May 20, 2024

MALNAD TV

HEART OF COFFEE CITY

ಗಣಪತಿ ವಿಸರ್ಜನೆ ವೇಳೆ ರಸ್ತೆಯುದ್ದಕ್ಕೂ ಮಹಿಳೆಯರ ಮಸ್ತ್ ಡ್ಯಾನ್ಸ್

1 min read

ಗಣಪತಿ ವಿಸರ್ಜನೆ ವೇಳೆ ಸೀರೆಯುಟ್ಟ ಮಹಿಳೆಯರು ದಾರಿಯುದ್ದಕ್ಕೂ ಕುಣಿದು-ಕುಪ್ಪಳಿಸಿ ಯುವಕರಿಗೆ ಸೆಡ್ಡು ಹೊಡೆದಿರುವ ಘಟನೆ ಜಿಲ್ಲೆಯ ಕೊಪ್ಪ ತಾಲೂಕಿನ ಜಯಪುರ ಸಮೀಪದ ಹಾಡುಗಾರ ಗ್ರಾಮದಲ್ಲಿ ನಡೆದಿದೆ. ಹೇರೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾಡುಗಾರ ಗ್ರಾಮದಲ್ಲಿ ವಿದ್ಯಾ ಗಣಪತಿ ಸೇವಾ ಸಮಿತಿಯಿಂದ 36ನೇ ವರ್ಷದ ಗಣೇಶೋತ್ಸವ ಆಚರಿಸಿದ್ದು, ರಾಸಾಯನಿಕ ಬಣ್ಣಗಳನ್ನು ಬಳಸದೆ ಪರಿಸರ ಸ್ನೇಹಿ ವಿನಾಯಕ ಸ್ವಾಮಿಯ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದರು. ಗಣಪತಿ ವಿಸರ್ಜನೆ ವೇಳೆ ಪ್ಯಾಂಟ್-ಟೀಶರ್ಟ್ ಧರಿಸಿದ್ದ ಪುರಿಷರ ಜೊತೆ ಸೀರೆಯುಟ್ಟ ಮಹಿಳೆಯರು ಸರಿಸಮನಾಗಿ ಕುಣಿದು-ಕುಪ್ಪಳಿಸಿದ್ದಾರೆ. ರಸ್ತೆಯುದ್ದಕ್ಕೂ ಮಹಿಳೆಯರ ಗುಂಪು ಪುರುಷರಂತೆಯೇ ಕುಣಿದು ಕುಪ್ಪಳಿಸಿತ್ತಾ ಗಣಪತಿ ವಿಸರ್ಜನೆ ಮಾಡಿದ್ದಾರೆ. ಸೀರೆಯುಟ್ಟ ಮಹಿಳೆಯರು ರಸ್ತೆಯದ್ಧಕ್ಕೂ ಮಸ್ತ್ ಸ್ಟೆಪ್ ಹಾಕಿದ್ದನ್ನ ಗಮನಿಸಿದ ಯುವಕರು ಕೂಡ ಮಹಿಳೆಯರ ಜೊತೆ ಬಿಂದಾಸ್ ಆಗಿ ಕುಣಿಸು ಕುಪ್ಪಳಿಸಿದ್ದಾರೆ. ಗಣೇಶೋತ್ಸವದಲ್ಲಿ ಚಂದ್ರಯಾನ-3ರ ಯಶಸ್ವಿ ಉಡಾವಣೆಗೆ ಕಾರಣೀಕರ್ತರಾದ ಇಸ್ರೋ ವಿಜ್ಞಾನಗಳಿಗೆ ಗೌರವಾರ್ಥ ಗಣೇಶೋತ್ಸವದ ಪ್ರವೇಶದ್ವಾರ ನಿರ್ಮಿಸಿ ಇಸ್ರೋ ವಿಜ್ಞಾನಿಗಳಿಗೆ ಗೌರವ ಸಲ್ಲಿಸಿದ್ದಾರೆ.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!