May 6, 2024

MALNAD TV

HEART OF COFFEE CITY

ಜಿಲ್ಲಾ ಕನ್ನಡಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ರಾಜಪ್ಪ ದಳವಾಯಿ ಆಯ್ಕೆ

1 min read

 

ಚಿಕ್ಕಮಗಳೂರು: ಅಜ್ಜಂಪುರದ ಬೀರೂರು ರಸ್ತೆಯಲ್ಲಿರುವ ಸಿದ್ಧರಾಮೇಶ್ವರ ಕಲ್ಯಾಣ ಮಂಟಪದಲ್ಲಿ ಮಾ.28 ಮತ್ತು 29 ರಂದು ನಡೆಯುವ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳದ ಅಧ್ಯಕ್ಷರಾಗಿ ಡಾ.ರಾಜಪ್ಪದಳವಾಯಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ನಗರದಲ್ಲಿ ಈ ಕುರಿತು ಮಾತನಾಡಿದ ಅವರು ಜಿಲ್ಲಾ ಕನ್ನಡಸಾಹಿತ್ಯ ಪರಿಷತ್ ಅಧ್ಯಕ್ಷ ಸೂರಿಶ್ರೀನಿವಾಸ್, ರಾಜಪ್ಪ ದಳವಾಯಿ ಅಜ್ಜಂಪುರ ತಾಲೂಕು ಶಿವನಿಹೋಬಳಿಯ ಹನುವನಹಳ್ಳಿಯವರು, 1962ರ ಮಾರ್ಚ್ 30ರಂದು ದಿ.ದಳವಾಯಿರಾಮಣ್ಣ ಮತ್ತು ಹನುಮಕ್ಕ ಅವರ ಪುತ್ರರಾಗಿ ಜನಸಿ ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಈಗ ಬೆಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಕೇಂದ್ರದ ಪ್ರಾಧ್ಯಾಪಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆಂದರು.

ಸಾಹಿತ್ಯ ವಿಮರ್ಶೆ, ಜಾನಪದ, ನಾಟಕಕಾರ, ಸಿನಿಮಾ ಬರಹಗಾರ, ನಟ,ನಿರ್ದೇಶಕ, ರಂಗಭೂಮಿ ಮತ್ತು ಸಿನಿಮಾಸಂಶೋಧಕ,ಲಲಿತಕಲೆಗಳ ವಿಮರ್ಶಕರು, 1ಸಾವಿರಕ್ಕೂ ಹೆಚ್ಚು ವಿಚಾರ ಸಂಕಿರಣ,ಕಾರ್ಯಾಗಾರಗಳಲ್ಲಿ ವಿಷಯ ಮಂಡಿಸಿದ್ದಾರೆ. ಸಾಹಿತ್ಯ ಅಕಾಡೆಮಿ ಸದಸ್ಯ, ಏಕರೂಪಿ ಶಿಕ್ಷಣ ನೀತಿ ವರದಿ ಸಮಿತಿ ಸದಸ್ಯರಾಗಿ, ಪದವಿಪಠ್ಯ ಸಮಿತಿ ಅಧ್ಯಕ್ಷರಾಗಿ, ರಾಜ್ಯ ಸರ್ಕಾರದ ಪಠ್ಯ ಪುಸ್ತಕ ಸಮಿತಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುವುದರೊಂದಿಗೆ ಧಾರವಾಡ ಬೇಂದ್ರ ರಾಷ್ಟ್ರೀಯ ಸಮಿತಿ ಅಧ್ಯಕ್ಷರಾಗಿ, ರಾಣಿಚೆನ್ನಮ್ಮ ವಿಶ್ವವಿದ್ಯಾನಿಲಯದ ಪ್ರಸಾರಾಂಗದ ನಿರ್ದೇಶಕಯಾಗಿ ಕೆಲಸಮಾಡಿದ್ದಾರೆಂದು ಹೇಳಿದರು.

ಕಪ್ಪುದಾರಿಯ ಕೆಂಪು ಚಿತ್ರ ಸೇರಿದಂತೆ 40ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ.ಕಾವ್ಯ,ಸಣ್ಣಕತೆ, ಪ್ರಬಂಧ ಸೇರಿದಂತೆ ಸಮಗ್ರ ಸಾಹಿತ್ಯ 6 ಸಂಪುಟಗಳು ಪ್ರಕಟಗೊಂಡಿವೆ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಕುವೆಂಪು, ನಾಕಟ ಅಕಾಡೆಮಿ ಸುವರ್ಣಪ್ರಶಸ್ತಿ,ಕಿ.ರಂ.ಪ್ರಶಸ್ತಿ, ರಂಗಜಂಗಮ ಪ್ರಶಸ್ತಿ,ಇಸ್ಮಾಯಿಲ್ ಗೊನಾಳ್ ರಂಗಪ್ರಶಸ್ತಿ ಲಭಿಸಿವೆ.ಬಳ್ಳಾರಿಯಲ್ಲಿ 2014ರಲ್ಲಿ ನಡೆದ ರಂಗತೋರಣರಂಗ ಸಮಾವೇಶ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರೆಂದು ಮಾಹಿತಿ ನೀಡಿದರು.
. ಗೊ.ರು.ಚನ್ನಬಸಪ್ಪ ಸಮ್ಮೇಳ ಉದ್ಘಾಟಿಸುತ್ತಿದ್ದು, ಸಮಾರೋಪ ಸಮಾರಂಭಕ್ಕೆ ಸಾಹಿತಿ ಬರಗೂರುರಾಮಚಂದ್ರಪ್ಪ ಅಥವಾ ಮುಖ್ಯಮಂತ್ರಿ ಚಂದ್ರು ಭಾಗವಹಿಸುವರು. ಸಾಣೆಹಳ್ಳಿ ಜಗದ್ಗುರುಗಳು, ಶ್ರೀ ಜ್ಞಾನಪ್ರಭುಸಿದ್ಧರಾಮದೇಶಿಕೇಂದ್ರ ಸ್ವಾಮೀಜಿ ಪಾಲ್ಗೊಳ್ಳುವರೆಂದು ತಿಳಿಸಿದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!