April 29, 2024

MALNAD TV

HEART OF COFFEE CITY

ಪ್ರವಾಸಿ ಟ್ಯಾಕ್ಸಿ ನೋಂದಣಿಗೆ ಆನ್‌ಲೈನ್ ವ್ಯವಸ್ಥೆ

1 min read

ಚಿಕ್ಕಮಗಳೂರು : ರಜೆ ದಿನಗಳಲ್ಲಿ ಪ್ರವಾಸಿಗಳ ದಂಡು ಮಲೆನಾಡಿನ ಪ್ರವಾಸಿ ಕೇಂದ್ರಗಳಿಗೆ ಅತಿ ಹೆಚ್ಚು ಸಂಖ್ಯೆಯಲ್ಲಿ ಬರುತ್ತಿದ್ದು, ಇದರಿಂದ ಸ್ಥಳೀಯರಿಗೆ ಪ್ರವಾಸಿಗಳ ಮೇಲೆ ಬೇಸರ ಮೂಡುವಂತಾಗಿದೆ. ಮುಂದಿನ ದಿನಗಳಲ್ಲಿ ಸ್ಥಳೀಯ ಬೇಸರಕ್ಕೆ ಕಾರಣವಾಗದೆ ಸ್ನೇಹಮಹಿ ವ್ಯವಸ್ಥಿತ ಪ್ರವಾಸೋದ್ಯಮ ಮಾಡಲು ಚಿಂತನೆ ನಡೆಸಲಾಗುತ್ತಿದೆ ಎಂದು ಶಾಸಕ ಸಿ.ಟಿ. ರವಿ ಹೇಳಿದರು.
ಜಿಲ್ಲಾಧಿಕಾರಿಗಳ ಕಛೇರಿ ಆವರಣದಲ್ಲಿ ಪ್ರವಾಸಿಗಳ ಟ್ಯಾಕ್ಸಿ ಚಾಲಕರ ವಾಹನಗಳ ಆನ್ ಲೈನ್ ನೋಂದಣಿ ಪೋರ್ಟಾಲ್ ಅನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು ರಜೆ ದಿನಗಳಲ್ಲಿ ಪ್ರವಾಸಿಗಳ ದಂಡು ಮಲೆನಾಡು ಭಾಗಕ್ಕೆ ಹೆಚ್ಚು ಹೆಚ್ಚು ಬರುತ್ತಿದ್ದು, ಇದರಿಂದ ವಾಹನ ದಟ್ಟಾಣೆ ಹೆಚ್ಚಾಗಿದೆ. ಈ ಪ್ರವಾಸಿಗಳಿಂದ ಜನರು ರೋಸಿ ಹೋಗಿದ್ದು, ಸ್ನೇಹಮಹಿ, ವ್ಯವಸ್ಥಿತ ಪ್ರವಾಸೋದ್ಯಮ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಇದು ಆರಂಭಿಕ ಹಂತದಲ್ಲಿ ಟ್ಯಾಕ್ಸಿ ಮಾಲೀಕರಿಗೆ ಹಾಗೂ ಚಾಲಕರಿಗೆ ಗೊಂದಲ ಏರ್ಪಟ್ಟರು ಕಾಲಕ್ರಮೇಣ ಹೊಂದಾಣಿಕೆಯಾಗಲಿದೆ ಎಂದು ಹೇಳಿದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!