May 7, 2024

MALNAD TV

HEART OF COFFEE CITY

ವಿಧಾನ ಪರಿಷತ್ ಚುನಾವಣೆ ಬಿಜೆಪಿ ಅಭ್ಯರ್ಥಿ ಗೆಲುವು ನಿಶ್ಚಿತ_ಸಿ.ಟಿ ರವಿ

1 min read

ಚಿಕ್ಕಮಗಳೂರು: ವಿಧಾನ ಪರಿಷತ್ ಚುನಾವಣೆಯಲ್ಲಿ ಪಕ್ಷದ ಒಳಗಿನ ಅಭಿಪ್ರಾಯದ ಪ್ರಕಾರ ಕನಿಷ್ಟ 11 ಹಾಗೂ ಗರಿಷ್ಟ 16 ಸ್ಥಾನಗಳನ್ನು ಗೆಲ್ಲುವ ವಿಶ್ವಾಸ ಇದೆ. ಜಿಲ್ಲೆಯಲ್ಲಿ ಬಿಜೆಪಿ ಅಭ್ಯರ್ಥಿ ಪ್ರಾಣೇಶ್ 500 ಮತಗಳ ಅಂತರದಿದ ಗೆಲುವು ಸಾಧಿಸುತ್ತಾರೆ ಎಂದು ಶಾಸಕ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಹೇಳಿದರು.

ನಗರದಲ್ಲಿ ಕುರಿತು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಪಕ್ಷದ ವರದಿ ಪ್ರಕಾರ 11 ರಿಂದ 16 ಸ್ಥಾನಗಳಲ್ಲಿ ಗೆಲುವು ನಿಶ್ಚಿತ ಎಂಬುದು ತಿಳಿದು ಬಂದಿದೆ. ಇದರ ಮೇಲೆ ಚುನಾಯಿತ ಪ್ರತಿನಿಧಿಗಳ ಮನಸ್ಸಿನಲ್ಲಿ ಏನಿಗೆ ಗೊತ್ತಿಲ್ಲ. ಬಿಜೆಪಿ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಗೆದ್ದಿದೆ ಎಂಬುದು ನಮ್ಮ ಗ್ರಾಮ ಸ್ವರಾಜ್ ಸಮಾವೇಶದಿಂದ ವ್ಯಕ್ತವಾಗಿದೆ. ಆದರೂ ಚುನಾವಣೆಗಳಲ್ಲಿ ಇದು ಪರಿಣಾಮ ಬೀರುವುದಿಲ್ಲ ಇದನ್ನು ಮೀರಿದ ಕೆಲವು ಸಂಗತಿಗಳು ಕೂಡ ಕೆಲಸ ಮಾಡುತ್ತವೆ ಎಂದರು.

ಜೆಡಿಎಸ್ ವರಿಷ್ಟರು ತಮ್ಮ ಬೆಂಬಲವನ್ನು ಸ್ಥಳೀಯ ನಾಯಕರ ಅಭಿಪ್ರಾಯಕ್ಕೆ ಬಿಟ್ಟಿದ್ದಾರೆ. ಸ್ಥಳೀಯ ನಾಯಕರು ಪಂಚಾಯತ್ ಸದಸ್ಯರ ತೀರ್ಮಾನಕ್ಕೆ ಬಿಡುತ್ತಿದ್ದು ಅವರೇ ತೀರ್ಮಾನಿಸುತ್ತಾರೆ. ಎಲ್ಲಿ ಜೆಡಿಎಸ್ ಅಭ್ಯರ್ಥಿಗಳನ್ನು ಹಾಕಿಲ್ಲವೂ ಅಲ್ಲಿ ನಮಗೆ ಬೆಂಬಲ ಕೊಡಿ ಎಂದು ನಮ್ಮ ಹಿರಿಯ ನಾಯಕರದ ಯಡಿಯೂರಪ್ಪ ಅವರು ಮನವಿ ಮಾಡಿದ್ದರು. ಸಕಾರಾತ್ಮಕವಾಗಿ ಬೆಂಬಲ ವ್ಯಕ್ತವಾಗುತ್ತಿದೆ ಎಂದ ಅವರು, ನಮ್ಮ ಮೊದಲ ಆದ್ಯತೆ ರಾಜಕೀಯವಾಗಿ ಕಾಂಗ್ರೆಸ್. ಸಕಾರಾತ್ಮಕವಾಗಿ ಜೆಡಿಎಸ್ ನಮ್ಮನ್ನು ಬೆಂಬಲಿಸುತ್ತಾರೆ0ಬ ವಿಶ್ವಾಸ ವ್ಯಕ್ತಪಡಿಸಿದರು.

* ಸಿದ್ದರಾಮಯ್ಯ ಹೆಸರನ್ನು ಪಾಕಿಸ್ತಾನದಲ್ಲಿ ಹೇಳಬೇಕು!

ಚಿಕ್ಕಮಗಳೂರಿನ ಗ್ರಾಮಸ್ವರಾಜ್ ಕಾರ್ಯಕ್ರಮದಲ್ಲಿ ಮೋದಿ ಮಹಾಸುಳ್ಳುಗಾರ ಎಂದು ಹೇಳಿಕೆ ನೀಡಿದ ಸಿದ್ದರಾಮಯ್ಯ ಅವರ ಹೇಳಿಕೆಗೆ ಉತ್ತರಿಸಿದ ಶಾಸಕ ಸಿ.ಟಿ ರವಿ ಒನ್ ಸನ್, ಒನ್ ಗ್ರೀಡ್, ಒನ್ ಒರ್ಲ್ಡ್ ಒನ್ಲೀ ಒನ್ ನರೇಂದ್ರ ಮೋದಿ ಎಂದು ಇಂಗ್ಲೇ0ಡ್ ಅಧ್ಯಕ್ಷ ಬೋರಿಸ್ಟ್ ಜಾನ್ಸನ್ ಹೇಳಿದ್ದಾರೆ. ಇಸ್ರೇಲ್ ಅಧ್ಯಕ್ಷರು ನನಗಿಂತ ನಮ್ಮ ದೇಶದಲ್ಲಿ ಮೋದಿ ಹೆಚ್ಚು ಪ್ರಸಿದ್ದ ವ್ಯಕ್ತಿ ಅಂತಾ ತಮಾಷೆಯಾಗಿ ಪ್ರಶಂಸಿದ್ದಾರೆ. ದೇಶದಲ್ಲಿ ಎಲ್ಲೋದ್ರು ಮೋದಿ ಮೋದಿ ಅಂತಾರೆ. ಕರ್ನಾಟಕದಿಂದ ಆಚೆ ಹೋದ್ರೆ ಸಿದ್ದರಾಮಯ್ಯ ಇರಲಿ ರಾಹುಲ್ ಗಾಂಧಿ ಹೆಸರನ್ನೇ ಹೇಳುವುದಿಲ್ಲ. ಸಿದ್ದರಾಮಯ್ಯ ಅವರ ಹೆಸರನ್ನು ಪಾಕಿಸ್ತಾನದಲ್ಲಿ ಯಾರಾದ್ರು ಹೇಳಬೇಕು. ಬಾವಿ ಒಳಗಿನ ಕಪ್ಪೆ ಬಾವಿಯೇ ಪ್ರಪಂಚ ಎಂದು ಅಂದುಕೊಳ್ಳುತ್ತೆ. ತಾನು ಹೇಗಿದ್ದೇನೋ ಹಾಗೆ ಸಿದ್ದರಾಮಯ್ಯ ಉಳಿದವರನ್ನು ಸಹ ಭಾವಿಸುತ್ತಾರೆ ಎಂದು ವ್ಯಂಗ್ಯವಾಡಿದರು.

* ರಾಜಕೀಯ ತಂತ್ರಗಾರಿಕೆ ಒಂದೇ ಇರುವುದಿಲ್ಲ

ಬಿಜೆಪಿ ಅವರಿಗೆ ಜೆಡಿಎಸ್ ಬೆಂಬಲ ಕೇಳಬೇಕಾದ ಪರಿಸ್ಥಿತಿ ಬಂತಲ್ಲಾ ಎಂಬ ಡಿ.ಕೆ ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿ.ಟಿ ರವಿ ರಾಜಕೀಯ ತಂತ್ರಗಾರಿಕೆ ಒಂದೇ ಇರುವುದಿಲ್ಲ. ಜೆಡಿಎಸ್ ಬೆಂಬಲ ಇಲ್ಲದಿದ್ರೆ ಡಿ.ಕೆ ಶಿವಕುಮಾರ್ ಅವರ ತಮ್ಮನನ್ನು ಸಹ ಸಂಸದನ್ನಾಗಿ ಗೆಲ್ಲಿಸಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಜೆಡಿಎಸ್ ಜೊತೆಗೆ ಒಳ ಒಪ್ಪಂದ ಮಾಡಿಕೊಳ್ಳದಿದ್ದರೆ ಅವರು ಶಾಸಕರಾಗಿ ಗೆದ್ದು ಬರಲು ತಿಣುಕಾಡಬೇಕಿತ್ತು ಬಿಜೆಪಿ ಅಲೆಯಲ್ಲಿ ಜೆಡಿಎಸ್ ಬೆಂಬಲ ಇರುವುದಕ್ಕೆ ಅವರು 2018 ವಿಧಾನಸಭೆಯಲ್ಲಿ ಶಾಸಕರಾಗಿ ಆಯ್ಕೆಯಾದ್ರು ಎಂದರು.

 

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!