May 5, 2024

MALNAD TV

HEART OF COFFEE CITY

ವ್ಯಾಕ್ಸಿನ್ ಕುರಿತು ದೇಶವನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾತು

1 min read

ವ್ಯಾಕ್ಸಿನ್ ಕುರಿತು ದೇಶವನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾತು

ಜೂನ್ 21 ರಿಂದಲೇ 18 ವಷ೯  ಮೇಲ್ಪಟ್ಟವರಿಗೆ ಲಸಿಕೆ ನೀಡಲು ಕೈಗೊಳ್ಳುತ್ತೇವೆ.

ರಾಜ್ಯಗಳ ಲಸಿಕೆ ವಿತರೆಣೆ ಇನ್ನು ಮುಂದೆ ಕೇಂದ್ರ ಸಕಾ೯ರದ ಹೊಣೆಯಾಗಿದೆ.

ಎಲ್ಲಾ ವಗ೯ದವರಿಗೂ ಭಾರತ ಸಕಾ೯ರದ ಅಭಿಯಾನುಸಾರ ಉಚಿತ ಲಸಿಕೆ ನೀಡಲಾಗುತ್ತದೆ.

ಲಸಿಕೆ ವಿಚಾರದಲ್ಲಿ ಯಾವುದೇ ಟೀಕೆಗಳು ಅನಗತ್ಯ. ಪ್ರತೀ ನಾಗರಿಕ   ಲಸಿಕೆ   ಪಡೆಯುವುದೇ ಪ್ರತೀಯೋವ೯ರ ಜವಬ್ದಾರಿಯುತ ಹೊಣೆಯಾಗಿರಲಿ.

ಮೇ  ತಿಂಗಳಿನಿಂದಲೇ ಅನ್ವಯವಾಗುವಂತೆ   ಪ್ರಧಾನಿ ಗರೀಬ್ ಕಲ್ಯಾಣ್  ಯೋಜನೆಯಡಿ  ದೀಪಾವಳಿಯವರೆಗೆ (ನವಂಬರ್ ) ಉಚಿತ ಪಡಿತರಕ್ಕೆ   ಕ್ರಮ

100 ವಷ೯ಗಳಲ್ಲಿ ಕಂಡು ಬಂದಿರುವ ಮಹಾಮಾರಿ ಕೋರೋನಾ ಆಗಿದೆ.

ಕೋರೋನಾ ಎರಡನೇ ಅಲೆಯನ್ನು ಭಾರತ ಎದುರಿಸಿದೆ.

ಸಮಾರೋಪಾದಿಯಲ್ಲಿ ಸವ೯ರೂ ಕೋರೋನಾ ವಿರುದ್ದ ಹೋರಾಡಿದ್ದಾರೆ.

ಬಹಳ ಕಡಮೆ ಸಮಯದಲ್ಲಿ ವೈದ್ಯಕೀಯ ಸೌಲಭ್ಯಗಳನ್ನು ಭಾರತ ಕಂಡಿದೆ.

ವಿಶ್ವದ ಎಲ್ಲೆಡೆಗಳಿಂದಲೂ ಭಾರತಕ್ಕೆ ನೆರವನ್ನು ಪಡೆದಿದ್ದೇವೆ.

ಜಗತ್ತಿನ ಮೂಲೆಮೂಲೆಗಳಿಂದಲೂ ವೈದ್ಯಕೀಯ ಸಹಾಯ ಪಡೆದಿದ್ದೇವೆ.

ಕಣ್ಣಿಗೆ ಕಾಣದ ಕೋರೋನಾ ವೈರಸ್ ವಿರುದ್ದ ಸಾಮಾಜಿಕ ಅಂತರ, ಮಾಸ್ಕ್, ಲಸಿಕೆಗಳೇ ಪ್ರಬಲ ಅಸ್ತ್ರ.

ಜಗತ್ತಿನಲ್ಲಿಯೇ ಲಸಿಕೆಗೆ ಬೇಡಿಕೆಯಿದೆ. ಭಾರತ ಜಗತ್ತಿನಲ್ಲಿ ಲಸಿಕೆ ಉತ್ಪಾದನೆಯೊಂದಿಗೆ  ಬೇಡಿಕೆಗೆ ತಕ್ಕಂತೆ ಸರಬರಾಜು ಮಾಡುತ್ತಿದೆ.

ನಾವು ಲಸಿಕೆ ಕಂಡು ಹಿಡಿಯದೇ ಹೋಗಿದ್ದಲ್ಲಿ ವಿಶಾಲವಾದ ಬೖಹತ್ ದೇಶದ ಸ್ಥಿತಿ ಏನಾಗುತಿತ್ತು ಯೋಚಿಸಿ.

ಭಾರತ ಕಳೆದ ವಷ೯ವೇ ಲಸಿಕೆ ಉತ್ಪಾದನೆಗೆ ಸೂಕ್ತ ಗಮನ ನೀಡಿದ್ದೇ ಲಸಿಕೆ ವಷ೯ ಎಲ್ಲರಿಗೂ ಲಭಿಸುವಂತಾಯಿತು.

ಲಸಿಕೆಗಾಗಿ ಮೊದಲು 10 ವಷ೯ಗಳೇ ಕಾಯಬೇಕಾಗಿತ್ತು. ಕೋರೋನಾ ಸಂದಭ೯ ಹೀಗಾಗಲಿಲ್ಲ. ಭಾರತವೇ ಲಸಿಕೆ ಕಂಡು ಹಿಡಿದು ಉತ್ಪಾದನೆಗೆ ಮುಂದಾದದ್ದು ಐತಿಹಾಸಿಕ ಬೆಳವಣಿಗೆಯಾಗಿದೆ. – ಪ್ರಧಾನಿ ಮೋದಿ

ಜಗತ್ತಿನಲ್ಲಿಯೇ ಭಾರತ ಕೋವಿಡ್ ನಿರೋಧಕ ಲಸಿಕೆ ಹಂಚಿಕೆಯಲ್ಲಿ ಮುಂದೆ ಇದೆ

ವೈದ್ಯಕೀಯ ಸೌಲಭ್ಯಗಳಲ್ಲಿಯೂ ಭಾರತ ಮಹತ್ವದ ಸಾಧನೆ ಮಾಡಿದೆ.

ಮಿಷನ್ ಇಂದ್ರಧನುಷ್ ಮೂಲಕ ಭಾರತ ಸುಸಜ್ಜಿತ ವೈದ್ಯಕೀಯ ಸೌಲಭ್ಯಗಳನ್ನೂ ಕೈಗೊಂಡಿದೆ.

ಕೋರೋನಾದಂಥ ಬಹಳ ದೊಡ್ಡ ಸಂಕಷ್ಟವನ್ನು ಭಾರತ ಹೇಗೆ ಎದುರಿಸುತ್ತದೆ ಎಂಬ ವಿದೇಶಗಳ ಪ್ರಶ್ನೆಗೆ ಸೂಕ್ತ ಉತ್ತರ ದೊರಕಿದೆ.

ಮೇಡ್ ಇನ್ ಇಂಡಿಯಾ ಯೋಜನೆಯನ್ನು 1 ವಷ೯ದಲ್ಲಿಯೇ ಜಾರಿಗೊಳಿಸುವ  ಮೂಲಕ ಭಾರತದಲ್ಲಿಯೇ ಎರಡು ಲಸಿಕೆ ಕಂಡುಹಿಡಿದು ಸಾಕಷ್ಟು ಪ್ರಮಾಣದಲ್ಲಿ ಉತ್ಪಾದನೆ ಕೈಗೊಂಡು ವಿದೇಶಗಳಿಗೆ ಉತ್ತರ ನೀಡಿದ್ದೇವೆ.

ಈಗಾಗಲೇ ಭಾರತದಲ್ಲಿ   27 ಕೋಟಿ  ಜನರಿಗೆ ಲಸಿಕೆ ನೀಡಲಾಗಿದೆ.

ಕಳೆದ ವಷ೯ದ ಏಪ್ರಿಲ್ ನಲ್ಲಿ ಕೋರೋನಾ ಸೋಂಕಿನ ಪ್ರಮಾಣ ಅತೀ ಕಡೆಮೆಯಿದ್ದಾಗಲೇ ಭಾರತದಲ್ಲಿ ಲಸಿಕೆ ಉತ್ಪಾದನೆಗೆ ಅವಕಾಶ ನೀಡಲಾಗಿತ್ತು.

ಲಸಿಕೆ ನೀತಿ ಪ್ರಾಮಾಣಿಕವಾಗಿದೆ. ನಿರಂತರವಾಗಿದೆ.

ವಿಶ್ವಾಸ ಇದ್ದರೆ ಮಾತ್ರ  ಯಶಸ್ಸು ಸಾಧ್ಯ. ಲಸಿಕೆಯಲ್ಲಿ ವಿಶ್ವಾಸ ಕಂಡುಬಂದಿದೆ.

ಇದೀಗ ದೇಶದ 7 ಸಂಸ್ಥೆಗಳು ಲಸಿಕೆ ಉತ್ಪಾದನೆಯಲ್ಲಿ ಸಕ್ರಿಯವಾಗಿದೆ.

ಮಕ್ಕಳ ಆರೋಗ್ಯದ ದೖಷ್ಟಿಯಿಂದಲೂ ಲಸಿಕೆ ಉತ್ಪಾದನೆಗೆ ಆದ್ಯತೆ ನೀಡಲಾಗಿದೆ.

ಮೂಗಿನ ಮೂಲಕ ಸ್ಪೈ ಮಾಡಿಕೊಳ್ಳುವ ಲಸಿಕೆಯತ್ತಲೂ ಭಾರತ ಗಮನ ನೀಡಿದೆ.

ಜಗತ್ತಿನಲ್ಲಿಯೇ ಇದು ಹೊಸ ವಿಧಾನದ ಆವಿಷ್ಕಾರವಾಗಲಿದೆಪ್ರಧಾನಿ ಮೋದಿ ಭರವಸೆಯ ನುಡಿ.

ವಿದೇಶಗಳಿಂದಲೂ ಲಸಿಕೆ ಖರೀದಿಸಿಕೊಳ್ಳಲಾಗುತ್ತದೆ.

ಕೋರೋನಾ ಸಮರ ಸೈನಿಕರಿಗೆ ಆದ್ಯತೆ ಮೇರೆಗೆ ಲಸಿಕೆ ನೀಡಲಾಗಿದೆ.

ವೈದ್ಯಕೀಯ ಸಿಬ್ಬಂದಿಗಳು, ಪೌರಕಾಮಿ೯ಕರು, ಡಿ ಗ್ರೂಪ್ ಸಿಬ್ಬಂದಿಗಳಿಗೆ ಲಸಿಕೆ ನೀಡದಿದ್ದರೆ ಮತ್ತಷ್ಟು ಸಮಸ್ಯೆ ಆಗುತ್ತಿತ್ತು.

ದೇಶದಲ್ಲಿ ಕೋರೋನಾ ಸೋಂಕಿನ ಪ್ರಮಾಣ ಇಳಿಮುಖವಾಗುತ್ತಿದೆ.

ಇದಕ್ಕಾಗಿ ಎಲ್ಲಾ ಭಾರತೀಯರಿಗೂ ಅಭಿನಂದನೆ ಸಲ್ಲಿಸುತ್ತೇನೆ.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!