April 28, 2024

MALNAD TV

HEART OF COFFEE CITY

ಶಿಸ್ತಿನ ಪಕ್ಷದ ಹುರಿಯಾಳುಗಳ ಮೇಲಾಟ : ಏಕವ್ಯಕ್ತಿ ಹಿಡಿತಕ್ಕೆ ಕಮಲ ತಲ್ಲಣ

1 min read

ಶಿಸ್ತಿನ ಪಕ್ಷ ಬಿಜೆಪಿಯಲ್ಲಿ ಇತ್ತೀಚೆಗೆ ನಡೆಯುತ್ತಿರುವ ಘಟನಾವಳಿಗಳು ಸಾಮಾನ್ಯ ಕಾರ್ಯಕರ್ತರು ಆತಂಕ ಹಾಗೂ ಕಳವಳ ಪಡುವಂತಾಗಿದೆ. ಕೋಟಿ ಕೋಟಿ ಕರಸೇವಕರ ಬೆವರ ಹನಿಯಿಂದ ಭವ್ಯ ರಾಮಮಂದಿರ ನಿರ್ಮಾಣವಾದರೂ ಕರ್ನಾಟಕದ ಮಟ್ಟಿಗಂತೂ ಏಕವ್ಯಕ್ತಿ ಪಕ್ಷವನ್ನು ಕಪಿಮುಷ್ಟಿಯಲ್ಲಿ ಹಿಡಿದಿರುವಂತಹ ರೀತಿಯಲ್ಲಿ ಬೆಳವಣಿಗೆಗಳು ನಡೆಯುತ್ತಿರುವುದು, ಅದರ ಜೊತೆಗೆ ನಿಷ್ಠಾವಂತ ಕಾರ್ಯಕರ್ತರ ಕಡೆಗಣನೆ ಪಕ್ಷವನ್ನು ನಂಬಿದವರ ಶೋಚನೀಯ ಪರಿಸ್ಥಿತಿ ಎಲ್ಲವು ಎತ್ತ ಸಾಗುತ್ತಿದೆ ಎಂಬ ಪ್ರಶ್ನೆ ಮೂಡುವಂತೆ ಮಾಡಿದೆ

ಬಿಜೆಪಿಯಲ್ಲಿ ಪಕ್ಷ ನಿಷ್ಟರಿಗೆ ಉಳಿಗಾಲವಿಲ್ಲ ಎಂಬುದು ಸಾಬೀತಾಗುವ ಕಾಲ ಸನ್ನಿಹಿತವಾದಂತೆ ಗೋಚರಿಸುತ್ತಿದೆ. ಎಂ.ಪಿ ಟಿಕೆಟ್ ಹಂಚಿಕೆಯಲ್ಲಿ ನಡೆಯುತ್ತಿರುವ ಗೊಂದಲಗಳು ಹತಾಶೆಯನ್ನು ಮೂಡಿಸುವಂತೆ ಕಾಣುತ್ತಿವೆ. ವಿಧಾನಸಭೆ ಚುನಾವಣೆಯಲ್ಲಿ ಸೋತ ನಂತರ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆಗೆ ಅಪೇಕ್ಷಿತರಾದ ಸಿ.ಟಿ ರವಿ ರಾಜಕೀಯವೆ ಅಂತ್ಯ ಗೊಳಿಸುವ ಹುನ್ನಾರವೊಂದು ಸದ್ದಿಲ್ಲದೇ ನಡೆಯುತ್ತಿರುವ ಗುಮಾನಿ ಕೇಳಿ ಬರುತ್ತಿದೆ. ಇದರಿಂದ ಬರಸಿಡುಲು ಬಡಿದಂತೆ ಎದ್ದು ನಿಂತಿರುವ ಸಿ.ಟಿ ರವಿ ಶತಾಯಗತಾಯ ಹೋರಾಟದ ಮೂಲಕವಾದರೂ ಫೀನಿಕ್ಸ್‌ ನಂತೆ ಎದ್ದುಬರಲು ಹಾತೊರೆಯುತ್ತಿದ್ದಾರೆ. ಪಕ್ಷಕ್ಕಾಗಿ ಟೊಂಕ ಕಟ್ಟಿ ನಿಂತಿದ್ದೆ ಅಲ್ಲ ಜೊತೆಗೆ ಪಕ್ಷಕ್ಕಾಗಿ ಮಾಡಿದ ತ್ಯಾಗ ಪರಿಗಣನೆಗೆ ಬಾರದಿರುವುದು ರವಿ ವೇದನೆಗೆ ಕಾರಣ ಎನ್ನಲಾಗುತ್ತಿದೆ. ಕುತಂತ್ರಕ್ಕೆ ಬಲಿಯಾಗುವ ಆತಂಕ ಕೂಡಾ ರವಿಗೆ ಕಾಡಿದ್ದು ಸುಳ್ಳಲ್ಲವಾದರು ಲೋಕಸಭೆ ಸ್ಪರ್ಧೆಗೆ ಶೋಭಾ ಕರಂದ್ಲಾಜೆಗೆ ಟಕ್ಕರ್ ಕೊಟ್ಟು ಟಿಕೆಟ್ ಪಡೆಯುವ ಪರಿಸ್ಥಿತಿ ಎದುರಾಗಿರುವುದು ದೊಡ್ಡ ಸವಾಲು ಎನ್ನುವುದು ಗೊತ್ತಿದೆ. ಆದರೆ ಸಿ.ಟಿ ರವಿ ಹೆಣೆಯಲು ಈ ಅವಕಾಶವನ್ನು ಬಿಡದ ವಿರೋಧಿಗಳು ಯಾವುದೇ ಕಾರಣಕ್ಕೂ ಲೋಕಸಭೆ ತಲುಪದಂತೆ ಅಡ್ಡಗಾಲು ಹಾಕಿ ಕುಳಿತ್ತಿದ್ದಾರೆ ಎನ್ನಲಾಗುತ್ತಿದೆ. ಇತ್ತ ರಾಜ್ಯ ರಾಜಕಾರಣವೂ ಇಲ್ಲ ರಾಷ್ಟ್ರ ರಾಜಕಾರಣವೂ ಇಲ್ಲ ಎಂಬುದನ್ನು ಅರಿತ ರವಿ ಈಗಲೇ ಪುಟಿದೇಳಲು ಹವಣಿಸುತ್ತಿದ್ದಾರೆ. ಇತ್ತ ಉಡುಪಿ-ಚಿಕ್ಕಮಗಳೂರು ಕ್ಷೇತ್ರಕ್ಕೆ ಮೈಸೂರು-ಕೊಡಗು ಸಂಸದ ಚಿಕ್ಕಮಗಳೂರು ಅಳಿಯ ಪ್ರತಾಪ್ ಸಿಂಹ ಕರೆತರಲು ಪ್ರಯತ್ನಗಳು ನಡೆಯುತ್ತಿರುವುದು ಸಹಾ ರಾಜಕೀಯ ಪಡಸಾಲೆಯಲ್ಲಿ ಅಂತೆ ಕಂತೆಗಳನ್ನು ಸೃಷ್ಟಿಸಿದೆ. ಆದರೆ ಇದಕ್ಕೂ ಕೊಕ್ಕೆ ಹಾಕುವವರು ಸೇಮ್ ಓಲ್ಡ್ ಸಿ.ಟಿ ರವಿ ವಿರೋಧಿಗಳೇ ಆಗಿದ್ದಾರೆ.
ಎರಡೂ ವಿಷಯಕ್ಕೂ ಸಾಮ್ಯದಂತೆ ಇಬ್ಬರೂ ನಾಯಕರನ್ನು ಹೆಣೆಯುತ್ತಿರುವ ಪಕ್ಷದ ಕೆಲ ಮುಖಂಡರು ಇಬ್ಬರನ್ನೂ ಬೆಳವಣಿಗೆ ಆಗದಂತೆ ತಡೆಯೊಡ್ಡಿದ್ದಾರೆ ಎನ್ನಲಾಗುತ್ತಿದೆ.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!