May 19, 2024

MALNAD TV

HEART OF COFFEE CITY

ದತ್ತಪೀಠ ವಿಚಾರವನ್ನು ಸರ್ಕಾರ ಸೂಕ್ತ ಸಮಯದಲ್ಲಿ ಸೂಕ್ತ ತೀರ್ಮಾನ ಕೈಗೊಳ್ಳಲಿದೆ – ಕೋಟಾ ಶ್ರೀನಿವಾಸ್ ಪೂಜಾರಿ

1 min read

ಚಿಕ್ಕಮಗಳೂರು : ದತ್ತಪೀಠದ ವಿಚಾರವಾಗಿ ಹೈಕೋರ್ಟ್ ನೀಡಿರುವ ತೀರ್ಪಿನ ಸಂಬಂಧ ಸಾಮಾಜಿಕ ವ್ಯವಸ್ಥೆ ಹಾಗೂ ಜನಮಾನಸದಲ್ಲಿರುವ ಭಾವನೆಗಳನ್ನ ಗಮನದಲ್ಲಿಟ್ಟುಕೊಂಡು ಕೋರ್ಟ್ ತೀರ್ಪಿನಂತೆ ಸರ್ಕಾರ ಸೂಕ್ತ ಸಮಯದಲ್ಲಿ ಸೂಕ್ತ ತೀರ್ಮಾನ ಕೈಗೊಳ್ಳಲಿದೆ ಎಂದು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಹೇಳಿದ್ದಾರೆ.

ಚಿಕ್ಕಮಗಳೂರು ನಗರದ ಪ್ರವಾಸಿ ಮಂದಿರದಲ್ಲಿ ಮಾತನಾಡಿದ ಅವರು, ಚುನಾವಣೆ ಸಂಬಂಧ ಮುಖ್ಯಮಂತ್ರಿ ಬೊಮ್ಮಾಯಿ ಅವರು ಆಡಳಿತಾತ್ಮಕ ವ್ಯವಸ್ಥೆಯಲ್ಲಿ ನಮಗೆ ಮಾರ್ಗದರ್ಶನ ನೀಡುತ್ತಾರೆ. ಹಿರಿಯರು ಹಾಗೂ ಮಾಜಿ ಸಿಎಂ ಬಿ.ಎಸ್.ವೈ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಸೇರಿದಂತೆ ಇಡೀ ಭಾರತೀಯ ಜನತಾ ಪಕ್ಷದ ತಂಡ ಒಟ್ಟಾಗಿ, ಒಂದಾಗಿ ಆಡಳಿತಾತ್ಮಕ ವಿಚಾರ ಹಾಗೂ ಸಂಘಟನಾತ್ಮಕ ವಿಚಾರ ಒಟ್ಟುಗೂಡಿಸಿಕೊಂಡು ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯವೈಖರಿಯನ್ನೂ ಗಮನದಲ್ಲಿಟ್ಟುಕೊಂಡು ಎರಡು ಚುನಾವಣೆಯನ್ನೂ ಎದುರಿಸಿ ಗೆಲ್ಲುತ್ತೇವೆ ಎಂದರು. ದತ್ತಪೀಠದ ವಿಚಾರ ಕೋರ್ಟ್ ತೀರ್ಪಿನ ಸಂಬಂಧ ಪ್ರತಿಕ್ರಿಯೆ ನೀಡಿದ ಅವರು, ಹೈಕೋರ್ಟ್ ಸರ್ಕಾರ ತೀರ್ಮಾನ ತೆಗೆದುಕೊಳ್ಳಲಿ ಎಂದು ಹೇಳಿದೆ. ಸರ್ಕಾರ ಸರಿಯಾದ ಸಮಯದಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳುವ ಕೆಲಸ ಮಾಡುತ್ತೆ ಎಂದರು. ಹೈಕೋರ್ಟ್ ಸರ್ಕಾರದ ಅಂಗಳಕ್ಕೆ ವಿಷಯವನ್ನ ಬಿಟ್ಟಿರೋದ್ರಿಂದ ಎಲ್ಲವನ್ನೂ ಗಮನದಲ್ಲಿಟ್ಟುಕೊಂಡು ಸರ್ವಸಮ್ಮತವಾದ ಮತ್ತು ಸರ್ವರಿಗೂ ನ್ಯಾಯ ಕೊಡುವ ರೀತಿಯಲ್ಲಿ ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದರು. ಸರ್ವೋಚ್ಛ ನ್ಯಾಯಾಲಯ ಕೊಟ್ಟಿರುವ ಮಾರ್ಗಸೂಚಿಯನ್ನ ನಾವು ಅನುಸರಿಸಬೇಕು. ದತ್ತಪೀಠಕ್ಕೆ ಸಂಬಂಧಪಟ್ಟಂತೆ ಕೆಲ ವಿಚಾರಗಳು ಸಿ.ಟಿ.ರವಿ ಸೇರಿದಂತೆ ಮಾಡಿರುವ ಹೋರಾಟಗಳು ಸಾಮಾಜಿಕ ವ್ಯವಸ್ಥೆಗಳು ಮತ್ತು ಜನಮಾನಸದಲ್ಲಿರುವಂತಹಾ ಭಾವನೆಗಳನ್ನ ಗಮನಲ್ಲಿಟ್ಟುಕೊಂಡು ಕೆಲಸವನ್ನ ಮಾಡುತ್ತೇವೆ ಎಂದಿದ್ದಾರೆ.

ಇದೇ ವೇಳೆ, ದತ್ತಪೀಠದ ಬಗ್ಗೆ ಪ್ರತಿಕ್ರಿಯೆ ನೀಡಿದ ಗೃಹ ಸಚಿವ ಆರಗ ಜ್ಞಾನೇಂದ್ರ ತೀರ್ಪಿನ ಕಾಪಿಯನ್ನ ನಾನು ಓದಿಲ್ಲ. ಆ ತೀರ್ಪೀನ ಆಶಯದಂತೆ ನಮ್ಮ ಸರ್ಕಾರ ಮುಂದಿನ ಕ್ರಮ ಕೈಗೊಳ್ಳುತ್ತೆ. ಜಿಲ್ಲಾಡಳಿತ ಕೂಡ ಸಮರ್ಪಕವಾಗಿ ಅದರ ನಿರ್ವಹಣೆ ಮಾಡುತ್ತೆ ಎಂದರು. ಆ ಕಾಪಿ ಬಂದ ಕೂಡಲೇ ಪರಿಶೀಲನೆ ಮಾಡುತ್ತೇನೆ. ಹಿಂದೂ ಅರ್ಚಕರ ನೇಮಕ ಕುರಿತಂತೆ ಕಾನೂನು ತಜ್ಞರ ಜೊತೆ ಸಲಹೆ ಪಡೆದು ಸರ್ಕಾರ ಸೂಕ್ತ ಕ್ರಮಕೈಗೊಳ್ಳುತ್ತೆ ಎಂದರು. ಜೆಡಿಎಸ್ ನವರು ಈಗ ತೋಟದ ಮನೆಗೆ ಕರೆದೊಯ್ದು ಸಂಘಟನೆ ಮಾಡಬೇಕು. ಅವರು ಏನೇ ಮಾಡಿದರೂ ಬಿಜೆಪಿ ನಿತ್ಯ-ನೂತನ. ನಮ್ಮ ಸಂಘಟನೆ, ಬೂತ್ ಕಮಿಟಿಗಳು ನಡೆಯುತ್ತಿರುತ್ತೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಜೆಡಿಎಸ್ ವಿರುದ್ಧ ವ್ಯಂಗ್ಯವಾಡಿದ್ದಾರೆ. ಜೆಡಿಎಸ್ ನಡೆ ನಮಗೆ ಆಶ್ಚರ್ಯ, ಕತೂಹಲ ಅನ್ನಿಸಲ್ಲ. ಅವರು ಈಗ ತೋಟದ ಮನೆಯಲ್ಲಿ ಸಂಘಟನೆ ಮಾಡಬೇಕು. ನಮ್ಮದು ರಾಷ್ಟ್ರೀಯ ಪಕ್ಷ. ತತ್ವ-ಸಿದ್ದಾಂತ ಇಟ್ಕೊಂಡು ಪಕ್ಷ ಬೆಳೆಸಿಕೊಂಡು ಬಂದಿದ್ದೇವೆ. ಅದು ನಿತ್ಯ ನರಂತರ ನಡೆಯುತಿರುತ್ತೆ ಎಂದರು. ಜೆಡಿಎಸ್ ಮುಂದಿನ ವಿಧಾನಸಭಾ ಚುನಾವಣೆಗೆ 120 ಮಿಷನ್ ಬಗ್ಗೆ ನಸುನಕ್ಕ ಆರಗ ಜ್ಞಾನೇಂದ್ರ, ಅವರು ಒಂದು ರಾಜಕೀಯ ಪಕ್ಷವಾಗಿ ಅವರ ಗುರಿ ಇಟ್ಟುಕೊಳ್ಳಬೇಕು. ಅದು ಅವರ ಗುರಿ ಎಂದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!