May 19, 2024

MALNAD TV

HEART OF COFFEE CITY

ಪೊಲೀಸ್ ವೃತ್ತ ಲೋಕಾರ್ಪಣೆ

1 min read

ಚಿಕ್ಕಮಗಳೂರು: ಪೊಲೀಸ್ ಇಲಾಖೆ ಕರ್ತವ್ಯವನ್ನು ಪ್ರತಿಬಿಂಬಿಸುವ ಪ್ರತಿಮೆಯುಳ್ಳ ಪೊ ಲೀಸ್ ವೃತ್ತವನ್ನು ಗೃಹಸಚಿವ ಆರಗ ಜ್ಞಾನೇಂದ್ರ  ಗೊಳಿಸಿದರು.
ಈ ಪೊಲೀಸ್ ವೃತ್ತವು ನಗರಸಭೆ ವತಿಯಿಂದ ನೀಡಿದ 12ಲಕ್ಷ ರೂ. ಅನುದಾನದಲ್ಲಿ ನಿರ್ಮಾಣಗೊಂಡಿದ್ದು, 4 ದಿಕ್ಕಿನಲ್ಲಿ ಪೊಲೀಸ್ ತುಕಡಿಗಳನ್ನು ಪ್ರತಿಬಿಂಬಿಸುವ ಪ್ರತಿಮೆ ಗಳನ್ನು ನಿರ್ಮಿಸಲಾಗಿದೆ. ಮೇಲ್ಬಾಗದಲ್ಲಿ 4 ಸಿಂಹವುಳ್ಳ ಅಶೋಕ ಸ್ತಂಬವನ್ನು ನಿರ್ಮಿಸ ಲಾಗಿದೆ.ಒಂದೊಂದು ದಿಕ್ಕಿನಲ್ಲಿ ಕರ್ತವ್ಯ ನಿರತ ಸಿವಿಲ್ ಪೊಲೀಸ್ ಪೇದೆ ಪ್ರತಿಮೆ, ಸಂಚಾರಿ ಪೊಲೀಸ್ ಸಿಬ್ಬಂದಿ, ರಾಜ್ಯ ಮೀಸಲು ಪಡೆ ಪೊಲೀಸ್ ಸಿಬ್ಬಂದಿ, ನಕ್ಸಲ್ ನಿಗ್ರಹ ಪಡೆ ಸಿಬ್ಬಂದಿ ಪ್ರತಿಮೆಯನ್ನು ನಿರ್ಮಿಸಲಾಗಿದೆ ಪೊಲೀಸ್ ಇಲಾಖೆ ಕಾರ್ಯವೈಖರಿಯನ್ನು ಪ್ರತಿಬಿಂಬಿಸುತ್ತದೆ.
ಈ ಹಿಂದೆ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸಿ ಇತ್ತಿಚೆಗೆ ಐಪಿಎಸ್ ಹುದ್ದೆಗೆ ರಾಜೀನಾಮೆ ಸಲ್ಲಿಸಿದ ಅಣ್ಣಾಮಲೈ ಅವರ ಅವಧಿಯಲ್ಲಿ ಇಲ್ಲಿ ವೃತ್ತ ನಿರ್ಮಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿತ್ತು. ಅಂದಿನ ನಗರಸಭೆ ಅಧ್ಯಕ್ಷರು ವೃತ್ತ ನಿರ್ಮಾಣಕ್ಕೆ ಅನುದಾನ ಮೀಸ ಲಿರಿಸಿದ್ದರು.ಈ ಪ್ರತಿಮೆಗೆ ನಗರಸಭೆಯಿಂದ ಪೂರ್ಣ ಅನುದಾನ ನೀಡಿದ್ದು, ಅನುದಾನ ಕೊರತೆ ಯಿಂದ ಮದ್ಯದಲ್ಲಿ ಕಾಮಗಾರಿ ಸ್ಥಗಿತಗೊಂಡಿತ್ತು. ಇತ್ತೀಚೆಗೆ ಮತ್ತೇ ನಗರಸಭೆಯಿಂದ ಅನುದಾನ ಬಿಡುಗಡೆಗೊಳಿಸಿದ್ದು, ಪ್ರತಿಮೆ ಕಾಮಗಾರಿಯನ್ನು ಪೂರ್ಣಗೊಳಿಸಲಾಗಿತ್ತು.
ವೃತ್ತಕ್ಕೆ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸಿ ಇತ್ತೀಚೆಗಷ್ಟೇ ನಿಧನರಾದ ಐಪಿಎಸ್ ಅಧಿಕಾರಿ ಮಧುಕರ ಶೆಟ್ಟಿಯವರ ಹೆಸರಿಡಬೇಕೆನ್ನುವ ಬೇಡಿಕೆಯನ್ನು ವಿವಿಧ ಸಂಘ ಸಂಸ್ಥೆಗಳು ನಗರಸಭೆ ಮತ್ತು ಜಿಲ್ಲಾ ಪೊಲೀಸ್ ಇಲಾಖೆ ಮುಂದಿಟ್ಟಿದ್ದರು. ಆದರೆ, ಯಾವ ಹೆಸರನ್ನು ಪರಿಗಣಿಸದೆ ಪೊಲೀಸ್ ವೃತ್ತವೆಂದು ನಾಮಕರಣ ಮಾಡಲಾಗಿದೆ.

ಈ ಪ್ರತಿಮೆಯನ್ನು ಶಾಂತಿನಿಕೇತನ ಚಿತ್ರಕಲಾ ಶಾಲೆಯ ವಿಶ್ವಕರ್ಮ ಆಚಾರ್ಯ ಪ್ರತಿಮೆ ನಿರ್ಮಾಣ ಮತ್ತು ಸುಣ್ಣ ಬಣ್ಣದ ಕಾರ್ಯ ನಡೆಸಿದ್ದು, ನಗರದ ಹೃದಯಭಾಗದಲ್ಲಿ ನಿರ್ಮಾ ಣಗೊಂಡಿರುವ ಪೊಲೀಸ್ ಪ್ರತಿಮೆಯುಳ್ಳ ವೃತ್ತ ಜನಾಕರ್ಷಕವಾಗಿದೆ.ಉದ್ಘಾಟನಾ ಸಮಾರಂಭದಲ್ಲಿ ವಿಧಾನ ಪರಿಷತ್ ಸದಸ್ಯ ಎಂ.ಕೆ.ಪ್ರಾಣೇಶ್, ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್, ಶೃಂಗೇರಿ ಕ್ಷೇತ್ರದ ಶಾಸಕ ಟಿ.ಡಿ.ರಾಜೇಗೌಡ, ನಗರಾ ಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಿ.ಆನಂದ್, ಜಿಲ್ಲಾಧಿಕಾರಿ ಕೆ.ಎನ್.ರಮೇಶ್, ಜಿಲ್ಲಾ ಪಂಚಾ ಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎಚ್.ಅಕ್ಷಯ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಇ.ಕ್ರಾಂತಿ, ಭದ್ರಾ ಅಭಯಾ ರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಭಾಕರನ್ ಸೇರಿದಂತೆ ಅನೇಕರು ಇದ್ದರು.
ಇದೇ ವೇಳೆ ಪ್ರತಿಮೆ ನಿರ್ಮಾಣ ಕಾರ್ಯ ನಡೆಸಿದ ಶಾಂತಿ ನೀಕೇತನ ಚಿತ್ರಕಲಾ ಶಾಲೆಯ ಪ್ರಾಚಾರ್ಯ ವಿಶ್ವಕರ್ಮ ಆಚಾರ್ಯ, ಕಲಾವಿದರಾದ ಜಯಣ್ಣಾಚಾರ್, ಉದಯಕುಮಾರ್ ಅವರನ್ನು ಸನ್ಮಾನಿಸಲಾಯಿತು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!