May 6, 2024

MALNAD TV

HEART OF COFFEE CITY

ಕಿರುಗುಂದ ಗ್ರಾಮಸಭೆ: ಗೈರಾದ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರ ಆಕ್ರೋಶ

1 min read

ಮೂಡಿಗೆರೆ: ಸಭೆಗೆ ಹಾಜರಾಗದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಒತ್ತಾಯ. ಕಾಫಿತೋಟದಲ್ಲಿ ಹಾದುಹೋಗಿರುವ ವಿದ್ಯುತ್ ಲೈನ್‍ನಿಂದ ತೊಂದರೆ, ಕೃಷಿ ಇಲಾಖೆಯಿಂದ ರೈತರಿಗೆ ಬಾರದ ಸಹಾಯಧನ, ಸಾವನ್ನಪ್ಪಿದ ಜಾನುವಾರುಗಳಿಗೆ ಪರಿಹಾರವಿಲ್ಲ. ಕಸ ವಿಲೇವಾರಿಗೆ ಜಾನುವಾರುಗಳ ದೊಡ್ಡಿಯನ್ನು ಬಳಸಲಾಗುತ್ತಿದೆ. ವಿವಿಧ ಇಲಾಖೆಯಲ್ಲಿ ಅಧಿಕಾರಿಗಳು ನೌಕರರ ಹುದ್ದೆ ಖಾಲಿ ಇರುವುದರಿಂದ ಜನರ ಕೆಲಸ ಆಗುತ್ತಿಲ್ಲ ಎಂದು ಕಿರುಗುಂದ ಗ್ರಾಮಸಭೆಯಲ್ಲಿ ಬುಧವಾರ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ವಿರುದ್ದ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ಮೆಸ್ಕಾಂ, ಕಂದಾಯ, ಕೃಷಿ, ಪಶುಪಾಲನೆ, ಆರೋಗ್ಯ, ಸಮಾಜಕಲ್ಯಾಣ, ತೋಟಗಾರಿಕೆ ಇಲಾಖೆಯ ಅಧಿಕಾರಿಗಳನ್ನು ಹೊರತುಪಡಿಸಿ ಉಳಿದಂತೆ ಇತರೆ ಇಲಾಖೆ ಅಧಿಕಾರಿಗಳು ಸಭೆಗೆ ಹಾಜರಾಗಲಿಲ್ಲ. ಗೈರಾದ ಅಧಿಕಾರಿಗಳ ವಿರುದ್ದ ಕ್ರಮಕ್ಕೆ ಗ್ರಾಮಸ್ಥರು ಒತ್ತಾಯಿಸಿದಾಗ ನಿರ್ಣಯ ಕೈಗೊಳ್ಳಲಾಯಿತು. ದೋಣಗೋಡು, ಚಕ್ಕುಡಿಗೆ, ಹಿರೇಶಿಗರ, ಕಿರುಗುಂದ, ಹೆಗ್ಗರವಳ್ಳಿ, ಬೆಟ್ಟದಮನೆ ಗ್ರಾಮದ ಕಾಫಿತೋಟದಲ್ಲಿ ಕೈಗೆಟುಕುವ ಎತ್ತರದಲ್ಲಿ ವಿದ್ಯುತ್‍ತಂತಿ ಹಾದುಹೋಗಿದೆ. ಕಾಳುಮೆಣಸು ಕಟಾವಿಗೆಏಣಿ ಸ್ಥಳಾಂತರಿಸುವಾಗ ಅವಘಡ ಸಂಭವಿಸುತ್ತದೆ. ಕಾಫಿ ತೋಟದೊಳಗಿನ ವಿದ್ಯುತ್ ಲೈನ್ ಸ್ಥಳಾಂತರಿಸಬೇಕು. ಗ್ರಾಮೀಣ ಪ್ರದೇಶದಲ್ಲಿ ದಿನದ 12 ಗಂಟೆ ವಿದ್ಯುತ್ ಕೈಕೊಡುತ್ತದೆ. ಅದನ್ನು ಸರಿಪಡಿಸಿ ಎಂದು ಗ್ರಾಮಸ್ಥರು ಒತ್ತಾಯಿಸಿದರು. ಗೋಣಿಬೀಡು ಹೋಬಳಿಯಲ್ಲಿ 28 ಲೈನ್‍ಮೆನ್ ಹುದ್ದೆಗಳಿವೆ. 11ಮಂದಿ ಮಾತ್ರ ಇದ್ದಾರೆ.17 ಹುದ್ದೆ ಖಾಲಿ ಇದೆ. ಅದರಿಂದ ಸಮಸ್ಯೆಯಾಗಿದೆಯೆಂದು ಮೆಸ್ಕಾಂ ಕಿರಿಯ ಇಂಜಿನಿಯರ್ ರವಿಕುಮಾರ್ ಸಭೆಗೆ ತಿಳಿಸಿದಾಗ ಹುದ್ದೆ ಭರ್ತಿಗೆ ನಿರ್ಣಯ ಕೈಗೊಳ್ಳಲಾಯಿತು.

ಗೋಹತ್ಯೆ ನಿಷೇಧಜಾರಿಯಾದಾಗ ಸಾವನ್ನಪ್ಪಿದ ಜಾನುವಾರುಗಳಿಗೆ ಪರಿಹಾರ ವಿರತರಿಸುವ ಬಗ್ಗೆ ಸಕಾರ ಹೇಳಿತ್ತಾದರೂ ಸಾವನ್ನಪ್ಪಿದ ಜಾನುವಾರುಗಳಿಗೆ ಪರಿಹಾರ ನೀಡಿಲ್ಲ ಎಂದು ಚಕ್ಕುಡಿಗೆ ಗ್ರಾಮಸ್ಥ ಪೂರ್ಣೇಶ್ ತಿಳಿಸಿದಾಗ ಸಾವನ್ನಪ್ಪಿದ ಕುರಿಗಳಿಗೆ 5 ಸಾವಿರ ಪರಿಹಾರವಿದೆ. ಜಾನುವಾರುಗಳಿಗೆ ಇಲ್ಲ. ತಾಲೂಕಿನ ಪಶುಪಾಲನೆ ಇಲಾಖೆಯಲ್ಲಿ 75 ಹುದ್ದೆಗಳಿದೆ. 28ಮಂದಿ ಮಾತ್ರಇದ್ದಾರೆ. 47 ಹುದ್ದೆ ಖಾಲಿ ಇದೆ ಎಂದು ಪಶುವೈದ್ಯ ಡಾ.ಮನು ಸಭೆಗೆ ತಿಳಿಸಿದಾಗ ಗ್ರಾಮಸ್ಥರಿಂದ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತವಾಯಿತು. ರೈತರ ಜಮೀನಿನಲ್ಲಿ ನಡೆಸುವ ಕಾಮಗಾರಿಗೆ ಮತ್ತು ಪಂಪ್‍ಸೆಟ್ ಪೈಪ್‍ಗಳಿಗೆ ಕೃಷಿ ಇಲಾಖೆಯಿಂದ ಸಹಾಯಧನ ನೀಡುತ್ತಿಲ್ಲ ಕೂಡಲೇ ನೀಡಬೇಕು ಎಂದು ಕೆ.ಆರ್.ಲೋಕೇಶ್ ಒತ್ತಾಯಿಸಿದರು.
ಕಿರುಗುಂದ ಗ್ರಾಮದಲ್ಲಿರುವ ಜಾನುವಾರು ದೊಡ್ಡಿಯಲ್ಲಿ ಕಸ ವಿಲೇ ಮಾಡಲಾಗುತ್ತಿದೆ. ಕೂಡಲೇ ಕಸ ತೆರೆವುಗೊಳಸಿ ಜಾನುವಾರುಗಳಿಗೆ ಬಿಟ್ಟುಕೊಡಿ ಎಂದು ಗ್ರಾ.ಪಂ.ಮಾಜಿ ಅಧ್ಯಕ್ಷ ಯು.ಹೆಚ್.ರಾಜಶೇಖರ್ ಒತ್ತಾಯಿಸಿದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!