May 19, 2024

MALNAD TV

HEART OF COFFEE CITY

ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಗೆ ವಿಶೇಷವಾದ ಸ್ಥಾನಮಾನ ಕೆ.ಎನ್. ರಮೇಶ್

1 min read

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕರ್ನಾಟಕ ರಾಜ್ಯ ಮಹಿಳಾ ಆಯೋಗ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ, ರಾಷ್ಟ್ರೀಯ ಗ್ರಾಮೀಣ ಜೀವಾನೋಪಾಯ ಅಭಿಯಾನ, ಜಿಲ್ಲಾ ಸ್ವೀಪ್, ಜಿಲ್ಲೆಯ ಅಂಗನವಾಡಿ ಕಾರ್ಯಕರ್ತೆ / ಸಹಾಯಕಿಯರ ಸಂಘಟನೆಗಳು, ಜಿಲ್ಲೆಯ ಸ್ತ್ರೀಶಕ್ತಿ ಗುಂಪುಗಳು ಹಾಗೂ ವಿವಿಧ ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ  ಇಂದು ನಗರದ ಜಿಲ್ಲಾ ಆಟದ ಮೈದಾನದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ವ್ಯವಸ್ಥಿತ ಮತದಾರರ ಶಿಕ್ಷಣ ಮತ್ತು ಚುನಾವಣಾ ಭಾಗವಹಿಸುವಿಕೆ ಕುರಿತ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿವರ್ಷ ಮಾ. ೮ ನ್ನು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ. ಅಮೇರಿಕಾ ಮತ್ತು ಯುರೋಪ್ ರಾಷ್ಟ್ರಗಳಲ್ಲಿ ಮಹಿಳೆಯರಿಗೆ ಮತದಾನದ ಹಕ್ಕು ಇರಲಿಲ್ಲ, ಮತದಾನದ ಹಕ್ಕಿಗಾಗಿ ಹಲವಾರು ಹೋರಾಟಗಳು ನಡೆದವು. ೧೯೧೭ರಲ್ಲಿ ರಷ್ಯಾದಲ್ಲಿ, ೧೯೨೦ರಲ್ಲಿ ಅಮೇರಿಕಾದಲ್ಲಿ, ನ್ಯೂಜಿಲ್ಯಾಂಡ್‌ನಲ್ಲಿ ೧೮೯೩ರಲ್ಲಿ ಮಹಿಳೆಯರಿಗೆ ಮತದಾನದ ಹಕ್ಕನ್ನು ನೀಡಲಾಯಿತು ಎಂದ ಅವರು ಮಹಿಳೆಯರಿಗೆ ಸಮಾನ ಸ್ಥಾನಮಾನ ನೀಡುವ ಸಲುವಾಗಿ  ವಿಶ್ವಸಂಸ್ಥೆಯು ೧೯೭೫ ರಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲು ಪ್ರಾರಂಭಿಸಿತು. ೧೯೭೭ ರಲ್ಲಿ ಯುಎನ್ ಜನರಲ್ ಅಸೆಂಬ್ಲಿಯೋ ಮಹಿಳೆಯರ ಹಕ್ಕುಗಳ ಮತ್ತು ಜಾಗತೀಕ ಶಾಂತಿಯನ್ನು ಬೆಂಬಲಿಸುವ ನಿಟ್ಟಿನಲ್ಲಿ ಮಾ. ೮ ರಂದು ಅಂತರಾಷ್ಟ್ರೀಯ ಮಹಿಳಾ ದಿನ ಎಂದು ಘೋಷಣೆ ಮಾಡಿದ್ದು, ಅಂದಿನಿಂದ ಮಾ. ೮ ರಂದು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಆಚರಿಸಲಾಗುತ್ತಿದೆ. ಈ ವರ್ಷದ ಮಹಿಳಾ ದಿನಾಚರಣೆಯನ್ನು ಆರೋಗ್ಯವಂತ ಮಹಿಳೆಯರಿಂದ ಆರೋಗ್ಯವಂತ ಭಾರತ ಎಂಬ ಘೋಷ ವಾಕ್ಯದೊಂದಿಗೆ ಆಚರಿಸಲಾಗುತ್ತದೆ ಎಂದು ಹೇಳಿದ ಅವರು ಮಕ್ಕಳ ಪಾಲನೆ, ಪೋಷಣೆಯನ್ನು ತಾಯಿಯ ಪಾತ್ರ ಅತ್ಯಂತ ಮಹತ್ವವಾದುದ್ದು, ಇತಿಹಾಸದ ಪುಟಗಳಲ್ಲಿ ಅನೇಕ ಮಹಿಳೆಯರ ದಿಟ್ಟತನವನ್ನು ಕಾಣಬಹುದಾಗಿದೆ, ಸ್ವಾತಂತ್ರ್ಯ ಭಾರತದ ಹೋರಾಟದ ಮುನ್ನಲೆಗೆ ಮತ್ತು ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಅನೇಕ ಮಹಿಳೆಯರು ತಮ್ಮ ಜೀವನವನ್ನು ಮುಡುಪಾಗಿಟ್ಟಿರುವುದನ್ನು ಇತಿಹಾಸದ ಪುಟಗಳಲ್ಲಿ ಕಾಣುತ್ತೇವೆ ಎಂದು ಹೇಳಿದರು.

ಶಿವಾಜಿಯ ತಾಯಿ ಜೀಜಾಬಾಯಿ ಶಿವಾಜಿ ಮಗುವಾಗಿದ್ದಾಗ ಮಗನಿಗೆ ಮಹಾಭಾರತ, ರಾಮಾಯಣ ಸೇರಿದಂತೆ ದೇಶಪ್ರೇಮದ ನೀತಿ ಕಥೆಗಳನ್ನು ಹೇಳಿದ್ದರಿಂದ ಶಿವಾಜಿಯಲ್ಲಿ ದೇಶಪ್ರೇಮ ಬೆಳೆಯಲು ಕಾರಣವಾಯಿತು. ತಾಯಂದಿರು ತಮ್ಮ ಮಕ್ಕಳಿಗೆ ನೀತಿ ಪಾಠದ ಕಥೆಗಳನ್ನು ಹೇಳುತ್ತಾ ಬಂದರೆ ಅವರಲ್ಲಿ ರಾಷ್ಟ್ರಪ್ರೇಮದ ಜೊತೆಗೆ ಅವರ ಬದುಕಿಗೂ ಸ್ಪೂರ್ತಿಯಾಗುತ್ತದೆ ಜಿಲ್ಲೆಯಲ್ಲೂ ವಿವಿಧ ಕ್ಷೇತ್ರಗಳಲ್ಲಿ ಹಲವಾರು ಮಹಿಳೆಯರು ಸಾಧನೆ ಮಾಡಿರುವುದನ್ನು ಕಾಣುತ್ತೇವೆ ಎಂದು ತಿಳಿಸಿದರು.
ಜಿ. ಪಂ. ಮುಖ್ಯಕಾರ್ಯನಿರ್ವಾಹಕಾಧಿಕಾರಿ ಜಿ. ಪ್ರಭು ಪ್ರಸ್ತಾವಿಕವಾಗಿ ಮಾತನಾಡಿ ಪ್ರತಿ ತಾಲ್ಲೂಕಿನಲ್ಲೂ ಇಂದು ಮಹಿಳಾ ದಿನಾಚರಣೆಯನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಪ್ರತಿ ಕೆಲಸದ ಯಶಸ್ವಿಗೆ ಮಹಿಳೆಯ ಪಾತ್ರ ಮಹತ್ವದದ್ದು, ಜಿಲ್ಲೆಯಲ್ಲಿ ವಿವಿಧ ಇಲಾಖೆಗಳಲ್ಲಿ ಮಹಿಳೆಯರು ಸಾಧನೆ ಮಾಡಿರುವುದನ್ನು ಕಾಣುತ್ತೇವೆ. ಜಿಲ್ಲೆಯ ೨೨೬ ಗ್ರಾಮ ಪಂಚಾಯಿತಿಗಳಲ್ಲಿ ಮಹಿಳಾ ಒಕ್ಕೂಟಗಳನ್ನು ಸ್ಥಾಪಿಸುವಂತಹ ಕೆಲಸವಾಗಿದ್ದು, ೮೦,೦೦೦ ಮಹಿಳೆಯರನ್ನೊಳಗೊಂಡ ಸಂಘಗಳನ್ನು ರಚಿಸಿ ಸುಮಾರು ೩,೫೦೦ ಸಂಘಗಳಿಗೆ ವಿವಿಧ ಕಸುಬಗಳಿಗೆ ಈವರೆಗೆ ೬೦ ಕೋಟಿ ಅನುದಾನವನ್ನು ಸಮುದಾಯ ಬಂಡವಾಳ ನಿಧಿಯಲ್ಲಿ ವಿತರಣೆ ಮಾಡಲಾಗಿದೆ ಎಂದರು.
ಅವತಿ ಸರ್ಕಾರಿ ಪ್ರೌಢಶಾಲೆಯ ಸಹಶಿಕ್ಷಕಿ ರೇಖಾ ನಾಗರಾಜ್ ರಾವ್ ಮಹಿಳಾ ಸಬಲೀಕರಣ ಕುರಿತು, ಸಾರ್ವಜನಿಕ ಶಿಕ್ಷಣ ಇಲಾಖೆಯ ವಿಷಯ ಪರೀವಿಕ್ಷಕ ಕಾಂತರಾಜು ಮತದಾನ ಪ್ರಕ್ರಿಯೆ ಹಾಗೂ ಇವಿಎಂ ಕುರಿತು ಉಪನ್ಯಾಸ ನೀಡಿದರು. ರಂಗಪಯಣ ಕಲಾ ತಂಡ ಬೀದಿ ನಾಟಕದ ಮೂಲಕ ಮತದಾನ ಕುರಿತು ಜಾಗೃತಿ ಮೂಡಿಸಿದರು.
ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಆನಂದ, ಆಯುಷ್ ಇಲಾಖೆ ಅಧಿಕಾರಿ ಡಾ. ಗೀತಾ, ವೈದ್ಯಾಧಿಕಾರಿ ಡಾ. ಕಲ್ಪನಾ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಪನಿರ್ದೇಶಕರು ಡಾ. ಮಂಜುಳ ಹುಲ್ಲಹಳ್ಳಿ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಚೈತ್ರಾ ಶಿವನಾಂದ್ ಮುಂತಾದವರು ಉಪಸ್ಥಿತರಿದ್ದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!