May 6, 2024

MALNAD TV

HEART OF COFFEE CITY

ಸಿ.ಟಿ ರವಿ ತಂದೆ ನಿಧನ, ಹಲವು ಗಣ್ಯರಿಂದ ಅಂತಿಮ ದರ್ಶನ

1 min read

 

 

ಆಲ್ದೂರು: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಚಿಕ್ಕಮಗಳೂರು ಶಾಸಕ ಸಿ.ಟಿ ರವಿ ಅವರ ತಂದೆ ತಿಮ್ಮೇಗೌಡ (92) ಶನಿವಾರ ಬೆಂಗಳೂರಿನ ವಿಕ್ಟೋರಿಯಾಆಸ್ಪತ್ರೆಯಲ್ಲಿ ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದು ಅವರ ಅಂತ್ಯಕ್ರಿಯೆ ಭಾನುವಾರ ಅವರ ಅಂತಿಮ ಆಸೆಯಂತೆ ಬೀಕೆರೆ ಗ್ರಾಮದ ಅವರ ಮನೆಯ ತೋಟದಲ್ಲಿ ಜರುಗಿತು.ಶನಿವಾರ ರಾತ್ರಿ 9-30 ಸುಮಾರಿಗೆ ಬೆಂಗಳೂರಿನಿಂದ ಮೃತರ ಪಾರ್ಥಿವ ಶರೀರವನ್ನು ಅವರ ಹಿರಿಯ ಮಗ ಸಿ.ಟಿ. ರಘು ಅವರ ಬೀಕೆರೆಯಲ್ಲಿರುವ ಮನೆಗೆ ತರಲಾಯಿತು. ಪತ್ನಿ ಹೊನ್ನಮ್ಮ, ಪುತ್ರಿಯರಾದ ರೇಖಾ, ರೇವತಿ. ರೇಣುಕ , ಸಿಟಿ ರವಿ ಅವರ ಪತ್ನಿ ಪಲ್ಲವಿ, ಹಾಗೂ ಮೊಮ್ಮಕ್ಕಳು ತಿಮ್ಮೇಗೌಡರ ಪಾರ್ಥಿವ ಶರೀರಕ್ಕೆ ಪೂಜೆ ಸಲ್ಲಿಸಿದರು.

ಸಚಿವ ಮುನಿರತ್ನ , ಹಾಸನ ಕ್ಷೇತ್ರದ ಶಾಸಕ ಪ್ರೀತಂಗೌಡ, ಕಡೂರು ಶಾಸಕ ಬೆಳ್ಳಿ ಪ್ರಕಾಶ್ ಶನಿವಾರ ರಾತ್ರಿಯೇ ಮೃತರ ಅಂತಿಮ ದರ್ಶನ ಪಡೆದರು.ಭಾನುವಾರ ಬೆಳಿಗ್ಗೆ ಮಾಚಗೊಂಡನಹಳ್ಳಿ ಬೇರುಗಂಡಿ ಬೃಹನ್ಮಠದ ಶ್ರೀ ರೇಣುಕ ಮಹಾಂತ ಶಿವಾಚಾರ್ಯ ಮಹಾಸ್ವಾಮಿಗಳು, ಚಿಕ್ಕಮಗಳೂರು ಬಸವ ತತ್ವಪೀಠದ ಶ್ರೀ ಬಸವ ಮರುಳಸಿದ್ದ ಸ್ವಾಮೀಜಿ ,ಕರಡಿಗವಿ ಮಠದ ಸ್ವಾಮೀಜಿ , ಹುಲಿಕೆರೆ ಮಠದ ವಿರೂಪಾಕ್ಷಲಿಂಗ ಶಿವಾಚಾರ್ಯ ಸ್ವಾಮಿಗಳು

 

 

 

ಬೀಕೆರೆ ಗ್ರಾಮದಲ್ಲಿ ಅಂತಿಮ ವಿಧಿ ವಿಧಾನ

ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‍ಕುಮಾರ್ ಕಟೀಲ್, ಸಂಸದ ,ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷ ತೇಜಸ್ವಿ ಸೂರ್ಯ, ಮುಖ್ಯಮಂತ್ರಿಗಳ ರಾಜಕೀಯ ಆಪ್ತ ಕಾರ್ಯದರ್ಶಿ ಡಿ.ಎನ್ .ಜೀವರಾಜ್, ಸಚಿವ ಬÉೈರತಿ ಬಸವರಾಜು, ವಿಧಾನ ಪರಿಷತ್ ಉಪ ಸಭಾಪತಿ ಎಂ.ಕೆ. ಪ್ರಾಣೇಶ್, ಮೂಡಿಗೆರೆ ಶಾಸಕ ಕುಮಾರಸ್ವಾಮಿ, ತರಿಕೆರೆ ಶಾಸಕ ಡಿ.ಎಸ್ ಸುರೇಶ್, ಬೇಲೂರು ಶಾಸಕ ಲಿಂಗೇಶ್, ನಗರಸಭೆ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್, ಚಿಕ್ಕಮಗಳೂರು ಬಿಜೆಪಿ ಜಿಲ್ಲಾಧ್ಯಕ್ಷ ಕಲ್ಮರುಡಪ್ಪ, ಜಿಲ್ಲಾ ಸಂಯೋಜಕ ಎಚ್.ಡಿ. ತಮ್ಮಯ್ಯ ,ಶೃಂಗೇರಿ ಕ್ಷೇತ್ರದ ಶಾಸಕ ಟಿ.ಡಿ. ರಾಜೇಗೌಡ , ಮಾಜಿ ಉಪಸಭಾಪತಿ ಬಿ.ಎಲ್. ಶಂಕರ್,ಕಾಂಗ್ರೇಸ್ ಜಿಲ್ಲಾ ಮಾಜಿ ಅಧ್ಯಕ್ಷ ಡಿ.ಎಲ್. ವಿಜಯ್‍ಕುಮಾರ್, ಮಾಜಿ ಎಂಎಲ್ಸಿ ಗಾಯತ್ರಿ ಶಾಂತೇಗೌಡ, ಕಾಫಿ ಬೆಳೆಗಾರರ ಸಂಘದ ಹೋಬಳಿ ಅಧ್ಯಕ್ಷ ಸಿ.ಸುರೇಶ್ ಸೇರಿದಂತೆ ಸ್ಥಳೀಯ ಜನ ಪ್ರತಿನಿ„ಗಳು ಸುತ್ತಲಿನ ಗ್ರಾಮಗಳ ಗ್ರಾಮಸ್ಥರು ಮೃತರ ಅಂತಿಮ ದರ್ಶನ ಪಡೆದರು.

ಭಾನುವಾರ ಮಧ್ಯಾಹ್ನ 2-30 ಕ್ಕೆ ಒಕ್ಕಲಿಗ ಸಂಪ್ರದಾಯದಂತೆ ದಿವಂಗತ ತಿಮ್ಮೇಗೌಡರ ಅಂತ್ಯ ಸಂಸ್ಕಾರ ಜರುಗಿತು. ಹಿರಿಯ ಮಗ ಸಿ.ಟಿ. ರಘು, ಕಿರಿಯ ಮಗ ಶಾಸಕ ಸಿ.ಟಿ. ರವಿ.ಅಂತಿಮ ವಿಧಿವಿಧಾನಗಳನ್ನು ನಡೆಸಿ ತಂದೆಯ ಚಿತೆಗೆ ಅಗ್ನಿಸ್ಪರ್ಶ ಮಾಡಿದರು.

 

 

 

 

 

ಚಿಕ್ಕಮಗಳೂರುಪೊಲೀಸ್ ವರಿಷ್ಟಾಧಿಕಾರಿ ಅಕ್ಷಯ್ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದರು. ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಸಾವಿರಕ್ಕೂ ಹೆಚ್ಚು ಜನ ಅಂತಿಮ ದರ್ಶನ ಪಡೆದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!