May 7, 2024

MALNAD TV

HEART OF COFFEE CITY

ಸಂಕಷ್ಟದಲ್ಲಿ ಸ್ವಾಧಾರ ಕೇಂದ್ರ, ಸರ್ಕಾರದಿಂದ ಬಿಡುಗಡೆಯಾಗಿಲ್ಲ ಹಣ_ಮೋಹಿನಿ ಸಿದ್ದೇಗೌಡ

1 min read

ಚಿಕ್ಕಮಗಳೂರು: ಸರ್ಕಾರದಿಂದ ಸಕಾಲದಲ್ಲಿ ಅನುದಾನ ಬಿಡುಗಡೆಯಾಗದ ಹಿನ್ನಲೆಯಲ್ಲಿ ಕಸ್ತೂರಿ ಬಾ ಸದನ ಸಂಸ್ಥೆ ನಡೆಸುತ್ತಿರುವ ನಗರದ ಸ್ವಾಧಾರ ಕೇಂದ್ರದ ನಿರ್ವಹಣೆ ಕಷ್ಟಸಾಧ್ಯವಾಗುತ್ತಿದ್ದು ದಾನಿಗಳಿಂದ ಆರ್ಥಿಕ ನೆರವು ಕೊರುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಕಸ್ತೂರಿ ಬಾ ಸದನದ ಗೌರವಾಧ್ಯಕ್ಷೆ ಮೋಹಿನಿ ಸಿದ್ದೇಗೌಡ ಅಸಮಾಧಾನ ವ್ಯಕ್ತಪಡಿಸಿದರು.ನಗರದ ಪ್ರೆಸ್‌ಕ್ಲಬ್‌ನಲ್ಲಿ  ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಸ್ವಾಧಾರ ಕೇಂದ್ರ ಸರ್ಕಾರದ ಯೋಜನೆಯಾಗಿದ್ದು, ನೊಂದ ಮಹಿಳೆಯರು, ದೌರ್ಜನ್ಯಕ್ಕೊಳಗಾದ ಯುವತಿ, ಬಾಲಕಿಯರಿಗೆ ಆಶ್ರಯ ನೀಡುವ ಸಂಸ್ಥೆಯಾಗಿದೆ. ಈ ಸಂಸ್ಥೆಯ ನಿರ್ವಹಣೆಗೆ ಕೇಂದ್ರ ಸರ್ಕಾರದಿಂದ ಇದುವರೆಗೆ ೨೨ ಲಕ್ಷ ರೂ. ಅನುದಾನ ಬಿಡುಗಡೆಯಾಗಬೇಕಿದ್ದು, ಇದುವರೆಗೂ ಅನುದಾನ ಬಿಡುಗಡೆಯಾಗಿಲ್ಲ. ಅನುದಾನವಿಲ್ಲದೇ ಸ್ವಾಧಾರ ಕೇಂದ್ರದ ನಿರ್ವಹಣೆ, ಸಿಬ್ಬಂದಿ ವೇತನ ಪಾವತಿ ಮಾಡಲು ಸಂಕಷ್ಟ ಎದುರಾಗಿದೆ ಎಂದು ಅಳಲು ತೋಡಿಕೊಂಡರು.

ಅನುದಾನ ಬಿಡುಗಡೆಗೆ ಕಳೆದೊಂದು ವರ್ಷದಿಂದ ಜಿಲ್ಲಾಧಿಕಾರಿ ಸೇರಿದಂತೆ ಸಂಬoಧಿಸಿದ ಇಲಾಖಾಧಿಕಾರಿಗಳ ಮೂಲಕ ಕೇಂದ್ರ ಸರ್ಕಾರಕ್ಕೆ ಅನೇಕ ಬಾರಿ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ. ಕ್ಷೇತ್ರದ ಸಂಸದೆ ಹಾಗೂ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರಿಗೂ ಹಲವು ಬಾರಿ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ. ರಾಜ್ಯದ ಯಾವ ಸ್ವಾಧಾರ ಕೇಂದ್ರಕ್ಕೂ ಅನುದಾನ ಬಿಡುಗಡೆಯಾಗಿಲ್ಲ. ಅನುದಾನದ ಕೊರತೆಯಿಂದಾಗಿ ಸ್ವಾಧಾರ ಕೇಂದ್ರದಲ್ಲಿರುವ ಸಂತ್ರಸ್ಥರ ಸೌಲಭ್ಯ ಒದಗಿಸಲು ಸಾಧ್ಯವಾಗುತ್ತಿಲ್ಲ, ಕೇಂದ್ರದ ಸಿಬ್ಬಂದಿಗೆ ಕಳೆದ ೮ ತಿಂಗಳುಗಳಿoದ ವೇತನ ನೀಡಲು ಹರಸಾಹಸ ಪಡುವಂತಾಗಿದೆ ಎಂದ ಅವರು, ಅನುದಾನದ ಬಿಡುಗಡೆ ವಿಳಂಬದ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ದಾನಿಗಳಿಂದ ಆರ್ಥಿಕ ನೆರವು ಯಾಚಿಸುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಇದೇ ವೇಳೆ ಬೇಸರ ವ್ಯಕ್ತಪಡಿಸಿದರು.

ಸ್ವಾಧಾರ ಕೇಂದ್ರಕ್ಕೆ ಇದುವರೆಗೆ ೧೮ ಕೌಟುಂಬಿಕ ಸಮಸ್ಯೆಗಳ ಪ್ರಕರಣಗಳು, ೩ ಪ್ರೇಮ ಪ್ರಕರಣ, ೫ ನಾಪತ್ತೆ ಪ್ರಕರಣ, ೪ ನಿರಾಶ್ರಿತರ ಪ್ರಕರಣ, ೪ ಬಾಲ್ಯ ವಿವಾಹ, ಮಕ್ಕಳ ಪಾಲನೆ ಪೋಷಣೆಗೆ ಸಂಬoಧಿಸಿದ ೧೯ ಪ್ರಕರಣ, ೩ ಪೊಕ್ಸೊ, ೨ ಲೈಂಗಿನ ದೌರ್ಜನ್ಯ, ೧ ವಿವಾಹ ವಿಚ್ಚೇದನ ಪ್ರಕರಣ ಸೇರಿದಂತೆ ೫೯ ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ ೩೮ ಪ್ರಕರಣಗಳನ್ನು ನೋಂದಣಿಯಾಗಿವೆ. ೨೮ ಪ್ರಕರಣಗಳು ಬಾಕಿ ಇದ್ದು, ಸದ್ಯ ಸ್ವಾಧಾರ ಕೇಂದ್ರದಲ್ಲಿ ೧೪ ಮಹಿಳೆಯರು, ೧೪ ಮಕ್ಕಳು ಆಶ್ರಯ ಪಡೆದಿದ್ದಾರೆ ಎಂದರು.

 

ಕಸ್ತೂರಿ ಬಾ ಸದನದಿಂದಲೇ ನಿರ್ವಹಣೆ ಮಾಡಲಾಗುತ್ತಿರುವ ಕೌಟುಂಬಿಕ ಸಲಹಾ ಕೇಂದ್ರದಲ್ಲಿ ಈ ಬಾರಿ ೭೧ ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ ೩೮ ಪ್ರಕರಣಗಳು ಇತ್ಯರ್ಥಗೊಂಡಿವೆ. ೩೩ ಪ್ರಕರಣಗಳು ಬಾಕಿ ಇವೆ ಎಂದ ಅವರು, ಮೊಬೈಲ್‌ನಿಂದಾಗಿ ಇತ್ತೀಚಿಗೆ ಕೌಟುಂಬಿಕ ಸಮಸ್ಯೆಗಳು ಹೆಚ್ಚಾಗುತ್ತಿದ್ದು, ಪೋಷಕರ ತಮ್ಮ ಮಕ್ಕಳ ಮೇಲೆ ಸರಿಯಾದ ನಿಗ ವಹಿಸದಿರುವುದರಿಂದ ಹೆಣ್ಣು ಮಕ್ಕಳು ಅಪ್ರಾಪ್ತ ವಯಸ್ಸಿನಲ್ಲೇ ಪ್ರೇಮ ಪ್ರಕರಣಗಳಿಗೆ ಸಿಲುಕುತ್ತಿದ್ದಾರೆ. ಬಾಲ್ಯ ವಿವಾಹದ ಬಗ್ಗೆ ಎಷ್ಟೇ ಜಾಗೃತಿ ಮೂಡಿಸಿದರೂ ಹೆತ್ತವರೇ ತಮ್ಮ ಮಕ್ಕಳ ಬಾಲ್ಯ ವಿವಾಹಕ್ಕೆ ಮುಂದಾಗಿದ್ದಾರೆ ಎಂದ ಅವರು, ಸದನದಲ್ಲಿ ದಾಖಲಾಗುವ ಪ್ರಕರಣಗಳ ಪೈಕಿ ಬಹುತೇಕ ಪ್ರಕರಣಗಳು ತಳ ಸಮುದಾಯಕ್ಕೆ ಸೇರಿದವರ ಪ್ರಕರಣಗಳಾಗಿದ್ದು, ಮೇಲ್ವರ್ಗದ ಸಮುದಾಯಗಳ ಪ್ರಕರಣಗಳು ದಾಖಲಾಗುತ್ತಿಲ್ಲ ಎಂದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!