May 5, 2024

MALNAD TV

HEART OF COFFEE CITY

ಎಸ್.ಬಿ.ಐ ಬ್ಯಾಂಕ್ ನ 67 ನೇ ಸಂಸ್ಥಾಪನ ದಿನ

1 min read

ಚಿಕ್ಕಮಗಳೂರು: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ 67ನೇ ಸಂಸ್ಥಾಪನಾ ದಿನವನ್ನು ನಗರದ ಎಸ್‍ಬಿಐ ಕಚೇರಿಯಲ್ಲಿ ಆಚರಿಸಲಾಯಿತು. ಒಕ್ಕಲಿಗರ ಸಂಘದ ಜಿಲ್ಲಾ ಗೌರವ ಕಾರ್ಯದರ್ಶಿ ಮಾಡ್ಲಾಪ್ರಕಾಶ್ ಕಾರ್ಯಕ್ರಮದಲ್ಲಿ ಪಾ ಲ್ಗೊಂಡು ಮಾತನಾಡಿ, ದೇಶದ ಆರ್ಥಿಕ ವ್ಯವಸ್ಥೆಯ ಕೇಂದ್ರಬಿಂದು ಹಾಗೂ ಆರ್ಥಿಕ ಶ್ರಮದ ಮೌಲ್ಯವನ್ನು ಲೆಕ್ಕಹಾಕಿ ಕ್ರೋಢಿಕರಿಸುವವರು ಬ್ಯಾಂಕರ್ಸ್‍ಗಳು. ಲಾಭ-ನಷ್ಟವನ್ನು ಲೆಕ್ಕದ ಮೂಲಕ ಆರ್ಥಿಕತೆಯ ಒಂದು ಭಾಗವಾಗಿ ಕೆಲಸ ನಿರ್ವಹಿಸಲಿದ್ದಾರೆ. ಅವರ ಪರಿಶ್ರಮ ಸ್ಮರಿಸುವಂತದ್ದು ಎಂದರು.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ದೇಶದ ಅತ್ಯಂತ ಹಳೆಯ ವಾಣಿಜ್ಯ ಬ್ಯಾಂಕ್ 1806ರಲ್ಲಿ ಬ್ಯಾಂಕ್ ಆಫ್ ಕಲ್ಕತ್ತಾ ಎಂದು ಸ್ವಾತಂತ್ರ್ಯ ಪೂರ್ವದಲ್ಲಿ ಸ್ಥಾಪಿಸಲಾಯಿತು. ಎಸ್‍ಬಿಐ ಬ್ಯಾಂಕ್ 1955ರಲ್ಲಿ ಸಂಸ್ಥಾಪನೆಗೊಳ್ಳುವ ಮೂಲಕ ಅಂದಿನಿಂದ ಆಚರಿಸಲಾಗುತ್ತಿದೆ ಎಂದರು.

ಚಿಕ್ಕಮಗಳೂರು ಎಸ್‍ಬಿಐ ಬ್ಯಾಂಕಿನ ಮುಖ್ಯ ವ್ಯವಸ್ಥಾಪಕ ಬೋಪಯ್ಯ ಮಾತನಾಡಿ, ಎಸ್‍ಬಿಐ ಬ್ಯಾಂಕಿನಿಂದ ಗ್ರಾಹಕರಿಗೆ ವಾಹನ, ಗೃಹ, ಕೃಷಿ ಸಾಲ ಸೇರಿದಂತೆ ಹಲವಾರು ವಿಧದಲ್ಲಿ ಸಾಲಸೌಲಭ್ಯಗಳನ್ನು ಒದಗಿಸಲಿದ್ದು ಗ್ರಾಹಕರು ಇದರ ಸದುಪಯೋಗ ಪಡೆದು ಕೊಳ್ಳುವಂತೆ ತಿಳಿಸಿದರು.

ಈ ಸಂದರ್ಭದಲ್ಲಿ ರಿಜಿನಲ್ ಕಮಿಷನರ್, ಚಿಕ್ಕಮಗಳೂರು ತಹಸೀಲ್ದಾರ್ ವಿನಯ್ ಸಾಗರ್, ರಿಜೀನಲ್ ಮ್ಯಾನೇಜರ್ ಕನ್ನಯ್ಯಗೋಪಾಲ್, ಸಯ್ಯದ್ ನಿಜಾಮುದ್ದೀನ್ ಇದ್ದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!