ಲಿಂದ?*

ಉತ್ತರ: ನಿತೀಶ್ ಕುಮಾರ್ ಅವರು ಬಿಹಾರ ರಾಜ್ಯ ಎಲೆಕ್ಟ್ರಿಸಿಟಿ ಬೋರ್ಡ್ ನಲ್ಲಿ ತಮ್ಮ ಉದ್ಯೋಗ ಆರಂಭಿಸಿದ್ದರು. ಆದರೆ ಅಲ್ಲಿ ಸರಿ ಬಾರದೆ ನಂತರ ರಾಜಕೀಯ ಪ್ರವೇಶಿಸಿದರು. 

 

*ಪ್ರಶ್ನೆ 5: ನಿತೀಶ್ ಅವರ ಪತ್ನಿಯ ಹೆಸರೇನು? ಅವರು ಏನು ಮಾಡುತ್ತಾರೆ?*

ಉತ್ತರ: ನಿತೀಶ್ ಕುಮಾರ್ ಅವರು 1973ರ ಫೆಬ್ರವರಿ 22ರಂದು ಮಂಜು ಕುಮಾರಿ ಸಿನ್ನಾ ಅವರನ್ನು ವಿವಾಹವಾಗಿದ್ದರು. ಅವರಿಗೆ ಓರ್ವ ಪುತ್ರನಿದ್ದಾನೆ. ದುರದೃಷ್ಟವಶಾತ್ 2007ರ ಮೇ 14ರಂದು ಮಂಜು ಸಿನ್ನಾ ಅವರು ನವದೆಹಲಿಯಲ್ಲಿ ಅನಾರೋಗ್ಯಕ್ಕೆ ತುತ್ತಾಗಿ ಅಸುನೀಗಿದರು. 

 

*ಪ್ರಶ್ನೆ 6: ನಿತೀಶ್ ಕುಮಾರ್ ತಮ್ಮ ಮೊದಲನೇ ಚುನಾವಣೆ ಎದುರಿಸಿದ್ದು ಯಾವಾಗ?*

ಉತ್ತರ: ತಮ್ಮ ಮೊದಲನೇ ಚುನಾವಣೆಯನ್ನು 1985 ರಲ್ಲಿ ಹರ್ನೌತ್ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದಿದ್ದರು.

 

*ಪ್ರಶ್ನೆ 7: ಇಂದಿನ ಪ್ರಮಾಣ ವಚನವನ್ನು ಸೇರಿದಂತೆ ನಿತೀಶ್ ಕುಮಾರ್ ಒಟ್ಟು ಎಷ್ಟು ಬಾರಿ ಬಿಹಾರದ ಮುಖ್ಯಮಂತ್ರಿ ಆಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ?*

ಉತ್ತರ: 2024ರ ಪ್ರಮಾಣ ವಚನವನ್ನು ಕೂಡ ಸೇರಿ, ನಿತೀಶ್ ಕುಮಾರ್ ಒಟ್ಟು ಒಂಬತ್ತು ಬಾರಿ ಬಿಹಾರದ ಮುಖ್ಯಮಂತ್ರಿ ಆಗಿ ಅಧಿಕಾರ ಸ್ವೀಕಾರ ಮಾಡಿದ್ದಾರೆ. 

 

*ಪ್ರಶ್ನೆ 8: ಹಿಂದಿನ ಒಟ್ಟು 8 ಅವಧಿಗಳನ್ನು ಸೇರಿಸಿ, ನಿತೀಶ್ ಕುಮಾರ್ ಒಟ್ಟು ಎಷ್ಟು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿದ್ದಾರೆ? ಅತ್ಯಂತ ಕಡಿಮೆ ಅವಧಿಗೆ ಯಾವಾಗ ಮುಖ್ಯಮಂತ್ರಿಯಾಗಿದ್ದರು?*

ಉತ್ತರ: ನಿತೀಶ್ ಕುಮಾರ್ ಒಟ್ಟು 15 ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಅಧಿಕಾರ ಅನುಭವಿಸಿದ್ದಾರೆ. 

2000ನೇ ಇಸವಿಯಲ್ಲಿ ತಮ್ಮ ಮೊದಲ ಅವಧಿಯಲ್ಲಿ ಮುಖ್ಯಮಂತ್ರಿ ಆಗಿದ್ದಾಗ ಅವರು ಕೇವಲ ಏಳು ದಿನಕ್ಕೆ ಮಾತ್ರ ಮುಖ್ಯಮಂತ್ರಿ ಆಗಿ ಅಧಿಕಾರ ನಡೆಸಿದರು. ಇದು ಅವರ ಅತ್ಯಂತ ಕಡಿಮೆ ಮುಖ್ಯಮಂತ್ರಿ ಅವಧಿಯಾಗಿದೆ. 

 

*ಪ್ರಶ್ನೆ 9: 2013ರಲ್ಲಿ ನಿತೀಶ್ ಕುಮಾರ್ ಎನ್ ಡಿ ಎ ಜೊತೆಗಿನ ತಮ್ಮ 17 ವರ್ಷಗಳ ಸಂಬಂಧಕ್ಕೆ ಇತಿಶ್ರೀ ಹಾಡಲು ಕಾರಣ ಏನು?*

ಉತ್ತರ: ಆ ಸಂದರ್ಭದಲ್ಲಿ ಎನ್.ಡಿ.ಎ ಪ್ರಧಾನಿ ಅಭ್ಯರ್ಥಿಯಾಗಿ ನರೇಂದ್ರ ಮೋದಿ ಅವರ ಹೆಸರನ್ನು ಸೂಚಿಸಿದ್ದಕ್ಕೆ ಅಸಮಾಧಾನ ಗೊಂಡ ನಿತೀಶ್ ಕುಮಾರ್ ಎನ್ ಡಿ ಎ ಜೊತೆಗಿನ ತಮ್ಮ ಸಂಬಂಧ ಮುರಿದುಕೊಂಡರು. 

 

……

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!