May 19, 2024

MALNAD TV

HEART OF COFFEE CITY

ಕಾಫಿ ಕ್ಯೂರಿಂಗ್, ಕೈಗಾರಿಕೆ ಸೇರಿದಂತೆ ಸ್ಥಳೀಯ ಆಸ್ತಿ ತೆರಿಗೆಯಲ್ಲಿ ರಿಯಾಯಿತಿ : ಜಿಲ್ಲಾಧಿಕಾರಿ ರಮೇಶ್

1 min read

ಚಿಕ್ಕಮಗಳೂರು: ಕಾಫಿಕ್ಯೂರಿಂಗ್ ಸೇರಿದಂತೆ ಕೈಗಾರಿಕೆ, ಉದ್ಯಮ ಘಟಕಗಳಿಗೆ ನಗರಸಭೆ ಸೇರಿದಂತೆ ನಗರ ಸ್ಥಳೀಯ ಸಂಸ್ಥೆಗಳ ಆಸ್ತಿ ತೆರಿಗೆಯಲ್ಲಿ ರಿಯಾಯಿತಿ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಅದರಂತೆ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ತಿಳಿಸಿದರು. ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಕೈಗಾರಿಕಾ ಸ್ಪಂದನ ಸಭೆ, 3ನೇ ಜಿಲ್ಲಾಮಟ್ಟದ ಏಕಗವಾಕ್ಷಿ ಸಮಿತಿ ಸಭೆ ಮತ್ತು ಪ್ರಧಾನ ಮಂತ್ರಿಗಳ ಉದ್ಯೋಗ ಸೃಜನ ಯೋಜನೆಯ ಜಿಲ್ಲಾಮಟ್ಟದ ಕಾರ್ಯದಳ ಸಮಿತಿ ಸಭೆಯ ಅಧ್ಯಕ್ಷತೆವಹಿಸಿ ಮಾತ ನಾಡಿದರು.ಕೈಗಾರಿಕಾ ಘಟಕಗಳು, ಎಂಎಸ್‌ಎoಇಗಳು, ನಗರಸಭೆ, ಪುರಸಭೆ ಅಥವಾ ಗ್ರಾಮ ಪಂಚಾಯತ್‌ಗಳಿoದ ಪ್ರತ್ಯೇಕ ಟ್ರೇಡ್‌ಲೈಸೆನ್ಸ್ ಪಡೆಯುವ ಅಗತ್ಯವಿಲ್ಲ. ಕೈಗಾರಿಕಾ ಇಲಾಖೆ ಯಿಂದ ಅನುಮತಿ ಪಡೆದರೇ ಸಾಕು ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

ಚಿಕ್ಕಮಗಳೂರು ಕೈಗಾರಿಕಾ ವಸಾಹತುವಿನಲ್ಲಿ ನಗರಸಭೆಯಿಂದ ಒಳಚರಂಡಿ ನಿರ್ಮಿಸಲು ಕೈಗೊಂಡಿರುವ ಕಾಮಗಾರಿಯ ಅಂದಾಜು ತಯಾರಿಸುವ ಪೂರ್ವದಲ್ಲಿ ಆಯುಕ್ತರ ಜೊತೆ ಚರ್ಚಿಸಿ ಕಾಮಗಾರಿಗೆ ಅನುದಾನವನ್ನು ಅಳವಡಿಸಿಕೊಂಡು ಕಾಮಗಾರಿ ಕೈಗೊಳ್ಳಲು ಸೂಚಿ ಸಿದರು.
ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಮಹೇಶ್ ಮಾತನಾಡಿ, ನೀರು ಸರಬರಾಜಿನ ಟ್ಯಾಂಕನ್ನು ಇದುವರೆಗೂ ಶುದ್ಧೀಕರಿಸಲಾಗಿಲ್ಲ, ಇದರಿಂದ ಕೈಗಾರಿಕೆಗಳಿಗೆ ತೊಂದರೆಯಾ ಗುತ್ತಿದೆ ಎಂದು ತಿಳಿಸಿದರು. 2 ದಿನಗಳೊಳಗೆ ಸದರಿ ಕಾಮಗಾರಿಯನ್ನು ಪೂರ್ಣಗೊಳಿಸು ವಂತೆ ನಗರಸಭೆ ಅಧಿಕಾರಿಗಳಿಗೆ ತಿಳಿಸಿದರು.
ಭೂಪರಿವರ್ತನೆಗೆ ಸಂಬAಧಿಸಿದAತೆ ದಾಖಲಾತಿಗಳನ್ನು ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡಿದಲ್ಲಿ ಅಲಿನೇಷನ್ ಮಾಡಲು ಕ್ರಮವಹಿಸುವ ಬಗ್ಗೆ ಅನುಸರಣಾ ಕ್ರಮವಹಿಸಲು ಜಿಲ್ಲಾಧಿಕಾರಿಗಳು ಸೂಚಿಸಿದರು.
ಸ್ಪೆöÊಸ್‌ಪಾರ್ಕ್ ಅಭಿವೃದ್ಧಿಗೆ ಡಿಪಿಆರ್ ತಯಾರಿಸಿ ಕೇಂದ್ರ ಕಚೇರಿಗೆ ಕಳುಹಿಸಲಾಗಿದೆ. ಕಡೂರು ತಾಲ್ಲೂಕು ಸಖರಾಯಪಟ್ಟಣ ಹೋಬಳಿಯಲ್ಲಿ ಹಲಸಿನ ಹಣ್ಣಿನ ಕ್ಲಸ್ಟರ್ ಅಭಿವೃದ್ಧಿ ಪಡಿಸಲು ಡಿಪಿಆರ್ ತಯಾರಿಸಲು ಟೆಕ್ಸಾಕ್ ಸಂಸ್ಥೆಗೆ ವಹಿಸಲಾಗಿದ್ದು, ಇದಕ್ಕೆ ಕಾಮನ್ ಫೆಸಿಲಿಟಿ ಸೆಂಟರ್ ಅಭಿವೃದ್ಧಿಪಡಿಸಲು ಗುರುತಿಸಿದ 2 ಎಕರೆ ಜಾಗ ಗ್ರಾಮ ಪಂಚಾಯತ್ ಸ್ವಾಧೀನದಲ್ಲಿದೆ ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಸಿದ್ಧರಾಜು ಜಿಲ್ಲಾ ಮಟ್ಟದ ಏಕಗವಾಕ್ಷಿ ಸಮಿತಿ ಸಭೆಯ ಗಮನಕ್ಕೆ ತಂದರು.
ಜಿಲ್ಲೆಯಲ್ಲಿರುವ ಸರ್ಕಾರಿ ಜಮೀನಿನ ವಿವರಗಳನ್ನು ಪಡೆದು ಕೈಗಾರಿಕೆ ಸ್ಥಾಪನೆಗೆ, ಕ್ಲಸ್ಟರ್ ಅಭಿವೃದ್ಧಿಗೆ ಕಂದಾಯ ಇಲಾಖೆಯ ಅಧಿಕಾರಿಗಳೊಂದಿಗೆ ಜಂಟಿ ತಪಾಸಣೆ ನಡೆಸಿ ಪ್ರಸ್ತಾವನೆ ಸಲ್ಲಿಸಬೇಕು. ಸ್ಪೆöÊಸ್ ಪಾರ್ಕ್ ಅಭಿವೃದ್ಧಿ ಕುರಿತಂತೆ ಕೂಡಲೇ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಅನುಸರಣಾ ಕ್ರಮವಹಿಸಬೇಕು. ಸ್ಪೆöÊಸ್‌ಪಾರ್ಕ್ಗೆ ಮಂಜೂರು ಮಾಡಿ ರುವ ಅಂಬಳೆ ಹೋಬಳಿ ಹೊಸಕೋಟೆ ಗ್ರಾಮದ ಸರ್ವೇ ನಂ.21ರಲ್ಲಿ ಸುಮಾರು 150ಎಕರೆ ಸರ್ಕಾರಿ ಜಮೀನು ಲಭ್ಯವಿದ್ದು, ಕೈಗಾರಿಕಾ ಪ್ರದೇಶಾಭಿವೃದ್ಧಿಗೆ ಸೂಕ್ತವಾಗಿದೆ. ಇದಕ್ಕಾಗಿ ಸೂಕ್ತ ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಿದರು.

ಚಿಕ್ಕಮಗಳೂರು ತಾಲ್ಲೂಕಿನ ಕರ್ತಿಕೆರೆ ಗ್ರಾಮದಲ್ಲಿ ಆಟೋ ಕಾಂಪ್ಲೆಕ್ಸ್ ಸ್ಥಾಪಿಸಲು ಗುರುತಿಸಲಾಗಿರುವ ಭೂಮಿ ಗೋಮಾಳವಾಗಿದ್ದು, ಎಲ್ಲಿಯೂ ಸರ್ಕಾರಿ ಜಮೀನು ಲಭ್ಯವಿಲ್ಲದಿರುವುದರಿಂದ ಈಗಾಗಲೇ ಗುರುತಿಸಿರುವ ಸರ್ವೇ ನಂ.237ರ ಗೋಮಾಳ ಜಾಗದಲ್ಲಿ 5ಎಕರೆ ಜಮೀನನ್ನು ಗೋಮಾಳದಿಂದ ತಗ್ಗಿಸಿ ಆಟೋಕಾಂಪ್ಲೆಕ್ಸ್ ಅವಶ್ಯವಿ ರುವುದರಿಂದ ಸಾರ್ವಜನಿಕ ಹಿತದೃಷ್ಟಿಯಿಂದ ಪ್ರಸ್ತಾವನೆ ಸಲ್ಲಿಸಲು ಅಧಿಕಾರಿಗಳಿಗೆ ಅವರು ಸೂಚಿಸಿದರು.ಪ್ರಧಾನ ಮಂತ್ರಿಗಳ ಉದ್ಯೋಗ ಸೃಜನ ಯೋಜನೆ(ಪಿಇಎಂಇಜಿಪಿ) ಅಡಿಯಲ್ಲಿ 2021- 22ನೇ ಸಾಲಿನಲ್ಲಿ ಜಿಲ್ಲೆಗೆ ನಿಗದಿಪಡಿಸಿರುವ ಒಟ್ಟಾರೆ ಗುರಿಗೆ(ಭೌತಿಕ-124, ಆರ್ಥಿಕ-372) ಶೇ.82ರಷ್ಟು ಪ್ರಗತಿ ಸಾಧಿಸಲಾಗಿದೆ. ಕೆಲವೊಂದು ಬ್ಯಾಂಕ್‌ಗಳು ಈ ಯೋಜನೆಯಡಿ ಸಾಲ ಸೌಲಭ್ಯ ಮಂಜೂರಾತಿ ಬಗ್ಗೆ ಆಸಕ್ತಿ ವಹಿಸುತ್ತಿಲ್ಲ ಹಾಗೂ ಈಗಾಗಲೇ ಮಂಜೂರು ಮಾಡಿದ ಫಲಾನುಭವಿಗಳಿಗೆ ಘಟಕ ಪ್ರಾರಂಭಿಸಲು ಸಾಲ ಬಿಡುಗಡೆ ಮಾಡಲು ವಿಳಂಬ ಮಾಡುತ್ತಿದ್ದಾರೆ ಎಂದು ಸಭೆಗೆ ತಿಳಿಸಿದರು.ಜಿಲ್ಲಾಧಿಕಾರಿ ಕೆ.ಎನ್,ರಮೇಶ್ ಮಾತನಾಡಿ, ಸ್ವೀಕೃತವಾದ ಅರ್ಜಿಗಳಿಗೆ ನಿಗದಿತ ಅವಧಿ ಯಲ್ಲಿ ಸಾಲ ಮಂಜೂರು ಮಾಡಿ ಬಿಡುಗಡೆ ಮಾಡಲು ಕ್ರಮವಹಿಸಬೇಕು. ಸೌಲಭ್ಯ ಮಂಜೂರಾತಿ ಮಾಡದೇ ಇರುವ ಬ್ಯಾಂಕ್‌ಗಳ ಬಗ್ಗೆ ವರದಿಯನ್ನು ತಯಾರಿಸಿ ಸಲ್ಲಿಸುವಂತೆ ಲೀಡ್ ಬ್ಯಾಂಕ್ ವ್ಯವಸ್ಥಾಪಕರಿಗೆ ಸೂಚಿಸಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು ಮಾತನಾಡಿ, ಸಾಲ ಸೌಲಭ್ಯ, ಆರ್ಥಿಕ ನೆರವಿನ ಅಗತ್ಯತೆಯಿರುವ ಅರ್ಹ ಕೈಗಾರಿಕಾ ಘಟಕಗಳನ್ನು ಈ ಯೋಜ ನೆಗೆ ಸೂಚಿಸಲು ಮತ್ತು ಯೋಜನೆಯ ಪ್ರಚಾರ, ಅರ್ಜಿ ಸಲ್ಲಿಕೆ ಪ್ರಕ್ರಿಯೆ, ತರಬೇತಿ, ಸೌಲಭ್ಯ ಗಳ ಬಗ್ಗೆ ಜನರಿಗೆ ತಿಳಿಸಲು, ಮುನ್ನೆಲೆಗೆ ತರಲು ಒರಿಯೆಂಟೇಷನ್, ತರಬೇತಿ ಕಾರ್ಯ ಕ್ರಮಗಳನ್ನು ಪ್ರತೀ ತಿಂಗಳು ನಡೆಸುವಂತೆ ಸೂಚಿಸಿದರು.
ಪಿಇಎಂಇಜಿಪಿ ಯೋಜನೆಯಡಿಯಲ್ಲಿ ಹೆಚ್ಚು ಸಬ್ಸಿಡಿ ದೊರಕಿಸುತ್ತೇವೆ ಎಂದು ಜನರಿಂದ ದುಡ್ಡು ವಸೂಲಿ ಮಾಡಿಕೊಂಡು ದಲ್ಲಾಳಿ, ಮಧ್ಯವರ್ತಿಗಳು ವಂಚಿಸುತ್ತಿರುವ ಬಗ್ಗೆ ತಮ್ಮ ಗಮನಕ್ಕೆ ಬಂದಿದ್ದು, ದಲ್ಲಾಳಿಗಳ ಹಾವಳಿಯನ್ನು, ಜನರು ಅವರಿಂದ ಮೋಸ ಹೋಗು ವುದನ್ನು ತಪ್ಪಿಸಲು ಹೆಲ್ಪ್ಡೆಸ್ಕ್ ರಚಿಸುವಂತೆ ಛೇಂಬರ್ ಆಫ್ ಕಾಮರ್ಸ್ಗೆ ಜಿಲ್ಲಾಧಿ ಕಾರಿಗಳು ಸೂಚಿಸಿದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!