May 19, 2024

MALNAD TV

HEART OF COFFEE CITY

ಸಿದ್ದರಾಮಯ್ಯ ಟ್ವಿಟ್ – ಸಿ.ಟಿ.ರವಿ ತಿರುಗೇಟು

1 min read

ಪ್ರಜಾಪ್ರಭುತ್ವದಲ್ಲಿ ಒಂದು ಹೆಜ್ಜೆ ಹಿಂದೆ ಇಡುವುದನ್ನ ನಾವು ಅಪಮಾನ ಅಂತ ಭಾವಿಸಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ. ಕೃಷಿ ಕಾಯ್ದೆಯನ್ನ ಹಿಂಪಡೆದಿರುವುದಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಮೋದಿ ಸರ್ವಾಧಿಕಾರಿಯಲ್ಲ ಎಂದು ಹೇಳುತ್ತಿದ್ದರು. ಅವರು ಪ್ರಜಾಪ್ರಭುತ್ವವಾದಿ. ಅದಕ್ಕೆ ರೈತರ ಹಿತದೃಷ್ಠಿಯಿಂದ ಕಾಯ್ದೆಯನ್ನ ಹಿಂಪಡೆದಿದ್ದೇವೆ. ಸರ್ವಾಧಿಕಾರಿಯಾಗಿದ್ದರೆ ಕಾಯ್ದೆಯನ್ನ ಹಿಂತೆಗೆದುಕೊಳ್ಳುತ್ತಿರಲಿಲ್ಲ ಎಂದು ಕಾಂಗ್ರೆಸ್ಸಿಗರಿಗೆ ತಿರುಗೇಟು ನೀಡಿದ್ದಾರೆ.

ಆದರೆ, ಮುಂದೊಂದು ದಿನ ಇಂದು ಕಾಯ್ದೆಯನ್ನ ವಿರೋಧಿಸಿದ ಜನರೇ ಕಾಯ್ದೆ ಪರ ಮಾತನಾಡುವ ದಿನ ಬರುತ್ತೆ ಎಂದಿದ್ದಾರೆ. ಆತಂಕವಾದಿಗಳು ಕೃಷಿ ಕಾಯ್ದೆಯನ್ನ ತಪ್ಪಾಗಿ ಬಿಂಬಿಸಿದ್ದರು. ಕಾಂಗ್ರೆಸ್ ಸೇರಿ ರಾಜಕೀಯ ಪಕ್ಷಗಳೇ ಕೃಷಿ ಕಾಯ್ದೆ ತರಬೇಕು, ಮಾರುಕಟ್ಟೆ ಮುಕ್ತ ಆಗಬೇಕು ಎಂದು ಹೇಳಿದ್ದರು. ಆದರೆ, ಇಂದು ರಾಜಕೀಯ ಕಾರಣಕ್ಕೆ ವಿರೋಧಿಸುತ್ತಿದ್ದಾರೆ. ಪಂಜಾಬಿನಲ್ಲಿ ಪಟ್ಟಭದ್ರಾ ಹಿತಾಸಕ್ತಿಗಳು ಕಾಯ್ದೆಯನ್ನ ತಪ್ಪಾಗಿ ಅರ್ಥೈಸಿದ್ದರು. ನಾವು ದೇಶದ ಜನಕ್ಕೆ ಮನವರಿಕೆ ಮಾಡುವಲ್ಲಿ ನಾವು ಯಶಸ್ವಿಯಾದೆವು. ಆದರೆ, ಪಂಜಾಬ್, ಹರಿಯಾಣದಲ್ಲಿ ಜನರ ಮನವರಿಕೆ ಪೂರ್ಣ ಪ್ರಮಾಣದಲ್ಲಿ ಆಗಲಿಲ್ಲ. ಭಾಷಣದಲ್ಲಿ ರೈತ ಸಂಘಟನೆಗಳೇ ಮಾರುಕಟ್ಟೆ ಮುಕ್ತ ಆಗಬೇಕು ಎಂದು ಆಗ್ರಹದ ಭಾಷಣ ಮಾಡುತ್ತಿದ್ದರು. ಆದರೆ, ಕೆಲ ರೈತ ಸಂಘಟನೆಗಳೇ ಮಾರುಕಟ್ಟೆ ಮುಕ್ತ ಮಾಡಿದ ಮೋದಿ ವಿರುದ್ಧ ಪ್ರತಿಭಟಿಸಿರು. ಆದರೆ, ಒಂದು ದಿನ ಇಂದು ಕಾಯ್ದೆಯನ್ನ ವಿರೋಧಿಸಿದವರೇ ಕಾಯ್ದೆ ಪರ ಮಾತನಾಡುವ ಕಾಲ ಬರುತ್ತೆ ಎಂದರು.

ಮಾಜಿ ಸಿಎಂ ಸಿದ್ದರಾಮಯ್ಯ ಅವರ ಅಜ್ಞಾನಕ್ಕೆ ಅಯ್ಯೋ ಅನ್ನಬೇಕೋ ಅಥವ ಅವರ ದುರುದ್ದೇಶಕ್ಕೆ ಧಿಕ್ಕಾರ ಕೂಗಬೇಕೋ ನನಗೆ ಗೊತ್ತಾಗುತ್ತಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಮಾಜಿ ಸಿಎಂ ಸಿದ್ದು ವಿರುದ್ಧ ವ್ಯಂಗ್ಯವಾಡಿದ್ದಾರೆ. ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯನವರ ಟ್ವಿಟ್ ನೋಡಿದೆ. ಕೇಂದ್ರ ಸರ್ಕಾರ ತೆಗೆದುಕೊಂಡಿರುವ ಎಲ್ಲಾ ನಿಲುವುಗಳು ಕೃಷಿಕರ ವಿರುದ್ಧವೇ ಇವೆ ಎಂದು ಹೇಳಿದ್ದಾರೆ. ಹಾಗಾದರೆ, ಕಿಸಾನ್ ಸಮ್ಮಾನ್ ಯೋಜನೆಯಡಿ ರೈತರಿಗೆ 6 ಸಾವಿರ ಹಣ ಕೊಟ್ಟ ಮೊದಲ ಪ್ರಧಾನಿ ಮೋದಿ. ಅದು ರೈತ ವಿರೋಧಿನ.
ಬೇವು ಲೇಪಿತ ಯೂರಿಯ ಗೊಬ್ಬರ ತಂದು ಯೂರಿಯಾ ಗೊಬ್ಬರವನ್ನ ದರ್ಬಳಕೆ ಮಾಡಿಕೊಳ್ಳುವುದನ್ನ ತಪ್ಪಿಸಿದ್ದರು. ಅದು ರೈತ ವಿರೋಧಿನ. ಸ್ವಾಮಿನಾಥನ್ ಆಯೋಗದ ವರದಿಯನ್ನ ಶೇಕಡ 95ರಷ್ಟು ಅನುಷ್ಠಾನಗೊಳಿಸಿದ್ದು ನರೇಂದ್ರ ಮೋದಿಯವರು. ಅದು ರೈತ ವಿರೋಧಿನ ಎಂದು ಸಿದ್ದರಾಮಯ್ಯನವರ ವಿರುದ್ಧ ಕಿಡಿ ಕಾರಿದ್ದಾರೆ. ಪೂರ್ವಗ್ರಹದಿಂದ ನೋಡುವ ನಿಮ್ಮ ಮನಸ್ಥಿತಿಯಿಂದ ಹೊರಬನ್ನಿ. ಇಲ್ಲವಾದರೆ ನೀವು ಮಾಡುವ ಪಾಪ ಕಾರ್ಯ ಒಂದು ದಿನ ನಿಮ್ಮನ್ನೇ ಬೆನ್ನತ್ತಿ ಕಾಡುತ್ತೆ ಎಂದು ವ್ಯಂಗ್ಯವಾಡಿದ್ದಾರೆ. ಮೂರು ಕಾಯ್ದೆಯಲ್ಲಿ ರೈತ ವಿರೋಧಿ ಮಸೂದೆ ಯಾವುದಿದೆ ಹೇಳಿ ಎಂದು ಕೇಳಿದ್ದೇವೆ. ಆದರೆ, ಇಂದಿನವರೆಗೂ ಒಂದೇ ಒಂದನ್ನ ಹೇಳಿಲ್ಲ ಎಂದು ಕಾಯ್ದೆ ವಿರೋಧಿಸಿದವ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!