May 18, 2024

MALNAD TV

HEART OF COFFEE CITY

ಅಕ್ರಮ ಸಾಗುವಳಿ ಚೀಟಿ ಕೋಟ್ಯಾಂತರ ಕೋಟಿ ರೂ ನಷ್ಟ -ಕೃಷ್ಣಮೂರ್ತಿ

1 min read

ಚಿಕ್ಕಮಗಳೂರು: ಮೂಡಿಗೆರೆ ತಾಲ್ಲೂಕಿನಲ್ಲಿ ಅರಣ್ಯ ಭೂಮಿ ಮತ್ತು ಸರ್ಕಾರಿ ಭೂಮಿ ಯನ್ನು ಅಕ್ರಮವಾಗಿ ಸಾಗುವಳಿ ಚೀಟಿ ನೀಡಲಾಗಿದೆ. ಸರ್ಕಾರಕ್ಕೆ ಕೋಟ್ಯಾಂತರ ಕೋಟಿ ರೂ. ನಷ್ಟವಾಗಿದೆ. ಭೂಮಿ ಶ್ರೀಮಂತರ ಪಾಲಾಗಿದೆ. ಸಿಬಿಐ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕೆಂದು ಸಾಮಾಜಿಕ ಕಾರ್ಯಕರ್ತ ಗೋಣಿಬೀಡು ಕೃಷ್ಣಮೂರ್ತಿ ಆಗ್ರಹಿಸಿದರು.
 ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂಡಿಗೆರೆ ತಾಲ್ಲೂಕು ಕಚೇರಿ ಭ್ರಷ್ಟಚಾರದ ಕೂಪವಾಗಿದ್ದು, ಬಡವರು ಮತ್ತು ರೈತರಿಗೆ ಅಧಿಕಾರಿಗಳು ಸ್ಪಂಧಿಸುತ್ತಿಲ್ಲ. ನಕಲಿ ದಾಖಲೆಗಳನ್ನು ಸೃಷ್ಠಿಸಿ ಸರ್ಕಾರಿ ಜಮೀನು, ಅರಣ್ಯಭೂಮಿಯನ್ನು ಕಾನೂನು ಉಲ್ಲಂಘಿಸಿ ಶ್ರೀಮಂತರಿಗೆ ಮಂಜೂರು ಮಾಡಿಕೊಡಲಾಗುತ್ತಿದೆ. ಅಕ್ರಮ ಮಂಜೂರಾತಿಗೆ ಲಕ್ಷಾಂತರ ರೂ. ಲಂಚ ಪಡೆಯುತ್ತಿದ್ದಾರೆ ಎಂದು ದೂರಿದರು.

ಈ ಸಂಬAಧ ಸ್ಥಳೀಯ ಶಾಸಕರು ನಿರ್ಲಕ್ಷö್ಯವಹಿಸಿದ್ದಾರೆ. 2013ರಲ್ಲಿ ತಾಲ್ಲೂಕು ಕಚೇರಿ ಅಧಿ ಕಾರಿಗಳು ಫಾರಂ. 50, 53 ಅಡಿಯಲ್ಲಿ ನೂರಾರು ಶ್ರೀಮಂತ ಕಾಫಿಬೆಳೆಗಾರರಿಗೆ ತಲಾ 4.38 ಎಕರೆ ಜಮೀನು ನಕಲಿ ದಾಖಲೆ ಸೃಷ್ಠಿಸಿ ಮಂಜೂರು ಮಾಡಿದ್ದಾರೆ ಎಂದರು.ಈ ಸಂಬAಧ ಸರ್ಕಾರಕ್ಕೆ ದೂರು ನೀಡಿದ್ದು, ಕಂದಾಯ ಇಲಾಖೆ ವಿಶೇಷ ಕೋಶದ ಅಧಿ ಕಾರಿಗಳು ತಾಲ್ಲೂಕು ಕಚೇರಿಗೆ ಭೇಟಿನೀಡಿ ಕಡತ ಪರಿಶೀಲಿಸಿದ್ದು, 600 ಕಡತಗಳಲ್ಲಿ ಅಕ್ರಮ ಭೂ ಮಂಜೂರಾತಿ 106 ಕಡತಗಳು ಸಿಕ್ಕಿವೆ. 300 ರಿಂದ 400 ಎಕರೆ ಸರ್ಕಾರಿ ಜಮೀನು ಶ್ರೀಮಂತರ ಪಾಲಾಗಿದೆ ಎಂದು ತಿಳಿಸಿದರು.ಸರ್ಕಾರ ವಿಕೆಓಯು 16 ಪ್ರಕರಣ ಎಂದು ಆದೇಶಿಸಿ ಸರ್ಕಾರ ಜಮೀನು ಅಕ್ರಮವಾಗಿ ಮಂಜೂರು ಮಾಡಿರುವ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬೇಕೆಂದು ಆದೇಶಿಸಿದೆ. ಆದರೆ, ಕಂದಾಯ ಇಲಾಖೆ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮಕೈಗೊಂಡಿಲ್ಲವೆ0ದು ಆರೋಪಿಸಿದರು.

ತಾಲ್ಲೂಕಿನ ಎಲ್ಲಾ ಹೋಬಳಿ ವ್ಯಾಪ್ತಿಯಲ್ಲಿ ಅಕ್ರಮ ಮಂಜೂರಾತಿ ಪ್ರಕರಣಗಳು 2012 ರಿಂದ 2022ರ ವರೆಗೂ ವರದಿಯಾಗಿದೆ. ಅಕ್ರಮ ಭೂ ಮಂಜೂರಾತಿ ಸಂಬAದ ಎಲ್ಲ ದಾಖಲೆಗಳನ್ನು ನೀಡಿದ್ದರೂ ಜಿಲ್ಲಾಡಳಿತ, ಕಂದಾಯ ಇಲಾಖಾಧಿಕಾರಿಗಳು ಯಾವುದೇ ಕ್ರಮಕೈಗೊಂಡಿಲ್ಲ ಎಂದರು.
ಮoಜೂರಾಗಿರುವ ಎಲ್ಲ ಭೂ ಮಂಜೂರಾತಿಯನ್ನು ರದ್ದುಪಡಿಸಿ ತನಿಖೆಗೊಳಪಡಿಸಿ ಬೇಕು. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು. ಶ್ರೀಮಂತ ಕಾಫಿ ಬೆಳೆ ಗಾರರ ವಶದಲ್ಲಿರುವ ಸರ್ಕಾರಿ ಜಮೀನನ್ನು ವಶಕ್ಕೆ ಪಡೆದು ಅದನ್ನು ಭೂರಹಿತರಿಗೆ ಹಾಗೂ ಅರ್ಹ ನೈಜ್ಯ ಫಲಾನುಭವಿಗಳಿಗೆ ಹಂಚಬೇಕೆoದು ಆಗ್ರಹಿಸಿದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!