May 18, 2024

MALNAD TV

HEART OF COFFEE CITY

ಕೆರೆಕಟ್ಟೆಗಳನ್ನು ಉಳಿಸಿದಿದ್ರೆ ಆಪತ್ತು ಕಟ್ಟಿಟ್ಟ ಬುತ್ತಿ_ಡಾ. ಕಾಂತರಾಜ್

1 min read

ಚಿಕ್ಕಮಗಳೂರು: ನಮಗೆ ದೈವದತ್ತವಾಗಿ ಬಂದಂತಹ ನೈಸರ್ಗಿಕ ಸಂಪನ್ಮೂಲಗಳಾದ ಕೆರೆಕಟ್ಟೆಗಳನ್ನು ಉಳಿಸಿಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಆಪತ್ತುಗಳನ್ನು ಎದುರಿಸಬೇಕಾಗುತ್ತದೆ ಎಂದು ಚಿಕ್ಕಮಗಳೂರು ತಹಶೀಲ್ದಾರ್ ಡಾ. ಕಾಂತರಾಜ್ ತಿಳಿಸಿದರು.

ತಾಲೂಕಿನ ಬೀರದೇವರನಹಳ್ಳಿಯಲ್ಲಿ ನಮ್ಮೂರು ನಮ್ಮ ಕೆರೆ ಕಾರ್ಯಕ್ರಮದಡಿಯಲ್ಲಿ ಗ್ರಾಮದ ಗುಡಿಕಟ್ಟೆ ಕೆರೆ ಹೊಳೆತ್ತುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು, ಕೆರೆಕಟ್ಟೆಗಳ ವಿಚಾರದಲ್ಲಿ ಗ್ರಾಮಗಳಲ್ಲಿ ಹೊಂದಾಣಿಕೆ ಇಲ್ಲದಿರುವುದರಿಂದ ನಮ್ಮ ಅನೇಕ ನೈಸರ್ಗಿಕ ಸಂಪನ್ಮೂಲಗಳು ನಶಿಸಿ ಹೋಗುತ್ತಿವೆ ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು, ಸಂಘಸಂಸ್ಥೆಗಳು ಕೆರೆಗಳನ್ನು ಉಳಿಸಿಕೊಳ್ಳುವ ಕೆಲಸ ಮಾಡಬೇಕು ಎಂದರು.

ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಜಿಲ್ಲಾ ನಿದೇರ್ಶಕರಾದ ಪ್ರಕಾಶ್ ರಾವ್ ಮಾತನಾಡಿ, ಭೂಮಿ ಮೇಲೆ ಮೂರನೇ ಎರಡು ಭಾಗದಷ್ಟು ನೀರು ಇದ್ದು ಶೇ. 99 ರಷ್ಟು ನೀರು ಕುಡಿಯಲು ಯೋಗ್ಯವಿಲ್ಲ ಎಂದು ತಿಳಿಸಿದರು. ಇವತ್ತು ಭೂಮು, ನೀರು, ಗಾಳಿ ಕಲುಷಿತವಾಗಿದೆ ಇದಕ್ಕೆ ಮಾನವ ಕಾರಣ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ದಾಖಲೆ ಪ್ರಕಾರ ರಾಜ್ಯದಲ್ಲಿ 24 ಸಾವಿರ ಕೆರೆ ಇದೆ. ಆದರೆ ನಿಧಾನವಾಗಿ ಕೆರೆಗಳು ಒತ್ತುವರಿಯಾಗಿ ಕೆರೆಗಳು ನಶಿಸಿ ಹೋಗುತ್ತಿದೆ. ಈ ಹಿನ್ನೆಲೆಯಲ್ಲಿ ರೈತಾಪಿ ವರ್ಗ ಕೆರೆಗಳ ಹೂಳು ಎತ್ತಿ, ಏರಿಯನ್ನು ಭದ್ರಪಡಿಸಿ ಅವುಗಳನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಬೇಕು, ಗ್ರಾಮದಲ್ಲಿ ಕೆರೆಗಳನ್ನು ಉಳಿಸಿದ್ರೆ ಅಲ್ಲಿ ನೀರು ಇರುತ್ತೆ. ನೀರು ಇದ್ದರೆ ಇಡೀ ಕೆರೆಯ ಪರಿಸರ ಉತ್ತಮವಾಗಿರುತ್ತದೆ ಈ ಹಿನ್ನೆಲೆ ಧರ್ಮಸ್ಥಳ ಗ್ರಾಮಾಣಾಭಿವೃದ್ಧಿ ಯೋಜನೆ ನಮ್ಮೂರು ನಮ್ಮ ಕೆರೆ ಯೋಜನೆಯ ಮೂಲಕ ಕೆರೆಗಳ ಉಳಿವಿಗೆ ಮುಂದಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮೋಹನ್ ಬಿ, ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಜಯರಾಂ, ಯೋಜನಾಧಿಕಾರಿ ಕೊರಗಪ್ಪ ಪೂಜಾರಿ, ಕೆರೆ ಅಭಿಯಂತರರಾದ ಭರತ್, ಕೆರೆ ಸಮಿತಿ ಅಧ್ಯಕ್ಷರಾದ ನಾಗರಾಜ್, ಗ್ರಾಮ ಪಂಚಾಯಿತಿ ಸದಸ್ಯರಾದ ತಿಮ್ಮೇಗೌಡ, ವಲಯ ಮೇಲ್ವಿಚಾರಕರು, ಕೃಷಿ ಮೇಲ್ವಿಚಾರಕರು, ಸೇವಾಪ್ರತಿನಿಧಿಗಳು ಮತ್ತು ಕೆರೆ ಸಮಿತಿ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!