May 6, 2024

MALNAD TV

HEART OF COFFEE CITY

ಇಂದಿನಿಂದ ರಾತ್ರಿ ಕಫ್ರ್ಯೂ ರದ್ದು

1 min read

ಚಿಕ್ಕಮಗಳೂರು: ಪ್ರತಿದಿನ ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 5 ಗಂಟೆಯವರೆಗೆ ಜಾರಿಗೊಳಿಸಲಾಗಿದ್ದ ರಾತ್ರಿ ಕಫ್ರ್ಯೂವನ್ನು ಫೆ.1 ರಿಂದ ಜಾರಿಗೆ ಬರುವಂತೆ ಹಿಂಪಡೆಯಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ತಿಳಿಸಿದ್ದಾರೆ.ಜಿಲ್ಲೆಯಲ್ಲಿ ಕೊರೊನಾಸೋಂಕು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಜ.31 ರಿಂದ ಜಾರಿಗೆ ಬರುವಂತೆ ಫೆಬ್ರವರಿ 15 ರವರೆಗೆ ಜಿಲ್ಲೆಯಾದ್ಯಂತ ನಿಯಂತ್ರಣ ಕ್ರಮಗಳು ಹಾಗೂ ಮಾರ್ಗಸೂಚಿಗಳನ್ನು ಜಾರಿಗೊಳಿಸಿ ಆದೇಶಿಸಿದ್ದಾರೆ.

ಎಲ್ಲಾ ಪಬ್, ಕ್ಲಬ್, ಹೋಟೆಲ್, ರೆಸ್ಟೋರೆಂಟ್,ಬಾರ್ ಮತ್ತು ಹೋಟೆಲ್‍ಗಳಲ್ಲಿ ಆಸನ ಶೇ.100 ರಷ್ಟು ಸಾಮಥ್ರ್ಯದೊಂದಿಗೆ ಕೋವಿಡ್-19 ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಅನುಸರಿಸಿಕೊಂಡು ಕಾರ್ಯನಿರ್ವಹಿಸತಕ್ಕದ್ದು, ಈ ಘಟಕಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳು ಪೂರ್ಣ ಕೋವಿಡ್ ವ್ಯಾಕ್ಸಿನೇಷನ್ ಪಡೆದಿರತಕ್ಕದ್ದು. ಈ ಸ್ಥಳಗಳಲ್ಲಿ ವ್ಯಾಕ್ಸಿನೇಷನ್ ಪಡೆಯದೇ ಇರುವ ವ್ಯಕ್ತಿಗಳ ಪ್ರವೇಶವನ್ನು ನಿರ್ಬಂಧಿಸಲಾಗಿದೆ.

ಸಿನಿಮಾ ಹಾಲ್‍ಗಳು, ಮಲ್ಟಿಫ್ಲೆಕ್ಸ್‍ಗಳು, ಥಿಯೇಟರ್, ರಂಗಮಂದಿರಗಳ ಸಭಾಂಗಣ ಮತ್ತು ಇಂತಹ ಇನ್ನಿತರ ಸ್ಥಳಗಳಲ್ಲಿ ಒಟ್ಟು ಆಸನ ಶೇ.50 ಮುಂದುವರೆದಿದ್ದು, ಮದುವೆ ಸಮಾರಂಭಗಳಲ್ಲಿ ಹೊರಾಂಗಣ ಪ್ರದೇಶಗಳಲ್ಲಿ 300 ಜನರಿಗೆ ಹಾಗೂ ಒಳಾಂಗಣದ ಪ್ರದೇಶಗಳಲ್ಲಿ 200 ಜನರು ಭಾಗವಹಿಸಲು ಸೀಮಿತಗೊಳಿಸಲಾಗಿದೆ.
ಧಾರ್ಮಿಕ ಸ್ಥಳಗಳಲ್ಲಿ ದರ್ಶನ ಹಾಗೂ ಸೇವೆಗಳಿಗೆ ಅನುಮತಿಸಲಾಗಿದೆ. ಆದರೆ ಯಾವುದೇ ಸಮಯದಲ್ಲಿ ಪೂರ್ಣ ಕೋವಿಡ್ ವ್ಯಾಕ್ಸಿನೇಷನ್ ಪಡೆದಿರುವ 50 ಜನರ ಪ್ರವೇಶಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದ್ದು, ಸಾಮಾಜಿಕ, ಧಾರ್ಮಿಕ, ರಾಜಕೀಯ ಪ್ರತಿಭಟನೆಗಳು, ಎಲ್ಲಾ ರ್ಯಾಲಿಗಳ, ಧರಣಿಗಳು, ಒಗ್ಗೂಡುವಿಕೆ, ಎಲ್ಲಾ ತರಹದ ಮೆರವಣಿಗೆಗಳನ್ನು ನಿರ್ಬಂಧಿಸಲಾಗಿದೆ.
ಈಜುಕೊಳ ಮತ್ತು ಜಿಮ್‍ಗಳಲ್ಲಿ ಒಟ್ಟು ಸಾಮಥ್ರ್ಯದ ಶೇ.50 ಮೀರಬಾರದು. ಕ್ರೀಡಾ ಸಂಕೀರ್ಣ ಮತ್ತು ಕ್ರೀಡಾಂಗಣಗಳಲ್ಲಿ ಶೇ.50 ಸಾಮಥ್ರ್ಯಕ್ಕೆ ಅನುಮತಿಸಲಾಗಿದೆ. ಖಾಸಗಿ ಆಸ್ಪತ್ರೆಗಳು ಮತ್ತು ಖಾಸಗಿ ಮೆಡಿಕಲ್ ಕಾಲೇಜು ಆಸ್ಪತ್ರೆಗಳಲ್ಲಿ ಸಾರ್ವಜನಿಕ ಆರೋಗ್ಯ ಅಧಿಕಾರಿಗಳು ಸೂಚಿಸಿದ ಕೋವಿಡ್ 19 ರೋಗಿಗಳ ಚಿಕಿತ್ಸೆಗಾಗಿ ಪ್ರತಿ ವಿಭಾಗದಲ್ಲಿ ಶೇ.10 ಹಾಸಿಗೆಗಳನ್ನು ಅಂದರೆ, ಐಸಿಯು, ವೆಂಟಿಲೇಟರ್‍ನೊಂದಿಗೆ ಐಸಿಯು, ಎಚ್‍ಡಿಯು, ಆಕ್ಸಿಜನೇಟಡ್ ಮತ್ತು ಸಾಮಾನ್ಯ ಹಾಸಿಗೆಗಳನ್ನು ಕಾಯ್ದಿರಿಸತಕ್ಕದ್ದು ಎಂದು ಆದೇಶದಲ್ಲಿ ತಿಳಿಸಿದ್ದಾರೆ.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!