April 28, 2024

MALNAD TV

HEART OF COFFEE CITY

ಚಾರ್ಮಾಡಿ ಘಾಟಿಯಲ್ಲಿ ಸಂಚರಿಸುವವರೇ ಎಚ್ಚರ..ಎಚ್ಚರ… ಹಾಡ ಹಗಲೇ ಒಂಟಿ ಸಲಗ ಪ್ರತ್ಯಕ್ಷ

1 min read

ಚಿಕ್ಕಮಗಳೂರು: ಚಾರ್ಮಾಡಿ ಘಾಟಿಯಲ್ಲಿ ಸಂಚರಿಸುವವರು ಈಗಲಾದರೂ ಎಚ್ಚರದಿಂದ ಇರಲೇಬೇಕಾದ ಪರಿಸ್ಥಿತಿ ಎದುರಾಗಿದೆ, ಹಾಡಹಗಲೇ ಒಂಟಿ ಸಲಗ ಚಾರ್ಮಾಡಿ ರಸ್ತೆಯಲ್ಲಿ ಪ್ರತ್ಯಕ್ಷವಾಗಿದ್ದು ಘಾಟಿಯಲ್ಲಿ ಸಂಚಿರಿಸುವ ವಾಹನ ಸವಾರರು ಜೀವ ಕೈಯಲ್ಲಿಡಿದು ತೆರಳಬೇಕಿದೆ.

ಚಿಕ್ಕಮಗಳೂರಿನ ಮೂಡಿಗೆರೆಯ ಚಾರ್ಮಾಡಿ ಘಾಟಿಯಲ್ಲಿ ಸಂಚರಿಸುವವರು ಎಚ್ಚರದಿಂದ ಇರಬೇಕಿದೆ. ಹಾಡ ಹಗಲೇ ಜಿಲ್ಲೆಯ ಚಾರ್ಮಾಡಿ ಘಾಟಿಯ ರಸ್ತೆ ಮಧ್ಯೆ ಒಂಟಿ ಸಲಗ ಪ್ರತ್ಯಕ್ಷವಾಗಿದ್ದು, ಮೂಡಿಗೆರೆಯಿಂದ ಮಂಗಳೂರಿಗೆ ಸಂಪರ್ಕ ಕಲ್ಪಿಸುವ ಚಾರ್ಮಾಡಿ ಘಾಟಿಯ 8ನೇ ತಿರುವಿನ ಬಳಿ ಸಲಗವೊಂದು ಕಾಣಿಸಿಕೊಂಡಿದೆ. ರಸ್ತೆ ಮಧ್ಯೆ ಒಂಟಿ ಸಲಗ ಪ್ರತ್ಯಕ್ಷ ಹಿನ್ನೆಲೆ ಘಾಟಿಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಚಾರ್ಮಾಡಿಯ ಒಂದು ಬದಿ ಗುಡ್ಡ, ಮತ್ತೊಂದು ಬದಿ ಪ್ರಪಾತವಿದ್ದು, ಒಂಟಿ‌ ಸಲಗ ದಾಳಿಗೆ ಮುಂದಾದರೆ ತಪ್ಪಿಸಿಕೊಳ್ಳೋದು ಕಷ್ಟಸಾಧ್ಯ. ಒಂದು ವೇಳೆ ವಾಹನಕ್ಕೆ ಅಡ್ಡ ಬಂದರೆ ಗಾಡಿಯನ್ನ ವಾಪಸ್ ತೆಗೆಯೋದು ಸಹ ಅಷ್ಟು ಸುಲಭವಲ್ಲ ಆದ್ದರಿಂದ ಚಾರ್ಮಾಡಿ ಘಾಟ್ ನಲ್ಲಿ ರಾತ್ರಿ ವೇಳೆ ಸಂಚಾರ ಮಾಡುವವರು ಅತ್ಯಂತ ಎಚ್ಚರದಿಂದ ಸಂಚಾರ ಮಾಡಬೇಕಿದೆ.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!