April 29, 2024

MALNAD TV

HEART OF COFFEE CITY

ಕಾಫಿನಾಡಲ್ಲಿ ಹೆಚ್ಚಾದ ಬೀದಿನಾಯಿಗಳ ಹಾವಳಿ..!

1 min read

ಚಿಕ್ಕಮಗಳೂರು: ಚಿಕ್ಕಮಗಳೂರಿನಲ್ಲಿ ಬೀದಿ ನಾಯಿಗಳ ಕಾಟ ಅಷ್ಟಿಷ್ಟಲ್ಲ, ಬರೊಬ್ಬರಿ 8 ತಿಂಗಳಿಗೆ 12 ಸಾವಿರ ಜನರ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿವೆ. ಈ ದಾಳಿಯಿಂದ ಚಿಕ್ಕಮಗಳೂರು ಜಿಲ್ಲೆಯ ಜನತೆ ಬೆಚ್ಚಿ ಬಿದ್ದಿದ್ದು, ರಾತ್ರಿಯ ವೇಳೆ ಬೀದಿ ನಾಯಿಗಳ ಹಾವಳಿ ಹೆಚ್ಚಳವಾಗಿದೆ. ಬೈಕ್ ನಲ್ಲಿ ಹೋಗುವವರಿಗೆ, ಸೈಕಲ್ ನಲ್ಲಿ ಹೋಗುವವರಿಗೆ, ರಸ್ತೆಯಲ್ಲಿ ಸಂಚಾರ ಮಾಡುವವರೇ ಬೀದಿ ನಾಯಿಗಳ ಟಾರ್ಗೆಟ್ ಆಗಿದ್ದು, ಪುಟ್ಟ ಪುಟ್ಟ ಮಕ್ಕಳ ಮೇಲೂ ನಿರಂತರ ಬೀದಿ ನಾಯಿಗಳ ದಾಳಿ ನಡೆಸುತ್ತಿವೆ. ಬೀದಿ ನಾಯಿಗಳ ದಾಳಿಯಿಂದ ತಪ್ಪಿಸಿಕೊಳ್ಳಲು ಸಾರ್ವಜನಿಕರು ಹರ ಸಾಹಸ ಪಡುವಂತಾಗಿದೆ. ಚಿಕ್ಕಮಗಳೂರು ನಗರದಲ್ಲಿಯೇ ಆರು ಸಾವಿರಕ್ಕೂ ಅಧಿಕ ಬೀದಿ ನಾಯಿಗಳು ಕಚ್ಚಿರುವ ಪ್ರಕರಣ ದಾಖಲಾಗಿದ್ದು, ಈ ಅಂಕಿ ಅಂಶ ನೋಡಿ ಸಾರ್ವಜನಿಕರನ್ನೇ ಬೆಚ್ಚಿ ಬಿದ್ದಿದ್ದಾರೆ. ಚಿಕ್ಕಮಗಳೂರು ನಗರ ಸೇರಿದಂತೆ, ಜಿಲ್ಲೆಯ ಜನರಲ್ಲಿ ಈಗ ಎದುರಾಗಿರೋದು ಶ್ವಾನ ಭೀತಿ ಅದು ಬೀದಿಯಲ್ಲಿರೋ ಶ್ವಾನಗಳು. ರಾತ್ರಿ ಸಮಯದಲ್ಲಂತೂ ಕಾಲ್ನಡಿಗೆ ಬೈಕ್ ನಲ್ಲಿ ಓಡಾಡೋಕು ಭಯ ಪಡುತ್ತಿದ್ದು, ಬರೊಬ್ಬರಿ 8 ತಿಂಗಳಲ್ಲಿ ಆಸ್ಪತ್ರೆಗೆ ಹೋದವರು 12 ಸಾವಿರಕ್ಕೂ ಅಧಿಕ ಜನರು. ಶ್ವಾನಗಳ ದಾಳಿ ಹಾಗೂ ಕಚ್ಚೋ ಪ್ರಕರಣ ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ವರ್ಷವೇ ಅಧಿಕವಾಗಿದ್ದು, ಕೇವಲ 8 ತಿಂಗಳಲ್ಲಿ 12 ಸಾವಿರದ ಗಡಿ ದಾಟಿದೆ. ಇದರಲ್ಲಿ ಗರಿಷ್ಠ 95 ರಷ್ಟು ಪ್ರಮಾಣದಲ್ಲಿ ಬೀದಿ ಶ್ವಾನಗಳೇ ದಾಳಿ ನಡೆಸಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಚಿಕ್ಕಮಗಳೂರು ನಗರದಲ್ಲಿ 6 ಸಾವಿರ ಪ್ರಕರಣಗಳಿದ್ದರೇ, ಕಡೂರು 1.756 ತರೀಕೆರೆ 1.168 ಎನ್. ಆರ್.ಪುರ 588, ಕೊಪ್ಪದಲ್ಲಿ 969, ಶೃಂಗೇರಿ 433, ಮೂಡಿಗೆರೆ 391ಪ್ರಕರಣಗಳು ದಾಖಲಾಗಿದೆ. ಶ್ವಾನ ದಾಳಿಯಿಂದ ಬಂದೋರಿಗೆ ನೀಡೋಕೆ ಇಂಜೆಕ್ಷನ್ ಗೆ ಈ ವರೆಗೂ ತೊಂದರೆಯಾಗಿಲ್ಲ. ಮುಂದೇಯೂ ತೊಂದರೆ ಯಾಗದಂತೆ ಜಿಲ್ಲಾ ಆರೋಗ್ಯ ಇಲಾಖೆ ಎಚ್ಚರಿಕೆಯ ಕ್ರಮ ವಹಿಸಿದ್ದು, ಕಳೆದ ವರ್ಷ 13 ಸಾವಿರ ಪ್ರಕರಣಗಳಿದ್ವು ಈ ಬಾರಿ 8 ತಿಂಗಳಲ್ಲಿಯೇ 12 ಸಾವಿರ ದಾಖಲಾಗಿದೆ ಎಂಬ ಅಂಕಿ ಅಂಶವನ್ನು ಜಿಲ್ಲಾ ಆರೋಗ್ಯ ಇಲಾಖೆ ಹೊರ ಹಾಕಿದೆ.

ಈ ಕುರಿತು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಆಶ್ವಥ್ ಬಾಬು ಮಾತನಾಡಿ, ನಗರ ಮತ್ತು ಗ್ರಾಮೀಣ ಪ್ರದೇಶ ಪ್ರದೇಶದಲ್ಲಿ ಬೀದಿ ನಾಯಿ ಹಾವಳಿ ಹೆಚ್ಚಿದೆ. ಜಿಲ್ಲೆಯಲ್ಲಿ 13 ಲಕ್ಷ ಜನಸಂಖ್ಯೆ ಇದ್ದು, ಅದರಲ್ಲಿ ಸುಮಾರು 3 ವರ್ಷಗಳ ಅಂಕಿ-ಅಂಶಗಳನ್ನು ನೋಡಿದರೆ ಈ ವರ್ಷ ಬೀದಿ ನಾಯಿ ಹಾವಳಿಯ ಪ್ರಮಾಣ ಕೂಡ ಕಡಿಮೆ ಇದೆ. ಸಾರ್ವಜನಿಕರಿಗೆ ನಾಯಿ ಕಡಿತದಿಂದ ಯಾವುದೇ ರೀತಿಯ ತೊಂದರೆ ಆಗದಂತೆ ಅರೋಗ್ಯ ಇಲಾಖೆ ನೋಡಿಕೊಳ್ಳುತ್ತಿದೆ. ಬೀದಿ ನಾಯಿಗಳ ಹಾವಳಿಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಆರೋಗ್ಯಇಲಾಖೆ ಜಿಲ್ಲಾಡಳಿತದ ಗಮನಕ್ಕೆ ತಂದಿದ್ದು, ಏನೆಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುತ್ತಾರೆ ಎಂದು ಚರ್ಚೆ ಕೂಡ ಮಾಡಲಾಗಿದೇ .. ಅಷ್ಟೇ ಅಲ್ಲದೆ ನಾಯಿ ಹಾವಳಿ ನಿಯಂತ್ರಿಸುವಲ್ಲಿ ನಗರಸಭೆ, ಪುರಸಭೆ ಹಾಗು ಸ್ಥಳೀಯ ಸಂಸ್ಥೆಗಳು ಉತ್ತಮ ಸಹಕಾರ ಕೂಡ ನೀಡುತ್ತಿದ್ದಾರೆ ಎಂದರು. ಅದೇನೇ ಇರಲಿ ವೀಕ್ಷಕರೇ… ಒಟ್ಟಾರೆಯಾಗಿ ಬೀದಿನಾಯಿಗಳ ಹಾವಳಿಯನ್ನು ನಿಯಂತ್ರಿಸಬೇಕಾದರೆ,  ಪಾಣಿ ಹತ್ಯೆ ನಿಷೇಧದ ಹಿನ್ನೆಲೆಯಲ್ಲಿ ನಾಯಿಗಳನ್ನು ಹಿಡಿದು ಬೇರಡೆಗೆ ಸ್ಥಳಾಂತರ ಮಾಡುವ, ಇಲ್ಲವೇ ಸಂತಾನ ಹರಣ ಚಿಕಿತ್ಸೆಗೆ ಒಳಪಡಿಸುವಂತಹ ಒಂದೇ ಒಂದು ಮಾರ್ಗವಿದೆ.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!