May 5, 2024

MALNAD TV

HEART OF COFFEE CITY

ಮಗುವನ್ನ ಮಹಿಳೆ ಕೈಗೆ ಕೊಟ್ಟು ಎಸ್ಕೇಪ್ ಆದ ಕಿರುತೆರೆ ನಟ

1 min read

ಚಿಕ್ಕಮಗಳೂರು : ರೀಲ್ ನಲ್ಲಿ ನಟಿಸಿಕೊಂಡು ರಿಯಲ್ ಲೈಫ್ ನಲ್ಲಿ ಫೇಸ್ಬುಕ್, ವಾಟ್ಸಾಪ್ ಮೂಲಕ ಹುಡುಗಿಯರ ಜೊತೆ ಚಾಟ್ ಮಾಡ್ಕೊಂಡು ಕಿರುತೆರೆ ನಟನೊಬ್ಬ ಕೆಲವರ ಜೀವನದಲ್ಲಿ ಆಟವಾಡಿ ಮೋಸಮಾಡಿರೋ ಘಟನೆ ಚಿಕ್ಕಮಗಳೂರು ತಾಲೂಕಿನ ಕಳಸಪುರದಲ್ಲಿ ನಡೆದಿದೆ. ಹಾಸನ ಜಿಲ್ಲೆ ಚನ್ನರಾಯಪಟ್ಟಣದ ಪೂರ್ಣಿಮಾ ಮೋಸ ಹೋದ ಯುವತಿ. ಇಷ್ಟಕ್ಕೆಲ್ಲಾ ಕಾರಣಕರ್ತನಾದ ಹೀರೋ, ಅಲ್ಲ ವಿಲನ್ ಇವ್ನೆ. ಉಮೇಶ್, ರಿತೇಶ್ ಗೌಡ ಅಲಿಯಾಸ್ ಗೂಳಿ ಉಮೇಶ. ಧಾರಾವಾಯಿಯಂತೆ ರಿಯಲ್ನಲ್ಲೂ ಹಲವು ಹೆಸರನ್ನಿಟ್ಟುಕೊಂಡ ಈತ ಕಿರುತೆರೆ ವಿಲನ್.

ಬೆಂಗಳೂರಿನ ಚಿಕ್ಕಬಿದರೆಕಲ್ಲು ಗ್ರಾಮದಲ್ಲಿ ಮನೆ ಮಾಡಿ ಈಕೆಯನ್ನ ನಂಬಿಸಿ, ಸದ್ಯ ಆಕೆ ಕೈಗೆ ಮಗು ಕೊಟ್ಟು ಹೋದವನು ಮತ್ತೆ ಪತ್ತೆಯಿಲ್ಲ. ಇದರಿಂದ ನೊಂದ ಮಹಿಳೆ ಐದು ತಿಂಗಳ ಮಗು ಜೊತೆ ಆತನ ಊರಿಗೆ ಬಂದು ಗಂಡ ಬೇಕು, ಅವ್ನ ನಿಜ ಬಣ್ಣ ಗೊತ್ತಾಗ್ಬೇಕು ಅಂತ ಹೋರಾಟಕ್ಕಿಳಿದಿದ್ದಾಳೆ. ಈ ಉಮೇಶ್ ಅಲಿಯಾಸ್ ಗೂಳಿ ಉಮೇಶ ಮೂಲತಃ ಚಿಕ್ಕಮಗಳೂರು ತಾಲೂಕಿನ ಕಳಸಾಪುರ ಗ್ರಾಮದವನು. ಈತ ಕನ್ನಡದಲ್ಲಿ ಪ್ರಸ್ತುತ ಪ್ರಸಾರಗೊಳ್ಳುತ್ತಿರುವ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾನೆ. ನಟಿಸುತ್ತಿದ್ದಾನೆ. ಆದ್ರೆ, ಈ ಅಭಿನಯದ ಕಲೆಯನ್ನ ನಿಜ ಜೀವನದಲ್ಲೂ ರೂಢಿಸಿಕೊಂಡು ಮೂರ್ನಾಲ್ಕು ಯುವತಿಯರನ್ನ ಮದುವೆ ಆಗಿ ಮೋಸ ಮಾಡಿದ್ದಾನಂತೆ. ಹುಡುಗಿಯರನ್ನ ಪಟಾಯಿಸುವಾಗ ನಾನೊಬ್ಬ ಅನಾಥ, ಯಾರೂ ಇಲ್ಲ ಎಂದು ಹೇಳಿಕೊಳ್ತಿದ್ದಾನಂತೆ. ಈ ಮಧ್ಯೆ ಆತ ನನ್ನ ಮಗುವನ್ನ ಮತ್ತೊಬ್ಬಳ ಜೊತೆ ಸೇರಿ ಮಾರಾಟ ಮಾಡಲು ಪ್ರಯತ್ನಿಸಿದ್ದ. ಅಲ್ಲದೇ ಆತ ಇದೇ ರೀತಿ ಅನೇಕ ಹುಡುಗಿಯರನ್ನ ಬಳಸಿಕೊಂಡು ಮಗು ಮಾರಾಟ ಮಾಡೋ ಕೆಲ್ಸ ಮಾಡ್ತಿದ್ದಾನೆ ಅನ್ನೋ ಗಂಭೀರ ಆರೋಪ ಕೂಡ ಪೂರ್ಣಿಮಾ ಮಾಡಿದ್ದಾಳೆ.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!