April 27, 2024

MALNAD TV

HEART OF COFFEE CITY

ಶ್ರೀ ಸಿದ್ದೇಶ್ವರ ಸ್ವಾಮೀಜಿ ನಾಡುಕಂಡ ಅಪರೂಪದ ಸಂತ – ಎಂ.ಎನ್.ಸುಂದರ್‌ರಾಜ್

1 min read

ಚಿಕ್ಕಮಗಳೂರು- ಸಿದ್ದೇಶ್ವರ ಸ್ವಾಮೀಜಿ ರವರು ಸಮಾಜಕ್ಕೆ ಮಾರ್ಗದರ್ಶಕರಾಗುವುದರ ಜತೆಗೆ ನಾಕಂಡ ಅಪರೂಪದ ಸಂತ ಎಂದು ಶಿವಮೋಗ್ಗ ಕರ್ನಾಟಕ ಸಂಘದ ಅಧ್ಯಕ್ಷರಾದ ಎಂ.ಎನ್.ಸುಂದರ್‍ರಾಜ್ ತಿಳಿಸಿದರು.
ನಗರದ ದೊಡ್ಡಕುರುಬರಹಳ್ಳಿ ಕಲ್ಯಾಣ ನಗರದ ಬಸವತತ್ವ ಪೀಠದಲ್ಲಿ ಏರ್ಪಡಿಸಿದ್ದ 19ನೇ ಶಿವಾನುಭವಗೋಷ್ಠಿ ಮತ್ತು ಸಿದ್ದೇಶ್ವರ ಶ್ರೀಗಳ ಸ್ಮರಣೆ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿ, ಶ್ರೀ ಸಿದ್ದೇಶ್ವರ ಸ್ವಾಮೀಜಿಯವರ ಜ್ಞಾನದ ಮೇರುವಾಗಿದ್ದರು, ಸರಳ, ಸಹಜ ಜೀವನ ಶೈಲಿಯನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡವರು, ಎಲ್ಲರಿಗೂ ಆದರ್ಶ ಮೌಲ್ಯಗಳನ್ನು ಜಗತ್ತಿಗೆ ನೀಡಿರುವ ಅಪರೂಪದ ಗುರುಗಳು, ಖಾವಿ ಧರಿಸದೆ, ಮಠ, ಪೀಠ, ವಿದ್ಯಾಸಂಸ್ಥೆಗಳನ್ನು ಕಟ್ಟದೆ, ಜ್ಞಾನದ ಪರಿಚಾರಕರಾಗಿದ್ದುಕೊಂಡು ಲಕ್ಷಾಂತರ ಜನರ ಬದುಕನ್ನು ಹಸನುಗೊಳಿಸಿದವರು ಎಂದರು.

ಬಸವತತ್ವ ಪೀಠದ ಶ್ರೀ ಮರುಳಸಿದ್ದೇಶ್ವರ ಸ್ವಾಮೀಜಿ ಆಶೀರ್ವಚನ ನೀಡಿ ಶ್ರೀಗಳ ವ್ಯಕ್ತಿತ್ವ ಮಹಾಮೌನ, ಅವರದು ಅದ್ಬುತ ಜೀವನ ಶೈಲಿ, ಕೇಳುಗರ ಮಟ್ಟಕ್ಕೆ ಇಳಿದು ತತ್ವ ಮುಟ್ಟಿಸುತ್ತಿದ್ದರು, ಕೋಟಿ ಕಾರು, ಮಠ ಕಟ್ಟಿಸುತ್ತೇವೆಂದರೂ ಬೇಡವೆಂದವರು, ಅವರ ಸಾವಿಗೆ 25 ರಿಂದ 30 ಲಕ್ಷ ಜನ ಸಮೂಹ ಸೇರಿತ್ತು ಸೇರಿದ್ದ ಜನರೆಲ್ಲರು ಎಮ್ಮವರಿಗೆ ಸಾವಿಲ್ಲ, ಅವರು ಪ್ರತಿಪಾದನೆ ಮಾಡಿರುವ ತತ್ವ ಜ್ಷಾನದಿಂದ ಅಜರಾಮರರಾಗಿರುತ್ತಾರೆ ಎಂದರು.
ನಗರಸಭೆ ಮಾಜಿ ಅಧ್ಯಕ್ಷ ಹೆಚ್.ಡಿ.ತಮ್ಮಯ್ಯ ಮಾತನಾಡಿ ಸಿದ್ದೇಶ್ವರ ಶ್ರೀಗಳ ತತ್ವದಲ್ಲಿ ಶೇ. 10 ಭಾಗವನ್ನಾದರೂ ನಾವೆಲ್ಲರು ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಶಿವಾನುಭವ ಗೋಷ್ಠಿಗೆ ಸಾರ್ಥಕತೆ ಬರುತ್ತದೆ ಎಂದರು.
ಸಾಧುಸಧರ್ಮ ವೀರಶೈª ಸಂಘದ ಅಧ್ಯಕ್ಷರಾದÀ ಮುಗುಳುವಳ್ಳಿ ಎಂ.ಎಸ್.ನಿರಂಜನ್ ್ಳ ಮಾತನಾಡಿ ಮನುಷ್ಯರಾಗಿ ಹುಟ್ಟಿದಮೇಲೆ ಸಂಸ್ಕಾರ ಕಲಿಯಬೇಕು ಎಂದರು.
ಈ ಸಂದರ್ಭದಲ್ಲಿ ನಿವೃತ್ತ ಯೋಧ ಲಕ್ಯಾದ ಎಲ್.ಸಿ.ಶಿವಕುಮಾರ್, ಎಲ್.ಎಂ.ಮಮತ, ಲಕ್ಷ್ಮೀಪುರದ ಶಶಿಕುಮಾರ್, ಬಿ.ಆರ್.ಮಲ್ಲೇಶ್, ಜರ್ಮನಿಯ ಕಾರ್ನೆಲಿಯಾ ಮತ್ತಿರರು ಉಪಸ್ಥಿತರಿದ್ದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!