April 29, 2024

MALNAD TV

HEART OF COFFEE CITY

ಪಠ್ಯ ಪರಿಷ್ಕರಣೆಯ ವಿರುದ್ಧ ಜುಲೈ 8ರಂದು ಪಾದಯಾತ್ರೆ : ರವೀಶ್ ಬಸಪ್ಪ

1 min read

ಚಿಕ್ಕಮಗಳೂರು: ಪಠ್ಯ ಪರಿಷ್ಕರಣೆ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಅವರನ್ನು ಬಂಧಿಸಬೇಕು. ಪರಿಷ್ಕರಣೆ ಪಠ್ಯವನ್ನು ಹಿಂಪಡೆಯಬೇಕು ಹಾಗೂ ಬರಗೂರು ರಾಮಚಂದ್ರ ಸಮಿತಿ ಪಠ್ಯ ವನ್ನು ಮುಂದೂವರೆಸಬೇಕೆoದು ಆಗ್ರಹಿಸಿ ಜುಲೈ.8 ರಂದು ಕಾಲ್ನಡಿಗೆ ಜಾಥ ಹಮ್ಮಿಕೊಳ್ಳು ವುದಾಗಿ ಸಮಾನ ಮನಸ್ಕ ಪ್ರಗತಿಪರ ಸಂಘಟನೆ ಮುಖಂಡರು ತಿಳಿಸಿದರು.
 ನಗರದಲ್ಲಿ ಕಾಂಗ್ರೆಸ್ ಮುಖಂಡ ರವೀಶ್ ಬಸಪ್ಪ ಸುದ್ದಿಗಾರರ ಜೊತೆ ಮಾತ ನಾಡಿ, ಕಾಲ್ನಡಿಗೆ ಜಾಥ ತಾಲ್ಲೂಕಿನ ಎಸ್.ಕೊಪ್ಪಲು ಬಸವೇಶ್ವರ ಪುಸ್ಥಳಿ ಮುಂಭಾಗ ಚಾಲನೆ ನೀಡಲಾಗುವುದು. ಎಸ್.ಕೊಪ್ಪಲು, ಕಬಳಿ, ನವಗ್ರಾಮ, ಚನ್ನಕೊಪ್ಪಲು ಮಾರ್ಗ ವಾಗಿ ಸಖರಾಯಪಟ್ಟಣ ಸಮೀಪದ ನಿಡಘಟ್ಟದಲ್ಲಿರುವ ಗಾಂಧಿಗುoಡಿ ಮುಂಭಾಗದಲ್ಲಿ ಸಮಾವೇಶ ನಡೆಯಲಿದೆ. ಸಮಾವೇಶದಲ್ಲಿ ಪಂಡಿತರಾಧ್ಯಾ ಶ್ರೀಗಳು, ಹೊಸದುರ್ಗ ಈಶ್ವರ ನಂದ ಸ್ವಾಮೀಜಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಬೆಂಗಳೂರಿನ ಎಸ್.ಜಿ.ಸಿದ್ಧರಾಮಯ್ಯ, ಶ್ರೀಪಾದ ಭಟ್, ಆರ್.ಜೆ.ನಾಗರಾಜ್, ಬಿ. ಚಂದ್ರೇ ಗೌಡ, ಮುಕುಂದ ರಾಜು, ಹಂಸಲೇಖ, ಕುಂ.ವೀರಭದ್ರಪ್ಪ, ತರೀಕೆರೆ ರೆಹಮತ್, ಸಿದ್ಧನಗೌಡ ಪಾಟೀಲ್, ವೈಎಸ್‌ವಿ ದತ್ತ, ಕಿಮ್ಮನೆ ರತ್ನಾಕರ್ ಹಾಗೂ ಸಮಾನ ಮನಸ್ಕ ಪ್ರಗತಿಪರ ಸಂಘಟನೆ ಮುಖಂಡರು ಹಾಗೂ ವಿವಿಧ ಸಂಘಟನೆಗಳ ಮುಖಂಡರು ಭಾಗವಹಿಸಲಿದ್ದಾರೆ ಎಂದರು.
ಸಮಾವೇಶದಲ್ಲಿ ತೆಗೆದುಕೊಳ್ಳುವ ನಿರ್ಣಾಯಗಳನ್ನು ಸರ್ಕಾರದ ಗಮನ ಸೆಳೆಯುವ ನಿಟ್ಟಿ ನಲ್ಲಿ ಚಿಕ್ಕಮಗಳೂರಿನಲ್ಲಿ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಲಾಗುವುದು ಎಂದು ಹೇಳಿದರು.

ಪಠ್ಯ ಪರಿಷ್ಕರಣೆ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಅವರನ್ನು ಬಂಧಿಸಬೇಕು. ಸಮಿತಿ ಪಠ್ಯ ಪರಿಷ್ಕರಣೆಯನ್ನು ರದ್ದುಪಡಿಸಬೇಕು ಹಾಗೂ ಬರಗೂರು ರಾಮಚಂದ್ರಪ್ಪ ಸಮಿತಿ ಪಠ್ಯಕ್ರಮವನ್ನು ಮುಂದೂವರೆಸಬೇಕು ಮತ್ತು ಕನ್ನಡ ನೆಲೆದ ಸಾಮರಸ್ಯಕ್ಕೆ ಧಕ್ಕೆ ಆಗುತ್ತಿದ್ದು, ಸಾಮರಸ್ಯವನ್ನು ಉಳಿಸುವ ನಿಟ್ಟಿನಲ್ಲಿ ಸರ್ಕಾರ ಗಮನ ಸೆಳೆಯಲು ಈ ಜಾಥವನ್ನು ಹಮ್ಮಿ ಕೊಳ್ಳಲಾಗಿದೆ ಎಂದರು.ಸಮಾನ ಮನಸ್ಕ ಪ್ರಗತಿಪರ ಸಂಘಟನೆ ಮುಖಂಡ ಬಿ.ಅಮ್ಜದ್ ಮಾತನಾಡಿ, ರೋಹಿತ್ ಚಕ್ರತೀರ್ಥ ಸಮಿತಿ ನೀಡಿರುವ ಪಠ್ಯ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾಗಿದೆ. ಶಿಕ್ಷಣ ವ್ಯವಸ್ಥೆಯಲ್ಲಿ ಎಡ, ಬಲ ಸಿದ್ಧಾಂತಗಳಿಲ್ಲ. ಸತ್ಯ ಇತಿಹಾಸ, ಸತ್ಯ ಬೋಧನೆ ಎಲ್ಲರ ಜವ ಬ್ದಾರಿಯಾಗಿದೆ ಎಂದರು.

ರೋಹಿತ್ ಚಕ್ರತೀರ್ಥ ಸಮಿತಿ ಇತಿಹಾಸವನ್ನು ತಿರುಚಿ, ಸುಳ್ಳು ಇತಿಹಾಸ ಸೇರಿಸಿ ಜನರ ಭಾವನೆಗಳನ್ನು ಕೆರಳಿಸುವ ಕೆಲಸ ಮಾಡಿದೆ. ಸರ್ಕಾರ ತನ್ನ ಸಿದ್ಧಾಂತ ಹೇರಿಕೆ ಮಾಡುವ ಮೂಲಕ ಮಕ್ಕಳ ಕಲ್ಯಾಣದ ಮೇಲೆ ಕಲ್ಲು ಹಾಕುತ್ತಿದೆ. ಮಕ್ಕಳ ಭವಿಷ್ಯದ ದೃಷ್ಠಿಯಿಂದ ರೋಹಿತ್ ಚಕ್ರತೀರ್ಥ ಸಮಿತಿ ಪರಿಷ್ಕರಣೆ ಪಠ್ಯವನ್ನು ಹಿಂಪಡೆಯಬೇಕು. ಬರಗೂರು ರಾಮ ಚಂದ್ರಪ್ಪ ಸಮತಿ ಪಠ್ಯವನ್ನು ಮುಂದೂವರೆಸಬೇಕೆAದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ದಂಟರಮಕ್ಕಿ ಶ್ರೀನಿವಾಸ್, ರೈತ ಸಂಘದ ಮುಖಂಡ ಗುರುಶಾಂತಪ್ಪ, ಹುಣಸೆಮಕ್ಕಿ ಲಕ್ಷö್ಮಣ್, ಕೂದುವಳ್ಳಿ ಮಂಜುನಾಥ, ಮರ್ಲೆ ಅಣ್ಣಯ್ಯ ಸೇರಿದಂತೆ ಅನೇಕರು ಇದ್ದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!