May 7, 2024

MALNAD TV

HEART OF COFFEE CITY

ಬಿಹಾರದಲ್ಲಿ ನಿತೀಶ್ ಮೈತ್ರಿ ಬದಲಿಸಿದ್ದು ಎಷ್ಟು ಬಾರಿ : ಯಾರ ಜೊತೆ ಹೇಗಿತ್ತು ಹೊಂದಾಣಿಕೆ

1 min read

 

ಬಿಹಾರದ ಅನುಭವಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಮೈತ್ರಿಗಳನ್ನು ಮಾಡಿಕೊಳ್ಳುವುದರಲ್ಲಿ, ಮುರಿದುಕೊಂಡು ಹೊಸ ಮೈತ್ರಿ ಮಾಡಿಕೊಳ್ಳುವುದರಲ್ಲಿ ಸಿದ್ಧಹಸ್ತರು. ಸುಮಾರು ಮೂರು ದಶಕಗಳಿಂದ ಬಿಹಾರದ ರಾಜಕೀಯ ಪಡಸಾಲೆಯಲ್ಲಿ ಅನೇಕ ಸಲ ರಾಜಕೀಯ ಚದುರಂಗ ಮತ್ತು ಹಾವು ಏಣಿಯ ಆಟ ಆಡಿದ್ದಾರೆ. ಮೈತ್ರಿ ಕುರಿತಂತೆ ಇವರನ್ನು ರಾಷ್ಟ್ರ ರಾಜಕಾರಣದ ಜಂಪಿಂಗ್ ಸ್ಟಾರ್ ಎಂದು ಹೇಳಿದರು ಕೂಡ ತಪ್ಪಿಲ್ಲ.

ಈಗ ನಿತೀಶ್ ಕುಮಾರ್ ಮತ್ತೆ ಎನ್ ಡಿ ಎ ತೆಕ್ಕೆಗೆ ಬಂದು ಹೊಸದಾಗಿ ಮತ್ತೆ ಮುಖ್ಯಮಂತ್ರಿ ಆಗಿ ಪ್ರಮಾಣ ಸ್ವೀಕರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಇದುವರೆಗೂ ನಿತೀಶ್ ಕುಮಾರ್ ಯಾವಾಗ, ಯಾವ ಕಾರಣಕ್ಕೆ ಮೈತ್ರಿ ಬದಲಾಯಿಸಿದರು? ಮುಖ್ಯಮಂತ್ರಿ ಆಗಿ ಅಧಿಕಾರ ಹಿಡಿದರು? ಎಂಬ ವಿಶ್ಲೇಷಣೆ ಇಲ್ಲಿದೆ.

*1996: ಸಮತಾ ಪಾರ್ಟಿ ಮತ್ತು ಬಿಜೆಪಿ ನಡುವೆ ಹೊಂದಾಣಿಕೆ:*
1996 ರ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಅನ್ನು ಸೋಲಿಸಲು ಸಮತಾ ಪಕ್ಷದ ಅಂದಿನ ನಾಯಕ ನಿತೀಶ್ ಕುಮಾರ್ ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತು ಇತರ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡರು. ಈ ನಡೆ ಅವರು ಮೊದಲ ಬಾರಿಗೆ ಮುಖ್ಯಮಂತ್ರಿಯಾಗಲು ನೆರವಾಯಿತು. ಈ ಕ್ರಮ ಅವರ ಆರಂಭಿಕ ರಾಜಕೀಯ ತಂತ್ರ ಮತ್ತು ಹೊಂದಾಣಿಕೆ ರಾಜಕಾರಣಕ್ಕೆ ಮುನ್ನುಡಿ ಬರೆಯಿತು.

*2013: ಎನ್ ಡಿ ಎ ತೆಕ್ಕೆಯಿಂದ ಮಹಾ ಘಟಬಂಧನ್ ಮಡಿಲಿಗೆ*
2013 ರ ಹೊತ್ತಿಗೆ ನಿತೀಶ್ ಕುಮಾರ್ ಮತ್ತು ಎನ್‌ಡಿಎ ನಡುವಿನ ಸಂಬಂಧ ಹಳಸಿತ್ತು. ಅಲ್ಲದೆ ಮೋದಿ ಅವರ ಹೆಸರನ್ನು ಪ್ರಧಾನಿ ಹುದ್ದೆಗೆ ಸೂಚಿಸಿದ್ದಕ್ಕೆ ನಿತೀಶ್ ಅಸಮಾಧಾನಗೊಂಡಿದ್ದರು. ನಾಯಕತ್ವ ಭಿನ್ನಾಭಿಪ್ರಾಯಗಳಿಂದ 2013 ರಲ್ಲಿ ಎನ್ ಡಿಎ ಗೆ ಗುಡ್ ಬೈ ಹೇಳಿ ಹೊರಬಂದ ನಿತೀಶ್ ಕುಮಾರ್ RJD, ಕಾಂಗ್ರೆಸ್ ಮತ್ತು ಇತರ ಪಕ್ಷಗಳೊಂದಿಗೆ “ಮಹಾ ಘಟಬಂಧನ್” ರಚಿಸಿದರು. ಈ ನಡೆ ಅವರನ್ನು ಮತ್ತೆ ಮುಖ್ಯಮಂತ್ರಿಯನ್ನಾಗಿ ಮಾಡಿ, ಬಿಜೆಪಿ ನೇತೃತ್ವದ ಎನ್‌ಡಿಎಯನ್ನು ಸೋಲಿಸಿತು. ಇದು ತಕ್ಷಣದ ರಾಜಕೀಯ ಲಾಭಕ್ಕೆ ನಿತೀಶ್ ಕುಮಾರ್ ಯಾವುದೇ ರೀತಿಯ ರಾಜಕೀಯ ರಣತಂತ್ರ ರೂಪಿಸುತ್ತಾರೆ ಎಂಬುದನ್ನು ಬಹಿರಂಗಪಡಿಸಿತ್ತು.

*2017: ಮತ್ತೆ ಮೈತ್ರಿ ಬದಲಾವಣೆ: ಮಹಾ ಘಟ ಬಂಧನ್‌ನಿಂದ ಮರಳಿ NDA ಗೆ*
ಮಹಾ ಘಟಬಂಧನ್‌ನಲ್ಲಿ ನಿತೀಶ್ ಕುಮಾರ್ ಅವರ ಅಧಿಕಾರಾವಧಿ ಸುಗಮವಾಗಿರಲಿಲ್ಲ. ಅವರು ಭ್ರಷ್ಟಾಚಾರದ ಆರೋಪಗಳು ಮತ್ತು ಮೈತ್ರಿಯೊಳಗೆ ಬೆಳೆಯುತ್ತಿರುವ ಅಸಮಾಧಾನದ ಸಮಸ್ಯೆಗಳನ್ನು ಎದುರಿಸಬೇಕಾಯಿತು. ಇದರಿಂದ ಬೇಸತ್ತ ಅವರು 2017 ರಲ್ಲಿ ಮತ್ತೊಮ್ಮೆ ಮೈತ್ರಿ ಬದಲಾಯಿಸಿದರು. ಎನ್ ಡಿ ಎ ಸೇರಿಕೊಂಡು ಮುಖ್ಯಮಂತ್ರಿಯಾದರು.

*2020 : ಎನ್ ಡಿಎ ಮೈತ್ರಿ ಯೊಂದಿಗೆ ಮತ್ತೆ ಮುಖ್ಯಮಂತ್ರಿ*
2020ರ ನವೆಂಬರ್ ತಿಂಗಳಲ್ಲಿ ನಡೆದ ಬಿಹಾರ ವಿಧಾನಸಭೆ ಚುನಾವಣೆಗಳಲ್ಲಿ ಜೆಡಿಯು ಮತ್ತು ಬಿಜೆಪಿ ಮೈತ್ರಿಕೂಟ ಗೆಲುವು ಸಾಧಿಸಿತ್ತು. ನವಂಬರ್ 15ರಂದು ನಿತೀಶ್ ಕುಮಾರ್ 7ನೇ ಬಾರಿ ಬಿಹಾರದ ಮುಖ್ಯಮಂತ್ರಿ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದರು.

*2022: ಮತ್ತೆ ಎನ್ ಡಿ ಎ ಗೆ ಗುಡ್ ಬೈ ಮಹಾ ಘಟಬಂಧನಕ್ಕೆ ವಾಪಸ್ :*
ಎನ್‌ಡಿಎ ಜೊತೆಗೆ ಮೈತ್ರಿ ಮಾಡಿಕೊಂಡು ಅಧಿಕಾರದ ಚುಕ್ಕಾಣಿ ಹಿಡಿದಿದ್ದರು ಕೂಡ ನಿತೀಶ್ ಕುಮಾರ್ ಮತ್ತು ಬಿಜೆಪಿ ನಡುವಿನ ಸಂಬಂಧ ಆಗಸ್ಟ್ ಹೊತ್ತಿಗೆ ಹಳಸತೊಡಗಿತ್ತು. 2022ರ ಜೂನ್ 16 ರಂದು, ಬಿಜೆಪಿ ಜೆಡಿಎಸ್ ಪಕ್ಷವನ್ನು ಒಡೆಯಲು ಪ್ರಯತ್ನಿಸುತ್ತದೆ ಎಂದು ಗುರುತರ ಆಪಾದನೆ ಮಾಡಿದ ನಿತೀಶ್ ಕುಮಾರ್, ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಜೂನ್ 20ರ ಹೊತ್ತಿಗೆ ಆರ್ ಜೆಡಿ ಮತ್ತು ಕಾಂಗ್ರೆಸ್ ಜೊತೆಗೆ ಮಹಾ ಘಟಬಂಧನದ ಮೈತ್ರಿ ಮಾಡಿಕೊಂಡ ನಿತೀಶ್ ಮತ್ತೆ ಬಿಹಾರದ ಎಂಟನೇ ಮುಖ್ಯಮಂತ್ರಿ ಆಗಿ ಅಧಿಕಾರ ಮುಂದುವರೆಸಿದರು.

*20234: ಮಹಾ ಘಟಬಂಧನದಲ್ಲಿ ಅಸಮಾಧಾನದ ಹೊಗೆ: ಮತ್ತೆ ಎನ್ ಡಿ ಎ ಗೆ ಮರಳಿದ ನಿತೀಶ್*
ಪದೇಪದೇ ಅಧಿಕಾರಕ್ಕಾಗಿ ಮೈತ್ರಿ ಬದಲಾಯಿಸಿದರು ಕೂಡ ನಿತೀಶ್ ಕುಮಾರ್ ಗೆ ಸಮಾಧಾನವೇ ಇಲ್ಲ. 2023ರ ಆಗಸ್ಟ್ ಹೊತ್ತಿಗೆ ಮತ್ತೆ ಮಹಾಘಟಬಂಧನ ಅಂದರೆ ಆರ್‌ಜೆಡಿ ಮತ್ತು ಕಾಂಗ್ರೆಸ್ ಜೊತೆಗೆ ನಿತೀಶ್ ಕುಮಾರ್ ವಿರಸ ಶುರುವಾಗಿತ್ತು. NDAಗೆ ಹಿಂತಿರುಗಿ BJP ಬೆಂಬಲ ಪಡೆಯುವ ಸಾಧ್ಯತೆಯ ಬಗ್ಗೆ ಊಹಾಪೋಹಗಳು ಶುರು ಆಗಿದ್ದವು.

ಮಹಾ ಘಟ ಬಂಧನ್‌ನೊಂದಿಗೆ ಮತ್ತೆ ಸಂಬಂಧ ಮುರಿದುಕೊಂಡು ಎನ್‌ಡಿಎ ಗೆ ಮರಳುವ ಮೂಲಕ ನಿತೀಶ್ ಕುಮಾರ್ ಮತ್ತೊಮ್ಮೆ ರಾಜಕೀಯದ ಚದುರಂಗದ ದಾಳ ಉರುಳಿಸಿದ್ದಾರೆ. ಈ ದಿನ ಬಿಹಾರದ ಮುಖ್ಯಮಂತ್ರಿ ಆಗಿ ಒಂಬತ್ತನೇ ಬಾರಿಗೆ ಅವರು ಅಧಿಕಾರ ಸ್ವೀಕಾರ ಮಾಡಿದ್ದಾರೆ

2024ರ ಲೋಕಸಭಾ ಚುನಾವಣೆ ಮೇಲು ಕೂಡ ನಿತೀಶ್ ಕುಮಾರ್ ಕಣ್ಣಿಟ್ಟು ತಮ್ಮ ದಾಳ ಉರುಳಿಸಿದ್ದಾರೆ. ಅಲ್ಲದೆ ತಮ್ಮ ಮುಖ್ಯಮಂತ್ರಿ ಸ್ಥಾನ ಮತ್ತೆ ಮುಂದುವರಿಸುವಲ್ಲಿ ಸಫಲರಾಗಿದ್ದಾರೆ.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!