April 29, 2024

MALNAD TV

HEART OF COFFEE CITY

ಶವವಿದ್ದ ಟ್ರಾಕ್ಟರ್ ರಸ್ತೆಗೆ ಅಡ್ಡ ನಿಲ್ಲಿಸಿ ಪ್ರತಿಭಟನೆ

1 min read

ಚಿಕ್ಕಮಗಳೂರು : ಸ್ಮಾಶಾನಕ್ಕೆ ಹೋಗುವ ದಾರಿಗಾಗಿ ರಸ್ತೆಯಲ್ಲಿ ಶವವಿದ್ದ ಟ್ರಾಕ್ಟರ್ ಅಡ್ಡ ನಿಲ್ಲಿಸಿ ಪ್ರತಿಭಟನೆ ನಡೆಸಿರುವ ಮನಕಲಕುವ ಘಟನೆ ಹಿರೇಕಾನವಂಗಲದಲ್ಲಿ ನಡೆದಿದೆ.
ಜಿಲ್ಲೆಯ ಅಜ್ಜಂಪುರ ತಾಲ್ಲೂಕಿನ ಹಿರೇಕಾನವಂಗಲ ಗ್ರಾಮದಲ್ಲಿ ದಲಿತ ಸಮುದಾಯದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದು ಸ್ಮಾಶನಕ್ಕೆ ಹೋಗುವ ದಾರಿಯಲ್ಲಿ ಖಾಸಗಿ ವ್ಯಕ್ತಿಗಳು ಉಳುಮೆ ಮಾಡಿದ್ದು ಸ್ಮಶಾನಕ್ಕೆ ಹೋಗಲು ದಾರಿಯಿಲ್ಲದೆ ಪರದಾಡುವಂತಾಗಿದ್ದು. ಇದರಿಂದ ಮನನೊಂದ ಗ್ರಾಮಸ್ಥರು ರಸ್ತೆಯಲ್ಲೇ ಶವವಿದ್ದ ಟ್ರಾಕ್ಟರ್ ಅಡ್ಡ ನಿಲ್ಲಿಸಿ ಪ್ರತಿಭಟಿಸಿದರು. ಗ್ರಾಮಸ್ಥರು ತಹಶೀಲ್ದಾರ್‌ಗೆ ಕಳೆದ ಒಂದು ರ‍್ಷದಿಂದಲೂ ಮನವಿ ಸಲ್ಲಿಸುತ್ತಾ ಬಂದಿದ್ದೇವೆ. ಆದರೂ ಕೂಡಾ ಏನೂ ಪ್ರಯೋಜನವಾಗಿಲ್ಲ ಎಂದು ಪ್ರತಿಭಟನಾಕಾರರು ಅಸಮಾದಾನ ವ್ಯಕ್ತಪಡಿಸಿದ್ದಾರೆ.ತಕ್ಷಣ ಅಜ್ಜಂಪುರ ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿ ಪ್ರತಿಭಟನಾನಿರತರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದು. ಟ್ರಾಫಿಕ್ ಕ್ಲಿಯರ್ ಮಾಡಿ ಸುಗಮ ಸಂಚಾರಕ್ಕೆ ಅನುವುಮಾಡಿಕೊಟ್ಟರು.
ಕಳೆದ 10 ರ‍್ಷದಿಂದ ಸ್ಮಶಾನದ ದಾರಿಗಾಗಿ ಗ್ರಾಮಸ್ಥರು ನಿರಂತರವಾಗಿ ಹೋರಾಟ ನಡೆಸುತ್ತಾ ಬಂದಿದ್ದರೂ ಸಹಾ ಇನ್ನೂ ನ್ಯಾಯ ದೊರಕಿಲ್ಲ ಎಂಬುದು ಹಿರೇಕಾನವಂಗಲ ಗ್ರಾಮಸ್ಥರ ಅಳಲಾಗಿದೆ.

ಗ್ರಾಮದ ರ‍್ವೆ ನಂ.10 ರಲ್ಲಿ ಬರುವ 10.36 ಎಕರೆ ತುರುಮಂದೆ, ರ‍್ವೆ ನಂ. 27ರಲ್ಲಿ ಬರುವ 19.27 ಎಕರೆ ಜಾಡನ ಕಟ್ಟೆ, ರ‍್ವೆ ನಂ. 62 ರಲ್ಲಿ 3.27 ಎಕರೆ ಸ್ಮಶಾನವಿದೆ. ಈ ಎಲ್ಲಾ ರ‍್ಕಾರಿ ಜಮೀನುಗಳಿಗೆ ಹೋಗಬೇಕಾದರೆ. ಈ ದಾರಿಯಲ್ಲೇ ಹೋಗಬೇಕಾಗಿದ್ದು. ಪ್ರಮುಖವಾಗಿ ಬೇಕಾಗಿರುವ ದಾರಿಯೇ ಇಲ್ಲದಂತಾಗಿದೆ. ಖಾಸಗಿ ವ್ಯಕ್ತಿಗಳಿಬ್ಬರು ತಮ್ಮ ಒಳಜಗಳದಿಂದ ಸರ‍್ವಜನಿಕರಿಗೆ ದಾರಿ ಇಲ್ಲದಂತೆ ಮಾಡಿದ್ದು ಇಬ್ಬರ ಜಗಳದಲ್ಲಿ ಊರ ಮಂದಿಗೆ ಸ್ಮಶಾನದ ದಾರಿ ಇಲ್ಲದಂತಾಗಿದೆ ಎಂದು ಸ್ಥಳಿಯರು ಆಕ್ರೋಶ ಹೊರಹಾಕುತ್ತಿದ್ದಾರೆ.
ಸರಿಸುಮಾರು 250 ಮನೆಗಳಿದ್ದು. ಲಿಂಗಾಯತರು, ಸವಿತಾ ಸಮಾಜ, ವೈಷ್ಣವ ಸಮಾಜ, ಕುಂಬಾರ, ಹಾಗೂ ದಲಿತ ಸಮುದಾಯಗಳಿವೆ. ಈ ಗ್ರಾಮಕ್ಕೆ ಇರುವುದು ಇದೊಂದೇ ಸ್ಮಶಾನ. ಇದರಲ್ಲಿಯೂ 1 ಎಕರೆ ಒತ್ತುವರಿಯಾಗಿದೆ. ಒತ್ತುವರಿ ಒಂದು ಕಡೆಯಾದರೆ ದಾರಿ ಇಲ್ಲದಿರುವುದು ಮತ್ತೊಂದು ಸಮಸ್ಯೆಯಾಗಿದೆ. ಈ ಊರಿನ ಜನ ಬದುಕಿದ್ದಾಗ ಸಮಸ್ಯೆಗಳ ಜೊತೆ ಹೋರಾಡುವುದಲ್ಲದೆ ಸಾವಿನ ಬಳಿಕ ಸ್ಮಶಾನದ ದಾರಿಗಾಗಿ ಮೃತರ ಕುಟುಂಬಸ್ಥರು ಹೋರಾಟ ಮಾಡಬೇಕಾದ ಪರಿಸ್ಥಿತಿ ಉಂಟಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ತುರುಮಂದೆ, ಜಡಕನಕಟ್ಟೆ, ಸ್ಮಶಾನ ಹಾಗೂ ಗ್ರಾಮದ 250 ಎಕರೆಗೂ ಹೆಚ್ಚು ಕೃಷಿ ಭೂಮಿಯಿದ್ದು. ಇವೆಲ್ಲವಕ್ಕೂ ಕೂಡ ಇದೇ ಮರ‍್ಗದಲ್ಲಿ ಹೋಗಬೇಕಾಗಿರುವುದರಿಂದ ಸಂಬಂಧಪಟ್ಟ ಇಲಾಖೆಯವರು ಕೂಡಲೇ ಸ್ಥಳಕ್ಕೆ ಬಂದು ಪರಿಶೀಲನೆ ಮಾಡಿ ನಕಾಶೆಯಲ್ಲಿರುವಂತೆ ದಾರಿ ಬಿಡಿಸಿಕೊಟ್ಟು ಸ್ಮಶಾನದ ಅಭಿವೃದ್ಧಿ ಹಾಗೂ ಶಾಶ್ವತವಾಗಿ ಒಂದು ಉತ್ತಮ ರಸ್ತೆ ಮಾಡಿಕೊಡುವಂತೆ ಒತ್ತಾಯಿಸಿದ್ದಾರೆ.

 

ಹಿರೇಕಾನವಂಗಲ ಗ್ರಾಮದ ರ‍್ವೆ ನಂ. 27ರಲ್ಲಿ ಬರುವ 19.27 ಎಕರೆ ಜಾಡನ ಕಟ್ಟೆ ಕೆರೆಯು ಸುತ್ತಮುತ್ತ ಒತ್ತುವರಿಯಾಗಿದ್ದು ಅಡಿಕೆ ನೆಡಲಾಗಿದ್ದು. ಈಗಾಗಲೇ ಕಟ್ಟೆಯ ರ‍್ವೆ ಕರ‍್ಯ ನಡೆಯುತ್ತಿದ್ದು ರ‍್ಧ ತೆರವುಗೊಳಿಸಲಾಗಿದೆ. ಇನ್ರ‍್ಧ ತೆರವು ಕರ‍್ಯ ಬಾಕಿಯಿದ್ದು. ತೆರವುಗೊಳಿಸಿರುವ ಜಾಗಕ್ಕೆ ಗ್ರಾ.ಪಂ.ವತಿಯಿಂದ ಜೆಸಿಬಿ ಮೂಲಕ ಫೆನ್ಸಿಂಗ್ ಮಾಡಲಾಗಿದೆ. ಬಾಕಿ ಉಳಿದಿರುವ ತೆರವು ಕರ‍್ಯಾಚರಣೆಯನ್ನು ಶೀಘ್ರದಲ್ಲಿಯೇ ಮುಗಿಸಬೇಕೆಂಬುದು ಗ್ರಾಮಸ್ಥರ ಒತ್ತಾಯ.

ಮಾವ-ಅಳಿಯನ ಒಳಜಗಳದಲ್ಲಿ ದಾರಿ ಕಾಣದ ಸ್ಮಶಾನ
ಸ್ಮಶಾನಕ್ಕೆ ಹೋಗುವ ನಕಾಶೆ ದಾರಿಯು ಖಾಸಗಿ ವ್ಯಕ್ತಿಗಳ ಜಮೀನಿನಲ್ಲಿ ಇದ್ದು ಮಾವ ಅಳಿಯ ಇಬ್ಬರು ನಾ ಮುಂದು, ತಾ ಮುಂದು ಎಂದು ಪೈಪೋಟಿ ನಡೆಸುತ್ತಿದ್ದು. ಅಡಿಕೆ ಬೆಳೆದಿದ್ದಾರೆ. ದಾರಿ ಬಿಡಲು ಮೀನಾಮೇಷ ಎಣ ಸುತ್ತಿರುವ ಹಿನ್ನೆಲೆಯಲ್ಲಿ ಸ್ಮಶಾನಕ್ಕೆ ದಾರಿ ಇಲ್ಲವಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಸ್ಮಶಾನದ ರಸ್ತೆಗಾಗಿ ಕಳೆದ 3 ತಿಂಗಳಿಂದ ನಿರಂತರವಾಗಿ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರುತ್ತಲೇ ಇದ್ದೇವೆ. ಪ್ರತಿಭಟನೆ ನಡೆಯುತ್ತಿದ್ದ ಸಂರ‍್ಭದಲ್ಲಿ ತಹಶೀಲ್ದಾರ್, ಕಂದಾಯ ನಿರೀಕ್ಷರು, ಪೊಲೀಸರು ಸೇರಿದಂತೆ ಎಲ್ಲರಿಗೂ ಫೋನ್ ಮಾಡಿದರು ಯಾರೂ ಸ್ಪಂಧಿಸಿಲ್ಲ ಎಂದು, ಗ್ರಾಮಸ್ಥ ಮಂಜುನಾಥ್ ಹೇಳಿದರು.

ಇನ್ನು ಗ್ರಾ.ಪಂ.ಸದಸ್ಯರು ಲಿಂಗರಾಜು ಮಾತಾನಾಡಿ
ಗ್ರಾಮ ಪಂಚಾಯಿತಿ ವತಿಯಿಂದ ಹಿರೇಕಾನವಂಗಲ ಗ್ರಾಮದ ಸ್ಮಶಾನದ ರಸ್ತೆ ತೆರವು ಮಾಡುವಂತೆ ತಹಶೀಲ್ದಾರ್ ಅವರಿಗೆ ಒಂದು ರ‍್ಷದಿಂದ ನಿರಂತರವಾಗಿ ಮನವಿ ಮಾಡುತ್ತಿದ್ದೇವೆ. ಇಡೀ ಊರಿಗೆ ಇರುವುದು ಒಂದೇ ಸ್ಮಶಾನ ಸತ್ತಾಗ ಹೂಳುವುದಕ್ಕೂ ಜನ ಹರ ಸಾಹಸ ಪಡಬೇಕಾಗಿದೆ. ಒತ್ತುವರಿ ತೆರವುಗೊಳಿಸಿದರೆ ಗ್ರಾ.ಪಂ.ನಿಂದ ರಸ್ತೆ ಮಾಡಿಕೊಡಲಾಗುವುದು.

ಇನ್ನು ಈ ಬಗ್ಗೆ ಅಜ್ಜಂಪುರ ತಹಶೀಲ್ದಾರ್ ವಿಶ್ವೇಶ್ವರ ರೆಡ್ಡಿ ಮಾತಾನಾಡಿ ಸ್ಮಶಾನಕ್ಕೆ ಹೋಗುವ ನಕಾಶೆ ದಾರಿ ಒತ್ತುವರಿಯಾಗಿಲ್ಲ, ಅವರದೇ ಜಮೀನಿನಲ್ಲಿ ಹಾದುಹೋಗಿದೆ. ಉಳುಮೆ ಮಾಡಿದ್ದಾರೆ, ಅವರ ಕೌಟುಂಬಿಕ ಕಲಹದ ಹಿನ್ನೆಲೆ ದಾರಿಗೆ ಸಮಸ್ಯೆಯಾಗಿದೆ. ಅವರ ಬಳಿಯೂ ಮಾತನಾಡಿದ್ದೇನೆ. ಬಿಟ್ಟುಕೊಡುವುದಾಗಿ ತಿಳಿಸಿದ್ದಾರೆ. ಸ್ಥಳ ಪರಿಶೀಲನೆ ಮಾಡಿ ರ‍್ವೆ ಕರ‍್ಯ ನಡೆಸಿ ದಾರಿ ಬಿಡಿಸಿ ಕೊಡಲಾಗುವುದು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!