May 19, 2024

MALNAD TV

HEART OF COFFEE CITY

‘CEIR Portal’ ಮೂಲಕ ಕಳೆದ ಮತ್ತು ಕದ್ದ ಫೋನ್‌ ಪತ್ತೆ; 200 ಮೊಬೈಲ್​​ ಫೋನ್ ಹುಡುಕಿ, ಹಿಂತಿರುಗಿಸಿದ ಪೊಲೀಸ್ ಪಡೆ

1 min read

ಚಿಕ್ಕಮಗಳೂರು: ಕದ್ದ ಮತ್ತು ಕಳೆದುಹೋದ ಮೊಬೈಲ್ ಫೋನ್ ಗಳನ್ನು ಸಿಇಐಆರ್ ವ್ಯವಸ್ಥೆಯ ಮೂಲಕ ಪತ್ತೆಹಚ್ಚಿ, ಮೊಬೈಲ್‌ಗಳನ್ನು ಮಾಲೀಕರಿಗೆ ಹಿಂತಿರುಗಿಸುವಲ್ಲಿ ಪೊಲೀಸ್ ಇಲಾಖೆಯ ಕಾರ್ಯ ಶ್ಲಾಘನೀಯ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ವಿಕ್ರಂ ಅಮಟೆ ತಿಳಿಸಿದರು.

ಇಂದು ಜಿಲ್ಲಾ ಪೊಲೀಸ್ ಕಚೇರಿ ಸಭಾಂಗಣದಲ್ಲಿ  CEIR ಪೋರ್ಟಲ್ ಗೆ ಸಂಬಂಧಿಸಿದಂತೆ ವಶಪಡಿಸಿಕೊಂಡ ಮೊಬೈಲ್ ಫೋನ್ ಗಳನ್ನು ವಾರಸುದಾರರಿಗೆ ಹಿಂದಿರುಗಿಸುವ ಸಂಬಂಧ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಫೋನ್‌ಗಳನ್ನು ಪತ್ತೆ ಹಚ್ಚುವಲ್ಲಿ ಕೇಂದ್ರ ಸಲಕರಣೆ ಗುರುತಿಸುವಿಕೆ ನೋಂದಣಿ (Central Equipment Identity Register- CEIR) ವ್ಯವಸ್ಥೆ ಸಹಕಾರಿಯಾಗಿದ್ದು, ಈ ಸೇವೆಯನ್ನು ಬಳಸಿಕೊಂಡು ಪೊಲೀಸರು ಇಂತದ್ದೊಂದು ಯಶಸ್ವಿ ಕಾರ್ಯಚರಣೆ ಮಾಡಿದ್ದಾರೆ. ಅದಲ್ಲದೇ ಈ ತಂತ್ರಜ್ಞಾನ ಫೋನ್‌ ಕಳ್ಳರಿಗೆ ಒಂದು ಎಚ್ಚರಿಕೆಯ ಗಂಟೆಯಾಗಿದೆ ಎಂದು ಹೇಳಿದರು.

ಈ ಪೋರ್ಟಲ್ ಮೂಲಕ ಕಳೆದು ಹೋದ 200 ಮೊಬೈಲ್ ಗಳನ್ನು ಪತ್ತೆ ಹಚ್ಚಿದ ನಮ್ಮ ಎಲ್ಲಾ ಠಾಣಾಧಿಕಾರಿಗಳು, ಅದರಲ್ಲೂ ಮುಖ್ಯವಾಗಿ CEIR ಠಾಣೆಯ ಪೊಲೀಸರು ಮೊಬೈಲ್ ಟ್ರೇಸ್ ಮಾಡುವುದಲ್ಲಿ ಯಶಸ್ವಿಯಾಗಿದ್ದಾರೆ. 2022 ರ ನಂತರ CEIR ಪೋರ್ಟಲ್ ನಲ್ಲಿ ಕಳೆದುಹೋದ ಮೊಬೈಲ್ ನ ದಾಖಲೆಗಳನ್ನು ಹಾಕಿದರೆ ಆ ದಾಖಲೆಗಳ ಅನುಸಾರ ಮೊಬೈಲ್ ನನ್ನು ಹುಡುಕಲು ಸಹಾಯ ಆಗುತ್ತದೆ. ಈ ಮೂಲಕ ಕಳೆದುಹೋದ ಮೊಬೈಲ್ ನನ್ನ ಟ್ರೇಸ್ ಮಾಡಬಹುದು ಅಲ್ಲದೆ ಅದು ಯಾವುದೇ ಕ್ರಿಮಿನಲ್ ಪ್ರಕರಣಗಳಿಗೆ ಬಳಸಿದಂತೆ ಅದನ್ನು ಬ್ಲಾಕ್ ಮಾಡಬಹುದು ಎಂದು ತಿಳಿಸಿದರು.

ಹಿಂದೆ ಮೊಬೈಲ್ ಕಳೆದುಕೊಂಡವರಿಗೆ ಮೊಬೈಲ್ ಫೋನ್ ಮರಳಿ ಸಿಗುವುದೇ ಕಷ್ಟ ಆಗಿತ್ತು ಆದರೆ ಈ ವಿಶೇಷವಾದ ಪೋರ್ಟಲ್ ನಿಂದ ಪೊಲೀಸರು ಮೊಬೈಲ್ ಗಳನ್ನ ಟ್ರೇಸ್ ಮಾಡಿ ವಾರಸುದಾರರಿಗೆ ಹಿಂತಿರುಗಿಸುತ್ತಿದ್ದಾರೆ. ಒಂದು ವೇಳೆ ಯಾವುದಾದರೂ ಮೊಬೈಲ್ ಕಳ್ಳತನವಾದರೆ ಅಥವಾ ಕಳೆದು ಹೋದರೆ ಅದರ ವಾರಸುದಾರರು ತಕ್ಷಣ CEIR ಪೋರ್ಟಲ್ ನಲ್ಲಿ ಮೊಬೈಲ್ ಮಾಹಿತಿಯನ್ನು ದಾಖಲಿಸಬೇಕು. ಅವರಿಗೆ ಅದು ಸಾಧ್ಯವಾಗದಿದ್ದಲ್ಲಿ ಹತ್ತಿರದ ಪೊಲೀಸ್ ಠಾಣೆಗೆ ಬಂದು ದೂರನ್ನು ನೀಡಬೇಕು. ಅದನ್ನು ಹುಡುಕಿ ಕೊಡುವುದರ ಜೊತೆಗೆ ಅದು ಯಾವುದೇ ಅಪರಾಧ ಕೃತ್ಯಗಳಿಗೆ ಬಳಸಿಕೊಳ್ಳದಂತೆ ನೋಡಿಕೊಳ್ಳುವುದು ನಮ್ಮ ಪೊಲೀಸ್ ಇಲಾಖೆಯ ಜವಾಬ್ದಾರಿ ಎಂದು ಸಾರ್ವಜನಿಕರಿಗೆ ಮಾಹಿತಿ ನೀಡಿದ್ದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!