May 19, 2024

MALNAD TV

HEART OF COFFEE CITY

ಭಾರತವನ್ನು ವಿಶ್ವಗುರುವನ್ನಾಗಿಸುವ ಶಕ್ತಿ ಯುವಜನತೆಗಿದೆ –ಸಚಿವೆ ಶೋಭಾ ಕರಂದ್ಲಾಜೆ

1 min read

ವಿದ್ಯಾರ್ಥಿಗಳು ತಾವುಆಯ್ಕೆ ಮಾಡಿಕೊಂಡ ವಿಷಯಗಳಲ್ಲಿ ಉತ್ತಮ ಸಾಧನೆ ಮಾಡುವ ಮೂಲಕ ದೇಶ ಹಾಗೂ ಪೋಷಕರು, ಗುರುಗಳ ಋಣತೀರಿಸುವ ಕೆಲಸ ಮಾಡಬೇಕುಎಂದುಕೇಂದ್ರ ಸಚಿವೆ ಶೋಭಾಕರಂದ್ಲಾಜೆಕರೆ ನಿಡಿದರು.ಅವರು  ನಗರದಐಡಿಎಸ್‌ಜಿ ಸರ್ಕಾರಿಕಾಲೇಜಿನಲ್ಲಿ ನೆಹರೂಯುವಕೇಂದ್ರ ಹಾಗೂ ಜಿಲ್ಲಾಡಳಿತ, ವಿವಿಧ ಸಂಘಟನೆಗಳ ವತಿಯಿಂದಆಯೋಜಿಸಲಾಗಿದ್ದಜಿಲ್ಲಾ ಮಟ್ಟದಯುವಜನೋತ್ಸವಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಇಂದಿನ ವಿದ್ಯಾರ್ಥಿ, ವಿದ್ಯಾರ್ಥಿನಿಯರುದೇಶದ ಭವಿಷ್ಯವನ್ನುರೂಪಿಸುವ ಪ್ರಜೆಗಳು, ನಮ್ಮ ಮಕ್ಕಳು ಮುಂದೆಉನ್ನತ ಮಟ್ಟಕ್ಕೇರಬೇಕುಎನ್ನುವ ನಿರೀಕ್ಷೆ ಪ್ರಿಯೊಬ್ಬ ಪೋಷಕರದ್ದಾಗಿರುತ್ತದೆ.ನಾವು ಪಟ್ಟಕಷ್ಟವನ್ನು ನಮ್ಮ ಮಕ್ಕಳು ಪಡಬಾರದುಎನ್ನುವ ಸಂಕಲ್ಪಅವರದ್ದಾಗಿರುತ್ತದೆ.ಈ ಕಾರಣಕ್ಕೆತುಂಬಾಕಷ್ಟಪಟ್ಟು ಶಾಲೆ, ಕಾಲೇಜಿಗೆ ಕಳಿಸುತ್ತಿರುತ್ತಾರೆ.ಇಂದು ನಮ್ಮದೇಶದಲ್ಲಿಎಲ್ಲವೂಇದೆ.ನಮ್ಮ ಒಳ್ಳೆ ಕೆಲಸದಿಂದ ನಮ್ಮದೇಶ, ಗುರು, ತಂದೆ, ತಾಯಿಯಂದಿರಋಣವನ್ನುತೀರಸಬಹುದುಎಂದರು.ನೀವು ಯಾವುದೇಕ್ಷೇತ್ರವನ್ನುಆಯ್ಕೆ ಮಾಡಿಕೊಂಡರೂ ಸರಿಯೇ ಕೇವಲ ಪುಸ್ತಕದ ಹುಳುಗಳಾಗದೆ ಎಲ್ಲಕ್ರೀಡಾ ಸ್ಪರ್ಧೆ ಚಟುವಟಿಕೆಗಳಲ್ಲಿ ಭಾಗವಹಿಸಬೇಕು.ಬಹುಮಾನ ಗಳಿಸುವುದು ಮುಖ್ಯವಲ್ಲ. ಸ್ಪರ್ಧೆ ಮಾಡುವುದುಅವಶ್ಯ.ಭಾರತ ಸುವರ್ಣ ಸ್ವಾತಂತ್ರೊ್ಯೀತ್ಸವವನ್ನು ಆಚರಿಸಿಕೊಳ್ಳುವ ಸಂದರ್ಭಲ್ಲಿ ವಿಶ್ವದಲ್ಲಿ ನಂ.1 ಆಗಬೇಕು ಇದು ನಮ್ಮಆಶಯವಾಗಬೇಕಎಂದರು.ಭಾರತಎಂದರೆ, ಹಾವಾಡಿಗರು, ಬಡವರು, ಸಾಲಗಾರದೇಶಎನ್ನುವ ಮಾತಿತ್ತು.ಇಂದು ಅದಿಲ್ಲ. ಭಾರತದ ಪ್ರಧಾನಿ ವಿದೇಶಕ್ಕೆ ಹೋದರೆಎದ್ದು ನಿಂತುಯಾರೂಗೌರವಕೊಡುತ್ತಿರಲಿಲ್ಲ. ಇಂದು ಪ್ರಧಾನಿಗಳು ಯಾವುದೇದೇಶಕ್ಕೆ ಹೋದರೂಆದೇಶದ ಪ್ರಧಾನಿ ಏರ್‌ಪೋರ್ಟ್ಗೆ ಬಂದು ಸ್ವಾಗತಿಸುತ್ತಾರೆಎಂದರೆ ನಮ್ಮದೇಶಕ್ಕೆ ಸಿಗುತ್ತಿರುವ ಗೌರವಎಂದರು.ವಿದ್ಯಾರ್ಥಿಗಳುಯಾವುದೇಕ್ಷೇತ್ರವನ್ನುಆಯ್ಕೆ ಮಾಡಿಕೊಂಡರೂಅದರಲ್ಲಿಚೆನ್ನಾಗಿಕಲಿತು ಯಶಸ್ವಿಯಾಗಬೇಕು.

 

ಅದರಲ್ಲಿ ನಂಬರ್‌ಒನ್ ಆಗಬೇಕು.ದೇಶದ ಬಗ್ಗೆ ಯೋಚಿಸಬೇಕು.ತಮ್ಮಲ್ಲಿರುವಯುಕ್ತಿಯನ್ನು ಬಳಕೆ ಮಾಡಿಕೊಳ್ಳಬೇಕು ಎಂದರು.ಶಾಸಕ ಎಚ್.ಡಿ.ತಮ್ಮಯ್ಯ ಮಾತನಾಡಿ, ಸ್ಪರ್ಧೆಗಳಲ್ಲೆ ಗೆದ್ದವರು ಬೀಗದೆ, ಸೋತವರು ಬಾಗದೆ ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸಬೇಕು ಎಂದು ತಿಳಿಸಿದರು.ನೆಹರೂಯುವಕೇಂದ್ರದ ಸಮನ್ವಯಾಧಿಕಾರಿಅಭಿಷೇಕ್‌ಚಾವರೆ ಪ್ರಾಸ್ತಾವಿಕವಾಗಿ ಮಾತನಾಡಿದರು. ನಗರಸಭೆಅಧ್ಯಕ್ಷ ವರಸಿದ್ದಿ ವೇಣುಗೋಪಾಲ್, ಜಿಲ್ಲಾಧಿಕಾರಿ ಮೀನಾ ನಾಗರಾಜ್, ಜಿ.ಪಂ. ಸಿಇಓ ಗೋಪಾಲಕೃಷ್ಣ, ಕಾಲೇಜಿನ ಪ್ರಾಂಶುಪಾಲ ಡಾ.ರಮೇಶ್‌ಇತರರು ಭಾಗವಹಿಸಿದ್ದರು.
ಜಿಲ್ಲೆಯ ವಿವಿಧ ಕಾಲೇಜುಗಳ ವಿದ್ಯಾರ್ಥಿ, ವಿದ್ಯಾರ್ಥಿನಿಯರುರಾಜ್ಯ, ದೇಶದ ಸಂಸ್ಕೃತಿ, ಸಂಪ್ರದಾಯಗಳನ್ನು ಬಿಂಬಿಸುವ ವಿವಿಧ ನೃತ್ಯ, ಗೀತಗಾಯನಇತರೆ ಸ್ಪರ್ಧೆಗಳಲ್ಲಿ ಭಾಗವಹಿಸಿದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!