May 5, 2024

MALNAD TV

HEART OF COFFEE CITY

ಕರ್ನಾಟಕದಿಂದ ಹೊರಗೆ ಸಿದ್ದರಾಮಯ್ಯನವರನ್ನ ಗುರುತಿಸೋರ್ಯಾರು…?

1 min read

ಮಾಜಿ ಸಿಎಂ ಸಿದ್ದರಾಮಯ್ಯನವರು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರಿಗೆ ಕ್ಷಮೆ ಕೇಳಲಿ ನಾನೂ ಕೇಳುತ್ತೇನೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು, ದೇಶದ ಪ್ರಧಾನಿಯನ್ನ ಹೆಬ್ಬಟ್ಟು ಎಂದಿದ್ದಕ್ಕೆ, ವಯಸ್ಸಿನ ಅಂತರ ನೋಡದೇ ಬಿ.ಎಸ್.ವೈ ವಿರುದ್ಧ ಮಾತನಾಡಿದ್ದಕ್ಕೆ, ಬಸವರಾಜ್ ಬೊಮ್ಮಾಯಿ ಸಿಎಂ ಸ್ಥಾನದಲ್ಲಿದ್ದಾರೆ ಅನ್ನೋದನ್ನೂ ಮರೆತು ಏಕವಚನದಲ್ಲಿ ಮಾತನಾಡಿದ್ದಕ್ಕೆ, ಈಶ್ವರಪ್ಪ ಬಗ್ಗೆ ಮಾತನಾಡಿದ್ದಕ್ಕೆ ಹಾಗೂ ಅವರಿಗೆ ರಾಜಕೀಯ ಅಸ್ವಿತ್ವ ಕಲ್ಪಿಸಿಕೊಟ್ಟ ದೇವೇಗೌಡರ ಬಗ್ಗೆ ಮಾತನಾಡಿದ್ದಕ್ಕೆ ಎಲ್ಲದಕ್ಕೂ ಬಹಿರಂಗ ಕ್ಷಮೆ ಕೇಳಲಿ ನಾನೂ ಕೇಳುತ್ತೇನೆ ಎಂದರು. ಇಂದು ಚಿಕ್ಕಮಗಳೂರು ನಗರದಲ್ಲಿ ಸಿ.ಟಿ.ರವಿ ಸಿದ್ದು ವಿರುದ್ಧ ಮಾಡಿರುವ ಟ್ವಿಟ್ ವಿರುದ್ಧ ಕುರುಬ ಸಮುದಾಯ ಆಕ್ರೋಶ ಹೊರಹಾಕಿ ಪ್ರತಿಭಟನೆ ನಡೆಸಿದರು.

ಈ ವೇಳೆ ಮಾತನಾಡಿದ ಅವರು, ಕರ್ನಾಟಕದಿಂದ ಹೊರಗೆ ಸಿದ್ದರಾಮಯ್ಯನವರನ್ನ ಗುರುತಿಸುವರರು ಯಾರು. ಜಗತ್ತಿನ ಬಹತೇಕ ದೇಶಗಳಲ್ಲಿ ಮೋದಿಯನ್ನ ಆತ್ಮೀಯವಾಗಿ ಸ್ವಾಗತಿಸ್ತಾರೆ. 14 ದೇಶ ತಮ್ಮ ಅತ್ಯುನ್ನತ ನಾಗರೀಕ ಪ್ರಶಸ್ತಿಯನ್ನ ಮೋದಿಗೆ ಕೊಟ್ಟಿದ್ದಾರೆ. ಸಿದ್ದರಾಮಯ್ಯಗೆ ಕೊಟ್ಟಿದ್ದಾರಾ ಎಂದು ಪ್ರಶ್ನಿಸಿದ ಅವರು, ಅಂತಹಾ ಪ್ರಧಾನಿ ಬಗ್ಗೆ ಹೆಬ್ಬೆಟ್ಟು ಅಂತ ಹೇಳೋರ್ದು ಸಂಸ್ಕøತಿನಾ ಎಂದು ಪ್ರಶ್ನಿಸಿದರು. ಕಂಬಳಿ ಹೊದಿಯೋದು ಜಾತಿಗೆ ಕಾರಣ ಅನ್ನೋದಾದ್ರೆ, ಟೋಪಿ ಹಾಕೋಕು ಜಾತಿ ಇರಬೇಕಲ್ವಾ ಎಂದು ಹೇಳಿದ್ದೆ. ನಾನು ಆರೋಪ ಮಾಡಿಲ್ಲ, ಸಿದ್ದರಾಮಯ್ಯ ಭಾವಿಸಿರುವಂತೆ ಎಂದು ಹೇಳಿ, ನಾನು ಹೇಳಿಕೆ ನೀಡಿದ್ದೆ. ನಾನು ಕುರುಬ ಸಮುದಾಯದ ಬಗ್ಗೆ ಮಾತನಾಡಿಲ್ಲ, ಕುರುಬರು ನನ್ನ ಜೊತೆಯೇ ಇದ್ದಾರೆ ಎಂದರು. ಕುರುಬರು ನಂಬಿಕಸ್ಥರು, ರಾಯಣ್ಣ, ಕನಕದಾಸರ ಬಗ್ಗೆ ನಂಬಿಕೆ ಇರೋರು ಹಿಂದುತ್ವದ ಬಗ್ಗೆಯೂ ನಂಬಿಕೆ ಇಟ್ಟಿರುತ್ತಾರೆ. ಕಾಂಗ್ರೆಸ್ ಕರೆದರೆ ಯಾರೂ ಬರಲ್ಲ ಎಂಬ ಕಾರಣಕ್ಕೆ ಜಾತಿಯನ್ನ ಮುಂದಿಟ್ಟಿದ್ದಾರೆ. ಅದು ನಡೆಯುವುದಿಲ್ಲ. ಸಿದ್ದರಾಮಯ್ಯ ಮೋದಿ, ಯಡಿಯೂರಪ್ಪ, ಈಶ್ವರಪ್ಪ, ಬೊಮ್ಮಾಯಿ, ದೇವೇಗೌಡರಿಗೆ ಸಿದ್ದರಾಮಯ್ಯ ಕ್ಷಮೆ ಕೇಳಲಿ. ನನ್ನದು ತಪ್ಪಾಗಿದ್ರೆ ಕ್ಷಮೆ ಕೇಳೋಕೆ ನನಗೆ ಯಾವ ಸಂಕೋಚವಿಲ್ಲ ಎಂದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!