May 18, 2024

MALNAD TV

HEART OF COFFEE CITY

ಬಿಟ್ ಕಾಯಿನ್ ನಲ್ಲಿ ಯಾರೆ ಭಾಗಿಯಾಗಿದ್ದರು ಸರ್ಕಾರ ಕಠಿಣ ಕ್ರಮಕೈಗೊಳ್ಳಲಿದೆ- ಸಿ.ಟಿ.ರವಿ

1 min read

ಬಿಟ್ ಕಾಯಿನ್ ಶಬ್ಧ ಕೇಳಿದ್ಧೇ 29 ಅಕ್ಟೋಬರ್ ನಂತರ ಅದಕ್ಕೂ ಮೊದಲು ನಾನು ಕೇಳಿಲ್ಲ, ಬಿಟ್ ಕಾಯಿನ್ಲ್ಲಿ ಯಾರೆ ಭಾಗಿಯಾಗಿದ್ದರು ಕಠಿಣ ಕ್ರಮಕೈಗೊಳ್ಳಲಿದೆ. ನಮ್ಮ ಪಕ್ಷದ ಮತ್ತು ಸರ್ಕಾರದ ನಿಲುವು ಒಂದೇಯಾಗಿದೆ. ಆರೋಪ ಮಾಡಿದವರು ದಾಖಲೆಗಳನ್ನು ಬಿಡುಗಡೆ ಮಾಡಲಿ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ

ಬೆಂಗಳೂರಿನಲ್ಲಿ 2ದಿನಗಳ ಹಿಂದೇ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಅಲ್ಪಸಂಖ್ಯಾತರ ಮುಖಂಡರೋರ್ವ ಟಿಪ್ಪು ವಂಶಸ್ತರು ಎಂದಿಗೂ ತಲೆ ಬಾಗಿಲ್ಲ, ತಲೆ ತೆಗೆಯಲು ಬರುತ್ತೇ ಎಂದು ಹೇಳಿಕೆ ನೀಡಿದ್ದು ಸಿದ್ಧರಾಮಯ್ಯನವರು ಮೈಸೂರು ಅರಸರ ಜೊತೆಗೂ ಅಥವಾ ಮೈಸೂರು ಅರಸರ ವಿರೋಧಿಗಳ ಜೊತೆಗೋ ಎಂದು ಸ್ಪಷ್ಟಪಡಿಸಬೇಕೆಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಪ್ರಶ್ನಿಸಿದರು.

ಆ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ, ಸಿದ್ಧರಾಮಯ್ಯ ಇದ್ದ ವೇದಿಕೆ ಮೇಲೆ ಈ ಹೇಳಿಕೆ ನೀಡಿದ್ದು ಇದನ್ನು ಅವರು ಸ್ಪಷ್ಟಪಡಿಸಬೇಕು ಎಂದರು. ಟಿಪ್ಪು ಮತ್ತು ಆತನ ವಂಶಸ್ಥರು ಮೈಸೂರು ಅರಸರಿಂದ ಮೋಸದಿಂದ ರಾಜ್ಯ ಕಿತ್ತುಕೊಂಡು ಪಟ್ಟಕ್ಕೆ ಏರಿದವನು. ಸಂಘರ್ಷ ಇದ್ದದ್ದು ಮೈಸೂರು ಅರಸರಿಗೂ ಮತ್ತು ಟಿಪ್ಪುವಿಗೂ ಹಾಗಾದ್ರೇ ತಲೆಕಡಿಬೇಕು ಎಂದು ಇದ್ದದ್ದು ಯಾರನ್ನಾ ಎಂದರು. ನಾವು ಮೈಸೂರು ಅರಸರ ಆಳ್ವಿಕೆಯನ್ನು ಗೌರವಿಸುವ ಜನರು. ಇಂತಹ ಹೇಳಿಕೆ ಕಾಂಗ್ರೆಸ್ನ ತಾಲಿಬಾನಿ ಜನರ ಮನಸ್ಥಿತಿಯನ್ನು ಬೆಳೆಸುತ್ತಿದೆ ಎಂಬುದಕ್ಕೆ ನಿದರ್ಶನವಾಗಿದ್ದು, ಇಂತಹ ಮನೋಭಾವದ ಜನರನ್ನು ಬೆಳೆಸಿ ದೇಶವಿಭಜನೆಗೂ ಕಾರಣವಾಯಿತು. ಈಗ ಮತ್ತೇ ಅದೇ ತಾಲಿಬಾನಿ ಮನೋಭಾಗದ ಜನರನ್ನು ಬೆಳೆಸುತ್ತಿದ್ದಾರೆ. ಖರ್ಗೆ ಎದುರಿಗೆ ಹೇಳಿಕೆ ನೀಡಿದಾಗಲೂ ಅವರು ಪ್ರತಿಕ್ರಿಯೆ ಕೊಡದಿರುವುದು ಕನ್ನಡ ನಾಡಿಗೆ ಕಾಂಗ್ರೆಸ್ ಬಗೆಯು ತ್ತಿರುವ ಅಪಚಾರ ಎಂದರು. ಜಿಲ್ಲೆಯ ಮಡಿಕಲ್ ಕಾಲೇಜಿಗೆ ಸಂಬಂಧಿಸಿದಂತೆ ಸಿಬ್ಬಂದಿಗಳ ನೇಮಕಕ್ಕೆ ಸಂದರ್ಶನ ಮೇರಿಟ್ ಮೇಲೆ ಆಯ್ಕೆ ಮಾಡಲಾಗಿದೆ. ಎಲ್ಲವನ್ನೂ ವಿಡಿಯೋ ರೆಕಾರ್ಡ್ ಮಾಡಲಾಗಿದೆ. ಆದರೆ ಕೆಲವು ದಲ್ಲಾಳಿಗಳು ಬೇರೆ ಬೇರೆಯವರ ಹೆಸರು ಹೇಳಿಕೊಂಡು ಹಣದ ವಸೂಲಿಗೆ ಹೊರಟಿದ್ದಾರೆ ಎಂಬುದು ನನ್ನ ಗಮನಕ್ಕೆ ಬಂದಿದೆ. ಯಾರು ಹಣ ಕೊಡಬಾರದು, ಯಾರಾ ದರೂ ಹಣ ಕೇಳಿದರೆ, ನನ್ನ ಕಚೇರಿ, ಸಿ.ಎಂ.ಕಚೇರಿ, ಆರೋಗ್ಯ ಖಾತೆ ಸಚಿವರಿಗೆ ಅಥವಾ ಜಿಲ್ಲಾಧಿಕಾರಿಗಳ ಗಮನಕ್ಕೆ ತರುವಂತೆ ಮನವಿ ಮಾಡಿದರು. ಕಾಫಿ ಬೆಳೆಯನ್ನು ಫಸಲ್ಭೀಮಾ ಯೋಜನೆಗೆ ಸೇರಿಸುವಂತೆ ಮನವಿ ಮಾಡಿದ್ದೇನೆ. ರಾಜ್ಯ ಸರ್ಕಾರದಿಂದ ಪ್ರಸ್ತಾವನೆ ಸಲ್ಲಿಸಿದಲ್ಲಿ ಸಾಧ್ಯವಿದೆ. ಈ ನಿಟ್ಟಿನಲ್ಲಿ ಪ್ರಯತ್ನ ಮಾಡ ಲಾಗುವುದು ಎಂದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!