April 28, 2024

MALNAD TV

HEART OF COFFEE CITY

ಕಿಲಾಫತ್ ಚಳುವಳಿಗೆ ಗೊಬ್ಬರ- ನೀರು ಹಾಕುವುದನ್ನು ಕಾಂಗ್ರೆಸ್ ಬಿಡಲಿ: ಸಿ.ಟಿ ರವಿ

1 min read

 

ಚಿಕ್ಕಮಗಳೂರು: ರಾಜ್ಯದಲ್ಲಿ ಶೇ.99 ರಷ್ಟು ಜನರು ನ್ಯಾಯಾಲಯದ ಆದೇಶ ಪಾಲನೆ ಮಾಡಿ ಸಮವಸ್ತ್ರ ಒಪ್ಪಿಕೊಂಡು ಪರೀಕ್ಷೆ ಬರೆದಿದ್ದಾರೆ ಶೇ.1ರಷ್ಟು ಜನರಿಗೆ ಈ ವಿಷಯವನ್ನು ಜೀವಂತವಾಗಿಡಲು ಬಯಸಿದ್ದಾರೆ ಅವರ ನಾಟಕ ಕ್ಯಾಮರ ಅವರ ಕಡೆ ತಿರುಗಲಿ ಎಂದಷ್ಟೇ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕ ಸಿ.ಟಿ ರವಿ ಹೇಳಿದರು.ಶನುವಾರ ನಗರದಲ್ಲಿ ಹಿಜಾಬ್ ಧರಿಸದೇ ಪರೀಕ್ಷೆ ಬರೆಯದೇ ವಾಪಾಸ್ ತೆರಳಿದ ವಿದ್ಯಾರ್ಥಿಗಳ ಕುರಿತು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದರು. ಪರೀಕ್ಷೆ ಬರೆಯದೇ ವಾಪಾಸ್ ಹೋದವರನ್ನು ಕೆಲವರು ಹೀರೋ,ಹಿರೋಹಿನ್ ರೀತಿ ಬಿಂಬಿಸುತ್ತಿದ್ದಾರೆ. ನಿಮಗೆ ಹಿಜಾಬ್ ದೊಡ್ಡದೋ,ಪರೀಕ್ಷೆ ದೊಡ್ಡದೋ ಎಂದು ಪ್ರಶ್ನಿಸಿದರು.

ಇದೇ ವೇಳೆ ಮಾತನಾಡಿದ ಅವರು ಹಿಜಾಬ್ ದೊಡ್ಡದು ಅನ್ನುವವರು ಕ್ಯಾಮೆರಾ ಮುಂದೆ ನಾಟಕ ಆಡ್ತಿದ್ದಾರೆ, ಶೇ.99 ರಷ್ಟು ಜನ ಸರ್ಕಾರದ ನಿಲುವು,ಕೋರ್ಟ್ ತೀರ್ಪು ಒಪ್ಪಿಕೊಂಡಿದ್ದಾರೆ ಅವರಿಗೆ ಸ್ವಾಗತ ಎಂದರು.1983 ರಿಂದ ಇಲ್ಲದ ಚಳುವಳಿ ಈಗ ಏಕೆ ಶುರುವಾಗುತ್ತದೆ ಎಂದು ಪ್ರಶ್ನಿಸಿದ ಅವರು, ಇವತ್ತು ಹಿಜಾಬ್ ಅಂತಾರೆ,ನಾಳೆ ಸಂವಿಧಾನವೇ ಬೇಡ ಅಂತಾರೆ, ಆಮೇಲೆ ಷರಿಯಾನೇ ಬೇಕು ಅಂತಾರೆ ಅಂತಹ ಮಾನಸಿಕತೆಗೆ ಕಿಲಾಫತ್ ಚಳುವಳಿಗೆ ಗೊಬ್ಬರ, ನೀರು ಹಾಕಿ ದೇಶ ವಿಭಜನೆ ಆಯ್ತು ಈಗ ಹಿಜಾಬ್ ಗೆ ಗೊಬ್ಬರ ನೀರು ಹಾಕುವುದನ್ನು ಕಾಂಗ್ರೆಸ್ ಬಿಡಬೇಕು ಎಂದು ಆಕ್ರೋಶವ್ಯಕ್ತಪಡಿಸಿದ್ರು.

* ಹುಬ್ಬಳ್ಳಿ ಗಲಾಟೆಯ ಹಿಂದೆ ಷಡ್ಯಂತ್ರ

ಹುಬ್ಬಳ್ಳಿ ಗಲಾಟೆ ಅಚಾನಕ್ ಆಗಿ ಆಗಿರುವ ಸಂಗತಿಯಲ್ಲ, ಡಿ.ಜೆ ಹಳ್ಳಿ,ಕೆಜೆ ಹಳ್ಳಿ ಗಲಾಟೆಗೂ,ಹುಬ್ಬಳ್ಳಿ ಗಲಾಟೆಗೂ ಸಾಮ್ಯತೆ ಇದೆ ಎಂದು ಶಾಸಕ ಸಿ.ಟಿ ರವಿ ಹೇಳಿದರು.

ದೇಶದ ಉದ್ದಗಲಕ್ಕೂ ಗಲಭೆ ಎಬ್ಬಿಸುವ ಷಡ್ಯಂತ್ರ ನಡೆದಿದೆ. ಇದೆಲ್ಲವನ್ನು ನೋಡಿದಾಗ ಅವರು ಜಿನ್ನಾ ಮಾನಸಿಕತೆಯಲ್ಲಿ ಇರುವುದು ಸ್ಪಷ್ಟ. ಜಿನ್ನಾ ಮಾನಸಿಕತೆಯನ್ನು ಗಾಂಧಿ ಮಾನಸಿಕತೆಯಲ್ಲಿ ಎದುರಿಸಲು ಆಗಲ್ಲ. ಗಾಂಧಿ ಮಾನಸೀಕತೆಯಲ್ಲಿ ಎದುರಿಸಿದಾಗ ದೇಶ ವಿಭಜನೆಯ ಬೆಲೆ ತೆರಬೇಕಾಯಿತು, 46 ಲಕ್ಷ ಜನರ ಮಾರಣಹೋಮ ನಡೆಯಿತು ಅದ್ದರಿಂದ ಜಿನ್ನಾ ಮಾನಸೀಕತೆಯನ್ನು ನಾವು ಸಾರ್ವಕರ್ ಮಾನಸೀಕತೆಯಲ್ಲಿ ಎದುರಿಸಬೇಕು ಆಗ ಮಾತ್ರ ದೇಶ ಉಳಿಸಿಕೊಳ್ಳಲು ಸಾಧ್ಯ ಎಂದು ತಿಳಿಸಿದರು.

* ಪಿಎಸ್ಐ ಅಕ್ರಮ ಸರ್ಕಾರದಿಂದ ನಿಷ್ಪಕ್ಷಪಾತ ತನಿಖೆ

ಪಿಎಸ್ಐ ಅಕ್ರಮದಲ್ಲಿ ಕಾಂಗ್ರೆಸ್ ಆಥವಾ ಬಿಜೆಪಿ ಯಾರೇ ಇರಲಿ ಸೂಕ್ತ ಕ್ರಮ ತಗೆದುಕೊಳ್ಳಲಾಗುತ್ತದೆ. ಪಿಎಸ್ಐ ಅಕ್ರಮ ಕಂಡು ಬಂದ ಕೂಡಲೇ ಸಿಎಂ ಹಾಗೂ ಗೃಹ ಸಚಿವರಿಗೆ ಸೂಕ್ತ ತನಿಖೆ ನಡೆಸುವಂತೆ ಆಗ್ರಹಿಸಿದ್ದೇನೆ ನಮ್ಮ ಸರ್ಕಾರ ನಿಷ್ಪಕ್ಷಪಾತ ತನಿಖೆ ನಡೆಸುತ್ತಿದೆ ತಪ್ಪಿತಸ್ಥರ ಮೇಲೆ ಕ್ರಮ ಆಗುತ್ತದೆ ತನಿಖೆಯನ್ನು ಸಿಓಡಿಗೆ ವಹಿಸಿದ್ದು ಎಷ್ಟೇ ಪ್ರಭಾವಿಗಳಿದ್ರು ಕಠಿಣ ಕ್ರಮ ತಗೆದುಕೊಳ್ಳಲಾಗುತ್ತದೆ ಎಂದರು

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!