April 29, 2024

MALNAD TV

HEART OF COFFEE CITY

ಕೊಡುಗೈ ದಾನಿ ಗೌರಮ್ಮ ಬಸವೇಗೌಡ(೮೭)ನಿಧನ

1 min read

ಸಮಾಜ ಸೇವೆಯನ್ನೇ ಮೈಗೂಡಿಸಿಕೊಂಡು ಸಾರ್ಥಕ ಬದುಕು ನಡೆಸಿದ್ದ ಕೊಡುಗೈ ದಾನಿ ಗೌರಮ್ಮ ಬಸವೇಗೌಡ(೮೭) ಇಂದು ಬೆಂಗಳೂರಿನಲ್ಲಿ ನಿಧನ ಹೊಂದಿದ್ದಾರೆ. ಹಾಸನ ಜಿಲ್ಲೆಯ ಬಿ.ಕೆ ಸೋಮೇಗೌಡ- ಪುಟ್ಟಮ್ಮ ದಂಪತಿಗಳಿಗೆ ಜನಿಸಿದ ಗೌರಮ್ಮ ಬೇಡಚವಳ್ಳಿ ಮನೆತನದವರು. ದಾನ-ಧರ್ಮ ಪರೋಪಕಾರಗಳಿಗೆ ಹೆಸರಾದ ಮನೆತನ ಅರಳುಗುಪ್ಪೆ ವಂಶ. ಎಸಿ ಮನೆತನದ ಎ.ಎಂ. ಬಸವೇ ಗೌಡರನ್ನು ೮. ೬. ೧೯೪೯ ರಲ್ಲಿ ವಿವಾಹವಾಗಿ ಕುಟುಂಬದಲ್ಲಿ ಮಡದಿಯಾಗಲಿ. ಸೊಸೆಯಾಗಿ. ತಾಯಿಯಾಗಿ. ಅತ್ತೆಯಾಗಿ. ಅಜ್ಜಿಯಾಗಿ ಗೌರಮ್ಮ ಜವಾಬ್ದಾರಿಯಿಂದ ಈ ಕುಟುಂಬವನ್ನು ಮುನ್ನಡೆಸುತ್ತಾ. ಕಲೆ-ಸಂಸ್ಕೃತಿ ಧಾರ್ಮಿಕತೆ. ಸಾಮಾಜಿಕ ಕಾಳಜಿಯೊಂದಿಗೆ ಆದರ್ಶಮಯವಾಗಿ ಜೀವನ ಮಾಡುತ್ತಿದ್ದ ಶ್ರೀಮತಿ ಗೌರಮ್ಮ ಬಸವೇಗೌಡ ಇನ್ನಿಲ್ಲ ಎಂಬುದು ದುಃಖಕರ ಸಂಗತಿ ಹಾಗೂ ಸಮಾಜಕ್ಕೆ ದೊಡ್ಡ ನಷ್ಟವಾಗಿದೆ.

ಜಾತಿ- ಧರ್ಮ ಪ್ರದೇಶದ ಎಲ್ಲೆಮೀರಿ ನಿಜ ಭಕ್ತಿಯಿಂದ ಪ್ರೀತಿ ಗೌರವಗಳಿಂದ ದಾನ-ಧರ್ಮ ಮಾಡುತ್ತಾ.. ಇವರು ಅಪರೂಪದ ವ್ಯಕ್ತಿತ್ವ ಹೊಂದಿ ಎಲ್ಲರಿಗೂ ತಾಯಿ ಗೌರಮ್ಮ ಆಗಿದ್ದರು.
ನೂರಾರು ಸಂಘ-ಸAಸ್ಥೆಗಳು ಮಠ-ಮಂದಿರಗಳು ಸೇವಾ ಸಂಸ್ಥೆಗಳ ಒಡನಾಟ ಹೊಂದಿದ್ದ ಅಮ್ಮ ಗೌರಮ್ಮ ಮನೆತನ ಸಾಂಸ್ಕೃತಿಕ ಇತಿಹಾಸಕ್ಕೆ ಅಪೂರ್ವ ಕೊಡುಗೆ ನೀಡಿದ್ದರು. ತಿಪ್ಪನಹಳ್ಳಿ ªನೆ ಅತಿಥಿ ಸತ್ಕಾರಕ್ಕೆ ಹೆಸರು ಮಾಡಿತ್ತು ಮನೆಯಲ್ಲಿ ಶ್ರೀ ಜಗದ್ಗುರುಗಳಾದ ರಂಭಾಪುರಿ ಶ್ರೀಗಳು. ಸುತ್ತೂರ್ ಮಠ ಶ್ರೀಗಳು. ಮುರುಘಾ ಶ್ರೀಗಳು ಸೇರಿದಂತೆ ಹಲವಾರು ಧಾರ್ಮಿಕ ಗುರುಗಳು ಮನೆಯಲ್ಲಿ ಆಶೀರ್ವಚನ ನೀಡಿದ್ದಾರೆ. ಮೈಸೂರು ರಾಜಮನೆತನದ ಯುವರಾಜ ಜಯಚಾಮರಾಜೇಂದ್ರ ಒಡೆಯರ್ ಅವರು ಕೂಡ ಈ ಮನೆಯಲ್ಲಿ ಉಳಿದುಕೊಂಡಿದ್ದರು. ಇನ್ನು ಅರಳುಗುಪ್ಪೆ ಕುಟುಂಬದ ಮಹಾಮನೆಯಲ್ಲಿ ರಾಷ್ಟ್ರನಾಯಕ ನಿಜಲಿಂಗಪ್ಪ. ಮಾಜಿ ಉಪರಾಷ್ಟ್ರಪತಿ ಬೀಡಿ ಜತ್ತಿ. ಮಾಜಿ ಪ್ರಧಾನಿಗಳಾದ ಚಂದ್ರಶೇಖರ್. ಹೆಚ್. ಡಿ ದೇವೇಗೌಡ ಮಾಜಿ ಕೇಂದ್ರ ಸಚಿವ ಜಾರ್ಜ್ ಫರ್ನಾಂಡಿಸ್. ಮಾಜಿ ಮುಖ್ಯಮಂತ್ರಿಗಳಾದ ಕೆಂಗಲ್ ಹನುಮಂತಯ್ಯ. ಎಸ್ ಆರ್ ಕಂಠಿ ವೀರೇಂದ್ರ ಪಾಟೀಲ್ ಹಾಗೂ ರಾಮಕೃಷ್ಣ ಹೆಗಡೆ ಎಸ್ ಆರ್ ಬೊಮ್ಮಾಯಿ ಮತ್ತು ಬಿಎಸ್ ಯಡಿಯೂರಪ್ಪ ಸೇರಿದಂತೆ ರಾಜ್ಯದ ಬಹುತೇಕ ಮುಖ್ಯಮಂತ್ರಿಗಳು ಪ್ರಮುಖ ರಾಜಕಾರಣಿಗಳು ಇಲ್ಲಿಗೆ ಭೇಟಿ ನೀಡಿದ್ದಾರೆ.

ಇದರೊಂದಿಗೆ ಅರಳುಗುಪ್ಪೆ ಮನೆಯಲ್ಲಿ ಬೆಳ್ಳಿಮೋಡ. ಸಾಕ್ಷಾತ್ಕಾರ. ಮುಸುಕು. ಪಾಳೇಗಾರ ಹೀಗೆ ಹತ್ತು ಹಲವು ಸಿನಿಮಾ ಚಿತ್ರೀಕರಣವಾಗಿದ್ದು ಖ್ಯಾತ ನಟರಾದ ಡಾಕ್ಟರ್ ರಾಜಕುಮಾರ್. ಪುಟ್ಟಣ್ಣ ಕಣಗಾಲ್. ಅಂಬರೀಶ್ ವಿಷ್ಣುವರ್ಧನ್ ಎಂಪಿ ಶಂಕರ್ ಜಗ್ಗೇಶ್ ಕಲ್ಪನಾ ಭಾರತಿ ಹಾಗೂ ರಜನಿಕಾಂತ್ ಸೇರಿದಂತೆ ಮುಂತಾದ ಚಿತ್ರನಟರು ಈ ಕುಟುಂಬದೊAದಿಗೆ ಸಂಪರ್ಕ ಹೊಂದಿದ್ದರು.

ಗೌರಮ್ಮ ಬಸವೇಗೌಡ ರ ದಾನ ಧರ್ಮದಲ್ಲಿ ಪ್ರಮುಖವಾಗಿ ಚಿಕ್ಕಮಗಳೂರು ನಗರದ ಎಸ್ ಟಿ ಜೆ ಕಾಲೇಜು ಕಟ್ಟಡ. ಕೈಮರ ಶಾಲೆ. ಮೌಂಟೆನ್ ಶಾಲೆ. ಅಂಧಮಕ್ಕಳ ಶಾಲೆ. ಮಹಿಳಾ ಸಮಾಜ ಹೀಗೆ ಹತ್ತು ಹಲವಾರು ಶಿಕ್ಷಣ ಸಂಸ್ಥೆಗಳಿಗೆ ಕೊಡುಗೆ ನೀಡಿದ್ದಾರೆ. ಚಿಕ್ಕಮಗಳೂರು ನಗರದ ಹಿರೇಮಗಳೂರು ಬೈಪಾಸ್ ರಸ್ತೆಯಲ್ಲಿರುವ ವೀರಶೈವ ರುದ್ರಭೂಮಿ” ಚಿರಶಾಂತಿ ಘಾಟ್” ಸ್ಥಾಪನೆಗೆ ಗೌರಮ್ಮ ರವರ ಕೊಡುಗೆ ಅಪಾರ. ವೀರಶೈವ ಲಿಂಗಾಯತ ಸಮಾಜ ಕರ್ನಾಟಕದ ಧಾರ್ಮಿಕ. ಸಾಮಾಜಿಕ ಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು ಯಾರೂ ಮರೆಯುವಂತಿಲ್ಲ ಈ ಜನಾಂಗದಲ್ಲಿ ಹುಟ್ಟಿದ ಗೌರಮ್ಮ ಎಲ್ಲ ಜನಾಂಗದವರಿಗೆ ಸದುಪಯೋಗವಂತಹ ಎಲ್ಲರೂ ಪ್ರೀತಿಸುವ. ಗೌರವಿಸುತ್ತಾ ಅವರ ಸಂಕಷ್ಟಗಳಿಗೆ ಸ್ಪಂದಿಸುವ ಕೆಲಸವನ್ನು ಮಾಡಿಕೊಂಡು. ರಾಜಕೀಯವಾಗಿ ಗೌರಮ್ಮ ರವರ ಪತಿ ಎ. ಎಂ ಬಸವೇ ಗೌಡ( ೧೯೫೭) ಶಾಸಕರಾಗಿ ಸೇವೆ ಸಲ್ಲಿಸಿದ್ದಾರೆ

ಚಿಕ್ಕಮಗಳೂರು ನಗರದಲ್ಲಿ ಇರುವ ” ಧರ್ಮಪ್ರಕಾಶ್ ಅರಳಗುಪ್ಪೆ ಮಲ್ಲೇಗೌಡ ಸಾರ್ವಜನಿಕ ಆಸ್ಪತ್ರೆಗೆ” ಕೊಡುಗೆಗೆ ಈ ಕುಟುಂಬದ ಹೆಸರು ಇಡಲಾಗಿದ್ದು. ಸಾವಿರಾರು ರೋಗಿಗಳು ಇದರಿಂದ ಸದುಪಯೋಗಪಡಿಸಿ ಕೊಳ್ಳುತ್ತಿದ್ದಾರೆ .ಶೈಕ್ಷಣಿಕವಾಗಿ ಚಿಕ್ಕಮಗಳೂರು ನಗರದ ಡಿಎಸಿಜಿ ಪಾಲಿಟಿಕ್ನಿಕ್ ಅರಳುಗುಪ್ಪೆ ಕುಟುಂಬದ ಕೊಡುಗೆಯನ್ನು ಮರೆಯುವಂತಿಲ್ಲ. ಇದರಿಂದ ನಗರ ಹಾಗೂ ಗ್ರಾಮೀಣ ಭಾಗದ ಸಾವಿರಾರು ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ರೂಪಿಸಿಕೊಂಡಿದ್ದಾರೆ.

ಎಲ್ಲಾ ಸೇವೆಯನ್ನು ಪರಿಗಣಿಸಿ ರಾಜ್ಯ ಸರ್ಕಾರವು ೨೦೦೪ರಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ಗೌರಮ್ಮ ಬಸವೇಗೌಡ ರಿಗೆ ನೀಡಲಾಗಿತ್ತು. ಇದರೊಂದಿಗೆ ವಿವಿಧ ಸಂಘ-ಸAಸ್ಥೆಗಳು “ಜಿಲ್ಲಾ ರತ್ನ “ಮಲ್ನಾಡು ರತ್ನ “ಮಹಿಳಾ ರತ್ನ” ಹೀಗೆ ಹತ್ತು ಹಲವು ಪ್ರಶಸ್ತಿಗಳು ನೀಡಿ ಗೌರವಿಸಿತ್ತು, ಗೌರಮ್ಮ ಬಸವೇಗೌಡ ಮಹಿಳಾ ಜಾಗೃತಿ ಸಂಘ. ತಾಲೂಕು ವೀರಶೈವ ಮಹಾಸಭೆ. ಜಿಲ್ಲಾ ಲೇಖಕರ ಸಂಘ. ಜಿಲ್ಲಾ ವಚನ ಸಾಹಿತ್ಯ ಪರಿಷತ್. ಶರಣ ಸಾಹಿತ್ಯ ಪರಿಷತ್ ಇನ್ನರ್ವೀಲ್ ಕ್ಲಬ್ ಜಗದ್ಗುರು ರೇಣುಕಾಚಾರ್ಯ ಟ್ರಸ್ಟ್. ಆಶಾಕಿರಣ ಅಂಧಮಕ್ಕಳ ಶಾಲೆ. ಜಿಲ್ಲಾ ಮಹಿಳಾ ಸಮಾಜ. ಕಾಫಿ ಮಂಡಳಿ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿದ್ದರು. ಹೀಗೆ ನಡೆ-ನುಡಿಗಳಿಂದ ಆದರ್ಶಪ್ರಾಯರಾಗಿದ್ದು ಗೌರಮ್ಮ ಎಲ್ಲರ ಪ್ರೀತಿ ಪಾತ್ರರಾಗಿ ಎಲ್ಲರನ್ನೂ ಗೌರವಿಸುತ್ತಾ ಲಿಂಗೈಕೆ ಆಗಿದ್ದು. ಗೌರಮ್ಮ ರವರಿಗೆ ಮಲ್ಲಿಕಾರ್ಜುನ್. ಸುದರ್ಶನ್ ಹಾಗೂ ರವಿಶಂಕರ್ ಎಂಬ ಮೂವರು ಮಕ್ಕಳಿದ್ದು ಸುದರ್ಶನ್ ಇಂಟರ್ ನ್ಯಾಷನಲ್ ಗಾಲ್ಫ್ ಕ್ಲಬ್ ರುವಾರಿ ಆಗಿದ್ದಾರೆ.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!