May 18, 2024

MALNAD TV

HEART OF COFFEE CITY

ಮಾರ್ಕೆಟ್ ರಸ್ತೆಯಲ್ಲಿನ ನಿರುಪಯುಕ್ತ ವಾಹನಗಳ ತೆರವು

1 min read

ಚಿಕ್ಕಮಗಳೂರು-ನಗರದಲ್ಲಿ ಪಾದಾಚಾರಿ ರಸ್ತೆಯನ್ನು ಒತ್ತುವರಿ ಮಾಡಿ ನಿರುಪಯುಕ್ತ ವಾಹನಗಳನ್ನು ನಿಲ್ಲಿಸಿ ಸಂಚಾರಕ್ಕೆ ಅಡ್ಡಿಯಾಗುತ್ತಿದ್ದ ಬಗ್ಗೆ ದೂರುಗಳು ಬಂದ ಹಿನ್ನೆಲೆ ನಗರಸಭೆ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್ ನೇತೃತ್ವದಲ್ಲಿ ವಾಹನಗಳು ತೆರವು ಮಾಡಲಾಯಿತು.
ಬಳಿಕ ಮಾತನಾಡಿದ ಅವರು ನಗರದ ಮಾರ್ಕೆಟ್ ರಸ್ತೆಯಲ್ಲಿ 20 ಕ್ಕೂ ಹೆಚ್ಚು ಗ್ಯಾರೇಜ್ ಅಂಗಡಿಗಳಿದ್ದು, ವಾಹನಗಳನ್ನು ರಸ್ತೆಗಳಲ್ಲಿ ನಿಲ್ಲಿಸಿ ರಿಪೇರಿ ಮಾಡುವುದರ ಜತೆಗೆ ನಿರುಪಯುಕ್ತ ವಾಹನಗಳನ್ನು ಪಾದಾಚಾರಿ ಮಾರ್ಗದಲ್ಲಿ ನಿಲ್ಲಿಸುತ್ತಿದ್ದ ಕಾರಣ ವರ್ತಕರು, ವ್ಯಾಪಾರಿಗಳು ಸಾಕಷ್ಟು ತೊಂದರೆಯಾಗುತ್ತಿತ್ತು ಬಗ್ಗೆ ಆಗ್ಗಾಗ್ಗೆ ದೂರುಗಳು ಕೇಳಿಬಂದಿದ್ದು ಇದೀಗ ನಗರಸಭೆ ವತಿಯಿಂದ ಪೊಲೀಸರ ಸಹಕಾರದೊಂದಿಗೆ ತೆರವು ಮಾಡಲಾಗಿದೆ ಎಂದರು.
ಸುಗಮ ಸಂಚಾರದ ದೃಷ್ಟಿಯಿಂದ ರಸ್ತೆಯಲ್ಲಿ ನಿರುಪಯುಕ್ತವಾಗಿ ನಿಲ್ಲಿಸಿದ್ದ ವಾಹನಗಳನ್ನು ಇಂದು ತೆರವು ಮಾಡಿ ಸೂಚನೆ ನೀಡಲಾಗಿದೆ ಮುಂದಿನ ದಿನಗಳಲ್ಲಿ ದಂಡ ವಿಧಿಸಲಾಗುವುದು ಎಂದು ಎಚ್ಚರಿಸಿದರು.

ನಗರಸಭೆ ಪೌರಾಯುಕ್ತ ಬಿ.ಸಿ.ಬಸವರಾಜ್ ಮಾತನಾಡಿ ನಗರದ ಮಾರ್ಕೆಟ್ ರಸ್ತೆಯಲ್ಲಿ ಅನಧೀಕೃತವಾಗಿ ವಾಹನಗಳನ್ನು ನಿಲ್ಲಿಸಿ ವಾಹನಗಳ ಹಾಗೂ ಸಾರ್ವಜನಿಕರ ಸಂಚಾರಕ್ಕೆ ಅಡಚಣೆಯಾಗುತ್ತಿದ್ದ ಹಿನ್ನೆಲೆ ಗ್ಯಾರೇಜ್ ಮಾಲೀಕರಿಗೆ ತಿಳುವಳಿಕೆ ಮೂಡಿಸಿ ಕೆಲವು ಅನುಪಯುಕ್ತ ವಾಹನಗಳನ್ನು ನಗರಸಭೆ ವತಿಯಿಂದ ತೆರವು ಮಾಡಲಾಗಿದೆ ಎಂದರು.ಈ ಮಾದರಿ ಕಾರ್ಯಾಚರಣೆ ಪ್ರತಿದಿನ ನಡೆಯಲಿದ್ದು ಗ್ಯಾರೇಜ್ ಮಾಲೀಕರು ಎಚ್ಚೆತ್ತುಕೊಳ್ಳದಿದ್ದಲ್ಲಿ ಮುಂದಿನ ದಿನಗಳಲ್ಲಿ ದಂಡ ವಿಧಿಸಿ ಕ್ರಿಮಿನಲ್ ಕೇಸ್ ದಾಖಲಿಸಲಾಗುವುದು ಎಂದು ಎಚ್ಚರಿಸಿದರು.
ನಗರ ಸಂಚಾರ ಠಾಣೆ ಪಿಎಸ್‍ಐ ಚಂದ್ರಶೇಖರ್ ಮಾತನಾಡಿ ವಾಹನಗಳನ್ನು ರಸ್ತೆಗೆ ಅಡ್ಡಲಾಗಿ ನಿಲ್ಲಿಸಿ ಸಂಚಾರಕ್ಕೆ ಅಡಚಣೆ ಮಾಡುವುದು ತಪ್ಪು. ಈ ಹಿನ್ನಲೆ ನಗರದ ಮಾರ್ಕೆಟ್ ರಸ್ತೆಯಲ್ಲಿ ಕೆಲವು ಗ್ಯಾರೇಜ್ ಅಂಗಡಿ ಎದುರು ಅನೇಕ ಅನುಪಯುಕ್ತ ವಾಹನಗಳನ್ನು ನಿಲ್ಲಿಸಿ ಸಂಚಾರಕ್ಕೆ ತೊಡಕಾಗುತ್ತಿರುವ ಬಗ್ಗೆ ನಗರಸಭೆ ಅಧಿಕಾರಿಗಳು ಗಮನಕ್ಕೆ ತಂದಿದ್ದು ಈ ಹಿನ್ನಲೆ ಕಾರ್ಯಾಚರಣೆ ಮೂಲಕ ವಾಹನಗಳ ತೆರವುಗೊಳಿಸುವ ಕಾರ್ಯವನ್ನು ನಗರಸಭೆ ಮಾಡುತ್ತಿದ್ದು ಅದಕ್ಕೆ ಸಹಕಾರ ನೀಡಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಆರೋಗ್ಯ ನಿರೀಕ್ಷಕರಾದ ಈಶ್ವರ್, ಶ್ರೀನಿವಾಸ್ ಮೂರ್ತಿ, ರಂಗಪ್ಪ, ಶ್ರೀನಿವಾಸ, ಶಶಿರಾಜ್ ಅರಸ್, ಸ್ಯಾನಿಟೈಸರಿ ಸೂಪರ್ ವೈಸರ್ ಅಣ್ಣಯ್ಯ, ಇದ್ದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!