April 27, 2024

MALNAD TV

HEART OF COFFEE CITY

ಹೆಲ್ಮೆಟ್ ಹಾಕದ ವಕೀಲರ ಮೇಲೆ ಪೊಲೀಸರ ಹಲ್ಲೆ

1 min read

ಹೆಲ್ಮೆಟ್ ಹಾಕಿಲ್ಲ ಎಂದು ಚಿಕ್ಕಮಗಳೂರು ನಗರ ಪೊಲೀಸರು ವಕೀಲರ ಮೇಲೆ ಮನಸ್ಸೋ ಇಚ್ಛೆ ಹಲ್ಲೆ ನಡೆಸಿದ್ದ ಆರೋಪದಡಿ ಚಿಕ್ಕಮಗಳೂರು ಎಸ್ಪಿ ವಿಕ್ರಂ ಅಮಟೆ ಆರು ಜನ ನಗರ ಠಾಣಾ ಪೊಲೀಸರನ್ನ ಅಮಾನತು ಮಾಡಿದ್ದಾರೆ. ಓರ್ವ ಪಿಎಸ್‍ಐ, ಓರ್ವ ಎ.ಎಸ್.ಐ. ಓರ್ವ ಹೆಡ್ ಕಾನ್ಸಟೇಬಲ್ ಸೇರಿದಂತೆ ಮೂವರು ಪೇದೆಗಳನ್ನ ಅಮಾನತು ಮಾಡಿದ್ದಾರೆ. ಗುರುವಾರ ರಾತ್ರಿ 8 ಗಂಟೆ ವೇಳೆಗೆ ನಗರದ ಮಾರ್ಕೆಟ್ ರಸ್ತೆಯಲ್ಲಿ ನಗರ ಠಾಣೆ ಮುಂಭಾಗ ಯುವ ವಕೀಲ ಪ್ರೀತಂ ಹೆಲ್ಮೆಟ್ ಹಾಕದೆ ಬೈಕಿನಲ್ಲಿ ಹೋಗುತ್ತಿದ್ದರು. ವಕೀಲನನ್ನ ಪ್ರಶ್ನಿಸಿದ ಪೊಲೀಸರು ಹಾಗೂ ವಕೀಲನ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಬೈಕಿನ ಕೀ ಏಕೆ ತೆಗೆಯುತ್ತೀರಾ ಎಂದು ಪ್ರಶ್ನಿಸಿದ ವಕೀಲ ದಂಡ ಕಟ್ಟುತ್ತೇನೆ ಎಂದು ಪೊಲೀಸರ ಜೊತೆ ಮಾತಿನ ಚಕಮಕಿ ನಡೆಸಿದ್ದಾರೆ. ಠಾಣೆ ಎದುರೇ ಘಟನೆ ನಡೆದಿದ್ದರಿಂದ ಪೊಲೀಸರು ಆತನನ್ನ ಠಾಣೆಗೆ ಕರೆದೊಯ್ದು ಮನಸ್ಸೋ ಇಚ್ಛೆ ಹಲ್ಲೆ ಮಾಡಿದ್ದಾರೆಂದು ವಕೀಲರ ಸಂಘ ಆರೋಪಿಸಿದೆ.

 

ಪ್ರೀತಂ ಎದೆ ಹಾಗೂ ಬೆನ್ನಿಗೆ ಗಂಭೀರ ಗಾಯವಾಗಿದ್ದು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವಿಷಯ ತಿಳಿದು ಆಸ್ಪತ್ರೆಗೆ ಹೋಗಿ ಆತನನ್ನ ನೋಡಿಕೊಂಡು ಠಾಣೆಗೆ ಬಂದ ವಕೀಲರ ಸಂಘ ಇಡೀ ರಾತ್ರಿ ಪೊಲೀಸ್ ಠಾಣೆ ಮುಂದೆ ಬೀಡುಬಿಟ್ಟಿತ್ತು. ಅವರನ್ನ ಅರೆಸ್ಟ್ ಮಾಡಿ ಎಂದು ಆಗ್ರಹಿಸಿತ್ತು. ಆದರೆ, ಪೊಲೀಸರು ವಿಚಾರಣೆಗೊಳಪಡಿಸುತ್ತೇವೆ ಎಂದಾಗ ವಕೀಲರು ವಿಚಾರಣೆ ಬೇಡ ಕೇಸ್ ದಾಖಲಿಸಿ ಎಂದು ಬಂಧಿಸಿ ಎಂದು ಆಗ್ರಹಿಸಿದ್ದರು. ಪ್ರೀತಂ ಮೇಲೆ ಹಲ್ಲೆ ಮಾಡಿದ ಪೇದೆಯನ್ನ ಆಸ್ಪತ್ರೆಯಲ್ಲಿ ರಿಪೋರ್ಟ್ ತೆಗೆದುಕೊಳ್ಳು ಕಳಿಸಿದ್ದಾರೆ. ಇದು ವಕೀಲರ ಆಕ್ರೋಶಕ್ಕೆ ಕಾರಣವಾಗಿತ್ತು. 307 ಕೇಸ್ ದಾಖಲಾಗಿದೆ. ಆರೋಪಿಗಳು ಠಾಣೆಯ ಒಳಗೆ ಇದ್ದಾರೆ, ಬಂಧಿಸಿ ಎಂದು ಪಟ್ಟು ಹಿಡಿದಿದ್ದರು. ಸುಮಾರು ಆರು ಗಂಟೆಗಳ ವಕೀಲರ ಹೋರಾಟದ ಫಲವಾಗಿ ಎಸ್ಪಿ ಆರು ಜನ ಪೊಲೀಸರನ್ನ ಅಮಾನತು ಮಾಡಿ ವಿಚಾರಣೆಗೆ ಡಿ.ವೈ.ಎಸ್.ಪಿ. ನೇತೃತ್ವದ ತಂಡ ರಚಿಸಿದ್ದಾರೆ. ಆದರೆ, ವಕೀಲರ ಸಂಘ ಆರು ಜನರನ್ನ ಅಮಾನತು ಮಾಡಿ ಆದೇಶಿಸಿದ್ದಾರೆ. ಆರು ಜನ ಅರೆಸ್ಟ್ ಆಗುವವರೆಗೂ ಹೋರಾಟ ನಿಲ್ಲಿಸುವುದಿಲ್ಲ ಎಂದು ಎಚ್ಚರಿಕೆ ನೀಡಿರೋ ವಕೀಲರ ಸಂಘ ಹೋರಾಟವನ್ನ ಮುಂದುವರೆಸಲು ಮುಂದಾಗಿದ್ದಾರೆ.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!