May 17, 2024

MALNAD TV

HEART OF COFFEE CITY

ಮಿಲಾದ್ ಸಂಗಮದಲ್ಲಿ ಸರ್ವರ ಸಮಾಗಮ

1 min read

ಚಿಕ್ಕಮಗಳೂರು:- ಮೂಡಿಗೆರೆ ತಾಲೂಕಿನಲ್ಲೇ ಪ್ರಥಮ ಮಸೀದಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಬದ್ರಿಯಾ ಜುಮಾ ಮಸೀದಿ ಹಂಡುಗುಳಿಯಲ್ಲಿ ಇಂದು ಅದ್ದೂರಿ ಈದ್ ಮಿಲಾದ್ ಆಚರಿಸಲಾಯಿತು.
ಪ್ರವಾದಿ ಪೈಗಂಬರ್ ಮೊಹಮ್ಮದ್(ಸ.ಅ) ರವರ ಜನ್ಮ ದಿನಾಚರಣೆಯನ್ನು ಜಗತ್ತಿನಾದ್ಯಂತ ಆಚರಣೆ ಮಾಡಲಾಗುತ್ತಿದೆ ಅದರ ಪ್ರಯುಕ್ತ ಇಂದು ಮಸೀದಿ ವಠಾರದಿಂಜ ಬಿದರಹಳ್ಳಿ ದರ್ಗಾದವರೆಗೆ ವಿಜೃಂಭಣೆಯಿಂದ ಸಾಂಸ್ಕೃತಿಕ ಮೆರುಗು ನೀಡುವ ನೆಬಿಗಾನ, ಹೃದಯ ಶ್ಪರ್ಸಿ ಪ್ರವಾದಿ ಹಿತವಚನ ದೊಂದಿಗೆ ತೆರೆದ ವಾಹನದಲ್ಲಿ ಮೆರವಣಿಗೆ ಹೋಗುವ ಮುಖಾಂತರ ಕಾರ್ಯಕ್ರಮಕ್ಕೆ ಅರ್ಥಪೂರ್ಣ ಸೊಬಗನ್ನು ನೀಡಲಾಯಿತು.
ಕಾರ್ಯಕ್ರಮದ ಯಶಸ್ಸಿಗೆ ಆಡಳಿತ ಕಮೀಟಿಯ ಅಧೀನದಲ್ಲಿ ಬರುವಂತಹ ದಾರ್ರುಸ್ಸಲಾಂ ಯೂತ್ ಕಮೀಟಿ ಹಂಡುಗುಳಿ ಇವರ ಹಗಲಿರುಳ ಪ್ರಯತ್ನ ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಿತು.

ನಂತರ ಮಕ್ಕಳ ಸಾಂಸ್ಕೃತಿಕ ಹಾಡು ಪ್ರವಾದಿ ಪೈಗಂಬರ್ ಮೊಹಮ್ಮದ್ (ಸ.ಅ) ಜೀವನ ಚರಿತ್ರೆಯ ಕುರಿತು ಸಣ್ಣ ಮಕ್ಕಳ ಭಾಷಣವೂ ಸೇರಿದಂತೆ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳು ಸಭಿಕರ ಉತ್ಸಾಹ ಹಾಗೂ ಹುಮ್ಮಸ್ಸು ದ್ವಿಗುಣಗೊಳಿಸಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹೆಚ್.ಬಿ.ಕುಂಞಿಅಹ್ಮದ್, ನೆರವೇರಿಸಿದ ನಂತರ ಮಸೀದಿ ಧರ್ಮಗುರು ನಝೀರ್ ಸಖಾಫಿ ಮಾತನಾಡಿ ಈ ಕಾರ್ಯಕ್ರಮ ಯಶಸ್ವಿಯ ಹಿಂದೆ ಇಲ್ಲಿನ ಯುವಕರು ಪ್ರಮುಖ ಪಾತ್ರ ವಹಿಸಿದ್ದು ನಾವು ಶ್ಲಾಘಿಸಬೇಕಾಗಿದೆ ಹಾಗೆಯೇ ಅವರ ಕೊಡುಗೆಗಳು ಮುಂದುವರಿಯುವ ನಿಟ್ಟಿನಲ್ಲಿ ಇಲ್ಲಿನ ಹಿರಿಯರು ಹಾಗೂ ಪ್ರಮುಖರ ಬೆಂಬಲ ನಿರಂತರವಾಗಿರಬೇಕು ಹಾಗೂ ಇವರ ಉನ್ನತಿಗೆ ನಾವೆಲ್ಲರೂ ಆ ಭಗವಂತನಲ್ಲಿ ಪ್ರಾರ್ಥಿಸಬೇಕು ಎಂದರು.

 


ಕಾರ್ಯಕ್ರಮದಲ್ಲಿ ಮಿಲಾದ್ ಆಚರಣೆಗೆ ಸಂಬಂಧಿಸಿದಂತೆ ಕಾರ್ಯಕ್ರಮದಲ್ಲಿ ಯಾವುದೇ ರೀತಿಯ ತೊಡಕು ಬರದ ಹಾಗೆ ಸರ್ಕಾರ ನೀಡುವ ಅನುಮತಿಯನ್ನು ಸುಲಭ ರೀತಿಯಲ್ಲಿ ಪಡೆಯಲು ಎಲ್ಲಾ ರೀತಿಯಲ್ಲೂ ಸಹಕರಿಸಿದ ಪತ್ರಕರ್ತರಾದ ಮನ್ಸೂರ್ ಹೆಚ್,ಆರ್ ಹುಡುಗುಳಿ ಇವರಿಗೆ ದಾರ್ರುಸ್ಸಲಾಂ ಯೂತ್ ಕಮೀಟಿ ಹಂಡುಗುಳಿ ಇವರ ವತಿಯಿಂದ ಶಾಲು ಹೊದಿಸಿ ಸನ್ಮಾನಿಸಲಾಯಿತು ಹಾಗೂ ವರ್ಷಂಪ್ರತಿ ನಡೆದುಕೊಂಡು ಬಂದಂತಹ ಹಿರಿಯರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಕೆಲವರಿಗೆ ಸನ್ಮಾನ ಮಾಡಲಾಯಿತು.

ವೇದಿಕೆಯಲ್ಲಿ ಹುಸೈನ್ ಸಹದಿ, ಕಾರ್ಯದರ್ಶಿ ರಝಾಕ್,ದಾರ್ರುಸ್ಸಲಾಂ ಯೂತ್ ಕಮೀಟಿ ಅಧ್ಯಕ್ಷ, ಸಿದ್ದೀಕ್ ಹೆಚ್.ಐ, ಸದಸ್ಯರಾದ ತಾಜುದ್ದೀನ್, ನಿಜಾಂ, ಹಾಗೂ ಹಾಗು ಧಿಕ್ರ್ ಕಮೀಟಿ ಅಧ್ಯಕ್ಷ ಸಯ್ಯದ್ ಅಲಿ, ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!