April 29, 2024

MALNAD TV

HEART OF COFFEE CITY

ಮದ್ಯದ ಅಂಗಡಿ ತೆರೆಯಲು ಅನುಮತಿ ನೀಡದಂತೆ ಶಿವನಿ ಗ್ರಾಮಸ್ಥರ ಒತ್ತಾಯ

1 min read

ಚಿಕ್ಕಮಗಳೂರು : ಶಿವನಿ ಗ್ರಾಮದಲ್ಲಿ ಹೊಸದಾಗಿ ಮದ್ಯದಂಗಡಿ ತೆರೆಯಲು ಅನುಮತಿ ನೀಡದಂತೆ ಫಿನೈಕೇರ್ ಸಂಘದ ನೇತೃತ್ವಲ್ಲಿ ಶಿವನಿ ಗ್ರಾಮದ ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ನೀಡಿದರು.

ಅಜ್ಜಂಪುರ ತಾಲೂಕಿನ ಶಿವನ ಗ್ರಾಮದಲ್ಲಿ ಈಗಾಗಲೇ ಎರಡು ಮದ್ಯದಂಗಡಿಗಳಿದ್ದು, ಇದರಿಂದ ಗ್ರಾಮದ ಬಹಳಷ್ಟು ಪುರುಷರು ಮದ್ಯದ ದಾಸರಾಗಿದ್ದು, ಕೆಲವು ಮಹಿಳೆಯರ ಪುರುಷರು ಮದ್ಯದಿಂದ ಸಾವನಪ್ಪಿದ್ದಾರೆ. ಇದರಿಂದ ಬಡ ಕುಟುಂಬಗಳ ಬದುಕು ಬೀದಿಗೆ ಬಿದಿದ್ದೆ. ಇರುವ ಮದ್ಯದಂಗಡಿಯನ್ನು ತೆಗೆಯುವಂತೆ ಸಾಕಷ್ಟು ಬಾರಿ ಹೋರಾಟ ನಡೆಸುತ್ತಿದ್ದರು, ಕಿವಿಗೊಡದ ಜಿಲ್ಲಾಡಳಿತ ಈಗ ಮತ್ತೊಂದು ಮದ್ಯದಂಗಡಿಗೆ ಅನುಮತಿ ನೀಡುತ್ತಿರುವುದನ್ನು ನಿಲ್ಲಿಸಬೇಕು. ಇದರ ಬದಲು ಕುಡಿಯುವ ನೀರಿನ ಸೌಲಭ್ಯ ಕಲ್ಪಿಸುವಂತೆ ವಿನಂತಿಸಿದರು. ತಪ್ಪಿದ್ದಲ್ಲಿ ಮಹಿಳಾ ಶ್ರೀ ಶಕ್ತಿ ಸಂಘ, ದಲಿತ ಸಂಘ ಹಾಗೂ ಹಿಂದುಳಿದ ಸಂಘಟನೆಗಳೊಂದಿಗೆ ಹೋರಾಟ ನಡೆಸಲಾಗುವುದೆಂದು ಎಚ್ಚರಿಸಿದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!