May 8, 2024

MALNAD TV

HEART OF COFFEE CITY

ಯೂಸ್ ಅಂಡ್ ಥ್ರೂ ಪಾಲಿಟಿಕ್ಸ್ ಕೇಜ್ರಿವಾಲ್‍ಗೆ ಚೆನ್ನಾಗಿ ಗೊತ್ತು_ಸಿ.ಟಿ ರವಿ

1 min read

 

ಚಿಕ್ಕಮಗಳೂರು: ಯೂಸ್ ಅಂಡ್ ಥ್ರೋ ಪಾಲಿಟಿಕ್ಸ್ ಕೇಜ್ರಿವಾಲ್‍ಗಿಂದ ಚೆನ್ನಾಗಿ ಯಾರು ಮಾಡಲಾರರು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಹೇಳಿದರು.ಗೋವಾದಲ್ಲಿ ಪರಿಕ್ಕರ್ ಮಗನ ವಿಚಾರವಾಗಿ ಯೂಸ್ ಅಂಡ್ ಥ್ರೋ ಹೇಳಿಕೆ ನೀಡಿರುವ ಆಮ್ ಆದ್ಮಿ ಪಾರ್ಟಿಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು ಯೋಗೀಂದ್ರ ಯಾದವ್, ಪ್ರಶಾಂತ್ ಭೂಷಣ್ ಅವರೆಲ್ಲಾ ಆಗಿದ್ದರೆ ಯೂಸ್ ಅಂಡ್ ಥ್ರೋನಾ ಆಮ್ ಆದ್ಮಿಗೆ ತಿರುಗೇಟು ನೀಡಿದ ಅವರು ಬಿಜೆಪಿ ಮನೋಹರ್ ಪರಿಕ್ಕರ್‍ಗೆ ಎಲ್ಲಾ ಗೌರವವನ್ನು ನೀಡಿದೆ ರಕ್ಷಣಾ ಸಚಿವರಾಗಿಯೂ ಕೆಲಸ ಮಾಡಿದ್ದಾರೆ ಎಂದು ತಿಳಿಸಿದರು.

ಯೋಗಿಂದ್ರ ಯಾದವ್, ಪ್ರಶಾಂತ್ ಭೂಷಣ್, ಕುಮಾರ್ ವಿಶ್ವಾಸ್ ನೋಡಿದಾಗ ಕೇಜ್ರಿವಾಲ್‍ಗೆ ಆ ಪದದ ಅರ್ಥ ಗೊತ್ತಾಗಿದೆ. ಅವರಿಗೆ ಅಧಿಕಾರ ಇಲ್ಲದಾಗ ಯಾರಿದ್ರು, ಈಗ ಯಾರಿದ್ದಾರೆ ಎಂದು ನೋಡಿದಾಗ ಯೂಸ್ ಅಂಡ್ ಥ್ರೋ ಪಾಲಿಟಿಕ್ಸ್ ಗೊತ್ತಾಗುತ್ತದೆ ಎಂದು ಹೇಳಿದರು ಪರಿಕ್ಕರ್ ಬದುಕಿದ್ದಾಗ ಆಮ್ ಆದ್ಮಿ ಪಾರ್ಟಿ ಅವಮಾನ ಮಾಡಿತ್ತು. ಈಗಲೂ ಅದನ್ನೇ ಮುಂದುವರೆಸುತ್ತಿದ್ದಾರೆ. ಗೋವಾ ಬಿಜೆಪಿ ಬೆಳವಣಿಗೆಯಲ್ಲಿ ಪರಿಕ್ಕರ್ ಪಾತ್ರ ಬಹಳ ದೊಡ್ಡದಿದೆ ಅವರನ್ನು ಎತ್ತರದ ಸ್ಥಾನದಲ್ಲಿ ಇಡುತ್ತೇವೆ ಹಾಗೂ ಅವರ ಮಗ ನಮ್ಮ ಕಾರ್ಯಕರ್ತ ನಾವು ಅವರನ್ನು ಸಂಭಾಳಿಸುತ್ತೇವೆ ನಮಗೆ ಗೊತ್ತಿದೆ ಎಂದು ತಿಳಿಸಿದರು.

ಇದೇ ವೇಳೆ ಮಾತನಾಡಿದ ಅವರು, ಜನರು ಲಾಕ್‍ಡೌನ್ ಹಾಗೂ ಕಫ್ರ್ಯೂ ಬೇಡ ಎಂಬ ಅಪೇಕ್ಷೆಯನ್ನು ಹೊರಹಾಕುತ್ತಿದ್ದು ಜನರ ಅಭಿಪ್ರಾಯವನ್ನು ಸರ್ಕಾರದ ಗಮನಕ್ಕೆ ತರಲಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ಸೂಕ್ತ ನಿರ್ಧಾರ ತಗೆದುಕೊಳ್ಳುತ್ತದೆ ಎಂಬ ವಿಶ್ವಾಸ ಇದೆ ಎಂದರು.

ಮೂರನೇ ಅಲೆಯ ತೀವ್ರತೆ ಹಾಗೂ ತಜ್ಞರ ಪ್ರಕಾರ ಅಷ್ಟೊಂದು ಈ ವೈರಾಣು ಪ್ರಭಾವ ಬೀರುವುದಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಮೂರನೇ ಅಲೆಯಲ್ಲಿ ವೈರಾಣುವಿನ ಪಾಸಿಟೀವ್ ರೇಟ್ ಹೆಚ್ಚಿದೆ ಪರಿಣಾಮದ ತೀವ್ರತೆ ಕಡಿಮೆ ಇದ್ದು ಆಸ್ಪತ್ರೆಗೆ ದಾಖಲಾಗುವ ಸಂಖ್ಯೆ ಕಡಿಮೆ ಇರುವ ಹಿನ್ನೆಲೆ ಜೀವಕ್ಕೆ ಈ ವೈರಾಣುವನಿಂದ ಅಪಾಯ ಇಲ್ಲ ಎಂಬುದು ಕಳೆದ 15 ದಿನಗಳಿಂದ ಗಮನಿಸಿದಾಗ ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಜೀವಕ್ಕೆ ಅಪಾಯ ಇಲ್ಲ ಎಂದ ಮೇಲೆ ಜೀವನ ನಡೆಯಬೇಕು ಎಂಬ ನಿಟ್ಟಿನಲ್ಲಿ ತಜ್ಞರ ಹೇಳಿಕೆ ಪ್ರಕಾರ ಜೀವನಕ್ಕೆ ತೊಂದರೆಯಾಗುವಂತಹ ನಿಯಮಗಳನ್ನು ಬಿಟ್ಟು ಜನರ ಅಪೇಕ್ಷೆಯಂತೆ ಇನ್ನೀತರ ಕ್ರಮ ಕೈಗೊಳ್ಳವಂತೆ ಸರ್ಕಾರ ತಿಳಿಸಲಾಗಿದೆ ಎಂದು ಹೇಳಿದರು.

ಇದೇ ವೇಳೆ ಜಿಲ್ಲಾ ಕಾಂಗ್ರೆಸ್ ಬಗ್ಗೆ ಗುಡುಗಿಸ ಸಿ.ಟಿ ರವಿ, ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಾಗ ಜಿಲ್ಲಾ ಕಾಂಗ್ರೆಸ್‍ಗೆ ಪ್ರಭಾವವೂ ಇರಲಿಲ್ಲ, ಇಚ್ಚಾಶಕ್ತಿ ಹಾಗೂ ಯೋಗ್ಯತೆಯೂ ಇರಲಿಲ್ಲ. ಅವರ ಆಡಳಿತದ ಸಂದರ್ಭದಲ್ಲಿಯೂ ಎಲ್ಲವನ್ನು ಕಳೆದುಕೊಂಡವರ ರೀತಿ ಇದ್ದರು. ಸಿದ್ದರಾಮಯ್ಯ ಅವರ ಎದುರಿಗೆ ನಿಂತು ಜಿಲ್ಲೆಯಲ್ಲಿ ನಮ್ಮ ಪಕ್ಷದ ಗೌರವ ಉಳಿಸಿ ಅಂತಾ ಕೇಳಿಕೊಳ್ಳುವ ಸ್ಥಿತಿಯಲ್ಲಿ ಜಿಲ್ಲಾ ಕಾಂಗ್ರೆಸ್ ಇರಲಿಲ್ಲ ಎಂದು ವ್ಯಂಗ್ಯವಾಡಿದರು

ಜಿಲ್ಲೆಗೆ ಮೆಡಿಕಲ್ ಕಾಲೇಜು ಮಂಜೂರಾತಿಯಾಗಿದ್ದು ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಡಬಲ್ ಇಂಜಿನ್ ಸರ್ಕಾರ ಬಂದ ಮೇಲೆ. ಈಗಾಗಲೇ ಕೆಲಸ ನಡೆಯತ್ತಿದೆ. ತಾತ್ಕಲಿಕ ಕಟ್ಟಡ, ಪಿಠೋಪಕರಣಗಳು, ಹಾಸ್ಟೇಲ್ ಬಿಲ್ಡಂಗ್ ಕಾಮಗಾರಿ ನಡೆಯುತ್ತಿದೆ. ಆಡಳಿತ ಕಚೇರಿಗೆ ಸ್ಥಳ ನೀಡಿದ್ದೇವೆ. ಇನ್ನು ನೇಮಕಾತಿ ಪ್ರಕ್ರಿಯೆ ಕೋವಿಡ್ ಸಂದರ್ಭದಿಂದ ಮುಂದೆ ಹೋಗಿ ಈಗಾಗಲೇ ಅಂತಿಮ ಹಂತದಲ್ಲಿದೆ ಇದೆಲ್ಲವೂ ಸಹ ಬಿಜೆಪಿ ಸರ್ಕಾರದ ಆಡಳಿತದಲ್ಲಿ ಆಗಿದ್ದು ಇದ್ರಲ್ಲಿ ಕಾಂಗ್ರೆಸ್ ಕೊಡುಗೆ ಏನು ಎಂದು ಪ್ರಶ್ನಿಸಿದರು.

ಈ ಹಿಂದೆ ಕಾಂಗ್ರೆಸ್ ಸರ್ಕಾರ ಇದ್ದಾಗ ಮೆಡಿಕಲ್ ಕಾಲೇಜು ಪ್ರಾರಂಭದ ಬಗ್ಗೆ ಪ್ರಸ್ತಾಪ ಹಾಗೂ ಪ್ರಯತ್ನ ಮಾಡಲಿಲ್ಲ ಈಗ ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ವ್ಯಂಗ್ಯವಾಡಿದ ಅವರು, ಕಾಂಗ್ರೆಸ್ ಜಿಲ್ಲಾಧ್ಯಕ್ಷರು ಯಾವ ಡಾಕ್ಟರ್ ಅಂತಾ ನನಗೆ ಗೊತ್ತಿಲ್ಲ ಹೇಳಿಕೆ ನೀಡುವಾಗ ಸ್ವಲ್ಪ ಯೋಚನೆ ಮಾಡಿ ಮಾತನಾಡಬೇಕು ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ. ಅಂಶುಮಂತ್ ವಿರುದ್ಧ ಆಕ್ರೋಶ ಹೊರಹಾಕಿದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!