May 18, 2024

MALNAD TV

HEART OF COFFEE CITY

ಜೆಡಿಎಸ್ ಬಿಟ್ಟು ಬೇರೆ ಯಾವುದೇ ಪಕ್ಷಕ್ಕೆ ಬೆಂಬಲಿಸಲು ನಿರ್ಧರಿಸಿಲ್ಲ ಶ್ರೀದೇವಿ

1 min read

 ಚಿಕ್ಕಮಗಳೂರು ಕ್ಷೇತ್ರದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಮುಖಂಡರುಗಳು ಹಾಗೂ ಕಾರ್ಯಕರ್ತರು ಬಹುತೇಕವಾಗಿ ಒಕ್ಕೊಲಿರಲಿನಿಂದ ಜೆಡಿಎಸ್ ಬಿಟ್ಟು ಬೇರೆ ಯಾವುದೇ ಪಕ್ಷಕ್ಕೆ ಬೆಂಬಲಿಸಲು ತೀರ್ಮಾನಿಸಿರುವುದಿಲ್ಲ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಹಾಗೂ ವಕೀಲೆ ಟಿ.ಶ್ರೀದೇವಿ ಹೇಳಿದ್ದಾರೆ.ಈ ಸಂಬಂಧ ಬುಧವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು ಬಿ.ಎಂ.ತಿಮ್ಮಶೆಟ್ಟಿ ಅವರನ್ನು ಚಿಕ್ಕಮಗಳೂರು ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎಂದು ಕಳೆದ ಕೆಲ ತಿಂಗಳ ಹಿಂದೆಯೇ ಎಸ್.ಎಸ್.ಬೋಜೇಗೌಡ ಅವರು ಖುದ್ದು ಘೋಷಣೆ ಮಾಡಿದ್ದರು. ನಂತರ ಚುನಾವಣಾ ಕೊನೆ ಸಮಯದಲ್ಲಿ ವಿವಿಧ ಗ್ರಾಮಗಳು, ಸಭೆಗಳಿಗೆ ತೆರಳಿ ಬೇರೆ ಪಕ್ಷಕ್ಕೆ ಮತ ನೀಡಿ ಎಂದು ಪ್ರಚಾರ ಮಾಡುತ್ತಿರುವುದು ಪಕ್ಷಕ್ಕೆ ಮಾಡಿರುವ ದ್ರೋಹವಾಗಿದೆ ಎಂದಿದ್ದಾರೆ.
ರಾಜ್ಯದಲ್ಲಿ ಪ್ರಾದೇಶಿಕ ಪಕ್ಷವಾದ ಜೆಡಿಎಸ್‍ನ್ನು ಹೆಚ್.ಡಿ.ದೇವೇಗೌಡ, ಹೆಚ್.ಡಿ.ಕುಮಾರಸ್ವಾಮಿ ಹಾಗೂ ಕಾರ್ಯಕರ್ತರುಗಳ ಸಾರಥ್ಯದಲ್ಲಿ ಬೆಳೆದಿದೆ. ಚಿಕ್ಕಮಗಳೂರು ಕ್ಷೇತ್ರದಲ್ಲಿ ಮೊದಲ ಸಂಭಾವ್ಯ ಪಟ್ಟಿಯಲ್ಲಿ ತಿಮ್ಮಶೆಟ್ಟಿ ಅವರನ್ನು ಅಭ್ಯರ್ಥಿ ಎಂದು ಘೋಷಣೆ ಮಾಡಿ ನಂತರ ಯಾವುದೋ ಒತ್ತಡಕ್ಕೆ ಮಣಿದು ಎಸ್.ಎಲ್. ಬೋಜೇಗೌಡರು ಬೇರೆ ಪಕ್ಷಕ್ಕೆ ಬೆಂಬಲಿಸಿ ಎಂದು ಹೇಳುತ್ತಿರುವುದು ಸೂಕ್ತವಲ್ಲ ಎಂದು ತಿಳಿಸಿದ್ದಾರೆ.ಈ ಸಂಬಂಧ ಪಕ್ಷದ ಅಭ್ಯರ್ಥಿ ಬಿ.ಎಂ.ತಿಮ್ಮಶೆಟ್ಟಿ ಅವರು ಬೋಜೇಗೌಡ ನನ್ನ ರಾಜಕೀಯ ಗುರು. ಅವರ ಮಾರ್ಗದರ್ಶನದಲ್ಲಿ ಪಕ್ಷದ ಎಲ್ಲಾ ಕಾರ್ಯಕ್ರಮಗಳನ್ನು ಚಾಚುತಪ್ಪದೇ ಇದುವರೆಗೆ ಮಾಡಿಕೊಂಡು ಬಂದಿದ್ದಾರೆ. ಆದರೆ ಕೊನೆ ಗಳಿಗೆಯಲ್ಲಿ ಬೋಜೇಗೌಡ ಅವರು ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿರುವ ಪರಿಣಾಮ ಜೆಡಿಎಸ್ ಕಾರ್ಯಕರ್ತರುಗಳಲ್ಲಿ ತೀವ್ರ ನೋವುಂಟಾಗಿದೆ ಎಂದಿದ್ದಾರೆ.ಪಕ್ಷದ ಕಚೇರಿಗಳಲ್ಲಿ ಸಹ ಆಳೆತ್ತರದ ಪ್ಲೆಕ್ಸ್‍ಗಳನ್ನು ಅಲಂಕರಿಸಿ ಪ್ರಚಾರ ಕಾರ್ಯ ಶುರು ಮಾಡಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಹೀಗಿರುವಾಗ ತಿಮ್ಮಶೆಟ್ಟಿಯವರು ಬೇರೆಯವರ ಕುಮ್ಮಕ್ಕಿನಿಂದ ಅಭ್ಯರ್ಥಿಯಾ ಗಿದ್ದಾರೆ ಎಂದು ಹೇಳಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದ ಅವರು ಕ್ಷೇತ್ರದಲ್ಲಿ ಚುನಾವಣೆ ಸಂಬಂಧಿಸಿದಂತೆ ಎಲ್ಲಾ ನಿರ್ಧಾರಗಳನ್ನು ಬೋಜೇಗೌಡರೇ ಏಕಾಂಗಿಯಾಗಿ ಕೈಗೊಂಡು ತೀರ್ಮಾನಿಸಿದ್ದಾರೆ ಎಂದಿದ್ದಾರೆ.
ಇದುವರೆಗೂ ಸಹ ಜೆಡಿಎಸ್ ನಿಷ್ಟಾವಂತ ಮುಖಂಡರುಗಳು, ಕಾರ್ಯಕರ್ತರುಗಳನ್ನು ಕರೆಸಿ ಇತರೆ ಪಕ್ಷಕ್ಕೆ ಬೆಂಬಲ ಸೂಚಿಸಲು ಯಾವುದೇ ತೀರ್ಮಾನವಾಗಿರುವುದಿಲ್ಲ. ಆದರೂ ಕೂಡಾ ಬೇರೆ ಪಕ್ಷದ ಅಭ್ಯರ್ಥಿ ಬೆಂಬಲಿ ಸಲು ಒಕ್ಕೊರಲಿನಿಂದ ತೀರ್ಮಾನವಾಗಿದೆ ಎಂದು ಸುಳ್ಳು ಹೇಳಿಕೆ ನೀಡುತ್ತಿದ್ದಾರೆ ಎಂದು ದೂರಿದ್ದಾರೆ.
ಇತ್ತೀಚೆಗೆ ಬಹಿರಂಗವಾಗಿ ಹೇಳಿಕೆ ನೀಡಿರುವ ಬೋಜೇಗೌಡ ಅವರು ಬಿ.ಎಂ.ತಿಮ್ಮಶೆಟ್ಟಿ ಕೆಲವು ಜೆಡಿಎಸ್ ಮುಖಂಡರುಗಳ ಜೊತೆ ಒಳಸಂಚು ಮಾಡಿ ಟಿಕೇಟ್ ಪಡೆದುಕೊಂಡಿದ್ದಾರೆ ಎಂದು ಹೇಳುತ್ತಿರುವುದು ಸರಿಯಲ್ಲ. ಬೋಜೇಗೌಡರು ತಮ್ಮ ವೈಯಕ್ತಿಕ ರಾಜಕೀಯವನ್ನು ಯಾವ ರೀತಿಯಲ್ಲಾದರೂ ಮಾಡಿಕೊಳ್ಳಲಿ, ಇತರೆ ಪಕ್ಷಕ್ಕೆ ಬೆಂಬಲಕ್ಕೆ ಸಂಬಂಧಿಸಿದಂತೆ ಪಕ್ಷದ ಕಾರ್ಯಕರ್ತರ ತೀರ್ಮಾನ ಎಂದು ಹೇಳಕೂಡದು ಎಂದು ನೀಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!