May 19, 2024

MALNAD TV

HEART OF COFFEE CITY

ಕಾಡಾನೆ ಕಾರ್ಯಾಚರಣೆ ವೇಳೆ ಮಿಸ್ ಫೈರ್ ಸಿಬ್ಬಂದಿ ಕಾಲಿಗೆ ಗುಂಡು

1 min read

ಚಿಕ್ಕಮಗಳೂರು: ಕಾಡಾನೆ ಓಡಿಸುವ ಕಾರ್ಯಾಚರಣೆ ವೇಳೆ ಮಿಸ್‍ಫೈರಾಗಿ ಅರಣ್ಯ ಇ ಲಾಖೆ ಸಿಬ್ಬಂಧಿ ಕಾಲಿಗೆ ಗಾಯಗೊಂಡಿರುವ ಘಟನೆ ಸೋಮವಾರ ತಾಲ್ಲೂಕಿನ ಚುರ್ಚೆ ಗುಡ್ಡ ಅರಣ್ಯ ಪ್ರದೇಶದಲ್ಲಿ ನಡೆದಿದೆ.ಇತ್ತೀಚಿನ ಕೆಲವು ದಿನಗಳಿದ ಒಂಟಿ ಸಲಗವೊಂದು ಪ್ರತೀನಿತ್ಯ ಉಪಟಳ ನೀಡುತ್ತಿದ್ದು ಅದನ್ನು ಕಾಡಿಗಟ್ಟುವ ಉದ್ದೇಶದಿಂದ ನಾಗರಹೊಳೆಯಿಂದ ತರಬೇತಿ ಪಡೆದ 2 ಆನೆಯನ್ನು ಕರೆಸಲಾಗಿತ್ತು. ಇಂದು ಬೆಳಿಗ್ಗೆ ಆನೆ ಕಾಯಾಚರಣೆ ವೇಳೆ ಕಾಡಾನೆಯನ್ನು ಸಾಕಾನೆಯನ್ನು ಅಟ್ಟಿಸಿಕೊಂಡು ಬಂದಿದ್ದು, ಸಾಕಾನೆ ಬೆದರಿಕೆ ಇದರಿಂದ ವಿಚಲಿತರಾದ ಅರಣ್ಯ ಇಲಾಖೆ ಸಿಬ್ಬಂಧಿಗಳು ಗಾಳಿಯಲ್ಲಿ ಗುಂಡು ಹಾರಿಸಿದ್ದು, ಈ ಸಂದರ್ಭದಲ್ಲಿ ಸಾಕಾನೆ ಮಾವುತ ಯೋಗೇಶ್ ಎಂಬುವರ ಕಾಲಿಗೆ ತಗುಲಿದೆ.

ಗಾಯಾಗೊಂಡ ಮಾವುತನನ್ನು ತಕ್ಷಣ ಚಿಕ್ಕಮಗಳೂರು ನಗರದ ಸರ್ಕಾರಿ ಮಲ್ಲೇಗೌಡ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದ್ದು ಚೇತರಿಸಿಕೊಂಡಿದ್ದಾರೆ. ಈ ಸಂಬಂಧ ಗ್ರಾ ಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ನಾಗರಹೊಳೆಯಿಂದ ಕರೆಸಲಾಗಿದ್ದ ಭೀಮಾ ಮತ್ತು ಅರ್ಜುನ ಆನೆಗಳು ಒಂಟಿ ಸಲಗವನ್ನು ಕಾಡಿಗಟ್ಟುವ ವೇಳೆ ಈ ಎರಡು ಆನೆಗಳ ಮೇಲೆ ಒಂಟಿ ಸಲಗ ತಿರುಗಿ ಬಿದ್ದ ವೇಳೆ ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!