May 18, 2024

MALNAD TV

HEART OF COFFEE CITY

ಶ್ರೀ ವೀರಭದ್ರಸ್ವಾಮಿ ಮಹಾರಥೋತ್ಸವ ಸಮಾರಂಭಕ್ಕೆ ಚಾಲನೆ

1 min read

 

ಬಾಳೆಹೊನ್ನೂರು: ವೀರಶೈವ ಧರ್ಮದ ಗಂಗೋತ್ರಿ ಶ್ರೀ ಜಗದ್ಗುರು ರಂಭಾಪುರಿ ಮಹಾಪೀಠದಲ್ಲಿ ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಧ್ವಜಸ್ತಂಭಕ್ಕೆ ಪೂಜೆ ಸಲ್ಲಿಸಿ ಶ್ರೀ ಜಗದ್ಗುರು ಪಂಚಾಚಾರ್ಯ ಧರ್ಮ ಧ್ವಜಾರೋಹಣ ನೆರವೇರಿಸಿ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಹಾಗೂ ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿ ಮಹಾರಥೋತ್ಸವ ಸಮಾರಂಭಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಆಶೀರ್ವಚನ ನೀಡಿದ ಅವರು ಮನುಷ್ಯ ಜೀವನದಲ್ಲಿ ಏರಿಳಿತಗಳು ಬರುವುದು ಸಹಜ. ಆದರೆ ಸುಖವೇ ಬರಲಿ ದು:ಖವೇ ಬರಲಿ ಯಾವಾಗಲೂ ತಾಳ್ಮೆ ಸಹನೆಯಿಂದ ಬಾಳಬೇಕಾಗುತ್ತದೆ. ಅಧ್ಯಾತ್ಮ ಸಾಧನೆಗೆ ಮತ್ತು ಮಾನವೀಯ ಸಂಬಂಧಗಳು ಗಟ್ಟಿಗೊಳ್ಳಲು ಜಯಂತಿ ಹಬ್ಬಗಳು ಸಹಕಾರಿಯಾಗಿವೆ. ಮನುಷ್ಯ ಹೊರಗಿನ ಸಂಪತ್ತು ಗಳಿಸಲು ಪ್ರಯತ್ನಿಸಿದನೇ ವಿನ: ಒಳಗಿರುವ ಅಧ್ಯಾತ್ಮದ ಸಂಪತ್ತು ಗಳಿಸಲು ಮುಂದಾಗಲಿಲ್ಲ. ಹೀಗಾಗಿ ಮಾನವನ ಬದುಕು ಅಶಾಂತಿ ಅತೃಪ್ತಿಯ ಕಡಲಾಗಿದೆ. ಸ್ವಾರ್ಥಕ್ಕಾಗಿ ಆದರ್ಶ ಧಾರ್ಮಿಕ ಮತ್ತು ಸಾಮಾಜಿಕ ಮೌಲ್ಯಗಳನ್ನು ನಾಶಗೊಳಿಸಬಾರದು. ಶ್ರೀ ಜಗದ್ಗುರು ರೇಣುಕಾಚಾರ್ಯರ ಮೌಲ್ಯಾಧಾರಿತ ವಿಚಾರ ಧಾರೆಗಳು ಸರ್ವ ಸಮುದಾಯಕ್ಕೂ ಅನ್ವಯಿಸುತ್ತವೆ. ಕ್ಷೇತ್ರನಾಥನಾಗಿ ಪೂಜೆಗೊಳ್ಳುವ ಶ್ರೀ ವೀರಭದ್ರಸ್ವಾಮಿಯ ಕ್ರಿಯಾ ಕರ್ತೃತ್ವ ಶಕ್ತಿ ಅದ್ಭುತವಾದುದು. ಐದು ದಿನಗಳ ಕಾಲ ಜರುಗಲಿರುವ ಧರ್ಮ ಸಮಾವೇಶದಲ್ಲಿ ಸರ್ವರೂ ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂದು ಕರೆಯಿತ್ತರು.

ಈ ಅಪೂರ್ವ ಸಂದರ್ಭದಲ್ಲಿ ಸುಳ್ಳದ ಶಿವಸಿದ್ಧರಾಮೇಶ್ವರ ಶ್ರೀಗಳು, ಸಿದ್ಧರಬೆಟ್ಟದ ವೀರಭದ್ರ ಶ್ರೀಗಳು, ಮಳಲಿ ನಾಗಭೂಷಣ ಶ್ರೀಗಳು, ಸಂಗೊಳ್ಳಿ ಹಿರೇಮಠದ ಗುರುಲಿಂಗ ಶ್ರೀಗಳು, ಹೆಗ್ಗಡಹಳ್ಳಿಮಠದ ಷಡ್ಭಾವ ರಹಿತೇಶ್ವರ ಶ್ರೀಗಳು, ಅರಗಿನಡೋಣಿ ಸಿದ್ಧಲಿಂಗ ಶ್ರೀಗಳು, ದೊಡ್ಡಸಗರದ ಸೋಮೇಶ್ವರ ಶ್ರೀಗಳು, ಆಡಳಿತಾಧಿಕಾರಿ ಎಸ್.ಬಿ.ಹಿರೇಮಠ, ನ್ಯಾಮತಿ ಬಸವರಾಜ, ವೇ.ಬಸವರಾಜ ಶಾಸ್ತ್ರಿಗಳು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಶ್ರೀ ಸೋಮೇಶ್ವರ ದೇವಾಲಯದ ಮುಂಭಾಗದಲ್ಲಿ ನಂದಿ ಶಿಲಾ ಕಂಭವನ್ನು ಶ್ರೀ ರಂಭಾಪುರಿ ಜಗದ್ಗುರುಗಳು ಪ್ರತಿಷ್ಠಾಪಿಸಿದರು. ಹರಿದ್ರಾ ಲೇಪನ ಕಾರ್ಯಕ್ಕೆ ಗಂಗಾಪೂಜೆ ನೆರವೇರಿಸಿ ಅಗ್ರೋದಕ ತರಲಾಯಿತು. ಮಧ್ಯಾಹ್ನ ಚಿಕ್ಕಮಗಳೂರು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ರಕ್ಷಣಾಧಿಕಾರಿಗಳು ಶ್ರೀ ಪೀಠಕ್ಕೆ ಆಗಮಿಸಿ ಜಗದ್ಗುರುಗಳ ಆಶೀರ್ವಾದ ಪಡೆದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!