May 19, 2024

MALNAD TV

HEART OF COFFEE CITY

ವಿದ್ಯಾರ್ಥಿನಿಯರು ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ನೀಡಬೇಕು – ನಯೋಮಿ

1 min read

ಚಿಕ್ಕಮಗಳೂರು-ವಿದ್ಯಾರ್ಥಿನಿಯರು ಉನ್ನತ ವ್ಯಾಸಂಗ ಮಾಡುವುದರ ಜತೆಗೆ ಆರೋಗ್ಯದ ಬಗ್ಗೆ ಹೆಚ್ಚು ಗಮನ ನೀಡಿದಾಗ ನಮ್ಮ ಗುರಿ ಮುಟ್ಟಲು ಸಾದ್ಯವಾಗುತ್ತದೆ ಎಂದು ಕು. ನಯೋಮಿ ತಿಳಿಸಿದರು.ಮಲ್ಲಂದೂರಿನ ಬಾಗಮನೆ ಪಾರ್ವತಮ್ಮಬಸವೇಗೌಡ ಸರ್ಕಾರಿ ಪ್ರೌಢಶಾಲೆಯಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿರುವ ಕುಮಾರಿ ನಯೋಮಿ ಅವರೇ ತಯಾರಿಸಿರುವ ಸ್ಯಾನಿಟರಿ ಪ್ಯಾಡ್‌ಗಳನ್ನು ವಿದ್ಯಾರ್ಥಿನಿಯರಿಗೆ ವಿತರಿಸಿ ಮಾತನಾಡಿ ವಿದ್ಯಾರ್ಥಿನಿಯರಿಗೆ ಋತುಚಕ್ರ ಪ್ರಾರಂಭಿಸಿದ ಮೇಲೆ ಪ್ರತಿ ತಿಂಗಳು ಋತುಚಕ್ರ ಆರಂಭವಾಗುತ್ತದೆ ಪ್ರತಿ ಬಾರಿಯು ಋತುಶ್ರಾವ ಆದಾಗ ಸ್ವಚ್ಚವಾಗಿ ಇರಬೇಕು ಇಲ್ಲವಾದರೆ ಸೋಂಕು ತಗುಲುವ ಸಾದ್ಯತೆ ಹೆಚ್ಚಾಗುತ್ತದೆ, ಆದ್ದರಿಂದ ಪ್ಯಾಡ್ ಬಳಕೆ ಮಾಡಬೇಕಾಗುತ್ತದೆ, ನಾವು ಅಂಗಡಿಯಿ0ದ ಕೊಂಡು ಬಳಸುವ ಪ್ಯಾಡ್‌ಗಳಲ್ಲಿ ಪ್ಲಾಸ್ಟಿಕ್ ಬಳಕೆ ಮಾಡುವುದರಿಂದ ಆರೋಗ್ಯದ ಮೇಲೆ ಪರಣಾಮ ಬೀರುತ್ತದೆ, ಆದ್ದರಿಂದ ಬಟ್ಟೆ ಪ್ಯಾಡ್‌ಗಳನ್ನು ಬಳಸಬೇಕು, ಅದಕ್ಕಾಗಿ ನಾರಿಶಕ್ತಿ ಎಂಬ ಬಟ್ಟೆ ಪ್ಯಾಡನ್ನು ತಯಾರಿಸಿದ್ದು ಇದನ್ನು ಮರು ಬಳಕೆ ಸಹ ಮಾಡಬಹುದಾಗಿದೆ ಎಂದರು.ಮುಖ್ಯ ಶಿಕ್ಷಕ ಓಂಕಾರಪ್ಪ ಮಾತನಾಡಿ ಚಿಕ್ಕ ವಯಸ್ಸಿನಲ್ಲಿ ನಯೋಮಿ ರವರು ತಮ್ಮ ಪಾಕೆಟ್ ಮನಿಯಲ್ಲಿ ಉಳಿಸಿದ ಹಣದಲ್ಲಿ ಸೃಜನಶೀಲತೆಯಿಂದ ಹೆಣ್ಣುಮಕ್ಕಳಿಗೆ ಉಪಯೋಗ ಆಗುವಂತಹ ಯೋಜನೆಯನ್ನು ಮಾಡಿದ್ದಾರೆ ಮತ್ತು ವಿದ್ಯಾರ್ಥಿಗಳಿಗೆ ಉಚಿತವಾಗಿ ನೀಡುತ್ತಿದ್ದು, ಮುಂದೆಯು ಸಹ ಸಮಾಜಕ್ಕೆ ಉತ್ತಮ ಕೊಡುಗೆಗಳನ್ನು ಕೊಡಬಲ್ಲರು, ಮರು ಬಳಕೆ ಮಾಡುವ ಪ್ಯಾಡ್‌ಗಳನ್ನು ಬಳಸುವುದರಿಂದ ಪರಿಸರ ಮಾಲಿನ್ಯವನ್ನು ತಡೆಯಬಹುದು ಎಂದರು.ಡಾ. ರಾಜೇಶ್ ಮಾತನಾಡಿ ವಿದ್ಯಾರ್ಥಿಗಳು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದರ ಜತೆಗೆ, ಆರೋಗ್ಯದ ಬಗ್ಗೆ ಮುಕ್ತ ಮಾತುಗಳಿಂದ ತಮ್ಮ ಸಮಸ್ಯೆಗಳನ್ನು ತಾವೇ ನಿಭಾಯಿಸುವ ಸಾಮರ್ಥ್ಯವನ್ನು ಹೊಂದಬೇಕು ಹಾಗೂ ಕಲಿಕೆಯಿಂದ ವಿದ್ಯಾವಂತರಾಗುವುದರ ಜತೆಗೆ ಏನನ್ನಾದರೂ ಸಾಧಿಸಬೇಕು ಎಂದು ತಿಳಿಸಿದರು.

ದಂತ ವೈದ್ಯೆ ಡಾ. ಶೃಂಗರಾಜೇಶ್ ಮಾತನಾಡಿ ಮಾಸಿಕ ಋತು ಚಕ್ರದ ಸ್ವಚ್ಚತೆ, ಸ್ಯಾನಿಟರಿ ಪ್ಯಾಡ್ ಬಳಕೆ ಮತ್ತು ಬಳಕೆಯ ನಂತರ ವಿಲೇವಾರಿ ಮಾಡುವ ಬಗ್ಗೆ ವಿದ್ಯಾರ್ಥಿಗಳು ತಿಳಿದಿರಬೇಕು. ಮಾಸಿಕ ಋತು ಚಕ್ರದ ಸಮಯದಲ್ಲಿ ಸ್ವಚ್ಚತೆಯನ್ನು ಕಾಪಾಡಲು ಮುಖ್ಯವಾಗಿ ಸ್ಯಾನಿಟರಿ ಪ್ಯಾಡ್‌ಗಳನ್ನು ಬಳಸಬೇಕಾಗುತ್ತದೆ, ಇದಕ್ಕಾಗಿ ಹಲವಾರು ರೂಪಾಯಿಗಳನ್ನು ಖರ್ಚು ಮಾಡಬೇಕಾಗುತ್ತದೆ, ಈ ಹಿಂದೆ ಸರ್ಕಾರದಿಂದ ದೋರೆಯುತ್ತಿದ್ದ ಈ ಸೌಲಭ್ಯವು ಸಹ ಕೊರೋನಾ ಬಂದ ನಂತರದ ದಿನಗಳಿಂದ ಇದನ್ನು ನಿಲ್ಲಿಸಲಾಗಿದೆ, ಕ್ರಿಯಾತ್ಮಕವಾಗಿ ಹೊಸದಾಗಿ ಕಂಡು ಹಿಡಿದ ಮರು ಬಳಕೆ ಮಾಡುವಂತಹ ಸ್ಯಾನಿಟರಿ ಪ್ಯಾಡ್‌ಗಳನ್ನು ನಮ್ಮ ಮಗಳಾದ ನಯೋಮಿರವರು ಈ ಶಾಲೆಗೆ ಉಚಿತವಾಗಿ ನೀಡುತ್ತಿದ್ದಾರೆ, ವಿದ್ಯಾರ್ಥಿನಿಯರು ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸುವುದರ ಬಗ್ಗೆ ಹಾಗೂ ಹಲ್ಲುಗಳ ಸ್ವಚ್ಚತೆಯ ಬಗ್ಗೆ ಪ್ರತಿ ದಿನ ೨ ಬಾರಿ ಬ್ರೆಶ್ ಮಾಡಬೇಕೆಂದು ತಿಳಿಸಿದರು.

ವಿದ್ಯಾರ್ಥಿ ನಬಿಸಾ ಮಾತನಾಡಿ ಸರ್ಕಾರದಿಂದ ವಿದ್ಯಾರ್ಥಿಗಳಿಗೆ ಉಚಿತವಾಗಿ ದೊರೆಯುತ್ತಿದ್ದ ಸ್ಯಾನಿಟರಿ ಪ್ಯಾಡ್‌ಗಳನ್ನು ಕೊರೋನಾ ಬಂದ ನಂತರದ ದಿನಗಳಿಂದ ಕೊಡುವುದನ್ನು ನಿಲ್ಲಿಸಲಾಗಿದ್ದು, ಪ್ಯಾಡ್ ಬಳಕೆಗಾಗಿ ಒಂದು ವರ್ಷಕ್ಕೆ ೬೦೦ ರೂಪಾಯಿಗಳಷ್ಟು ಖರ್ಚಾಗುತ್ತಿದೆ, ಆದರೆ ನಯೋಮಿ ಅಕ್ಕ ಮರು ಬಳಕೆ ಮಾಡುವ ಸ್ಯಾನಿಟರಿ ಪ್ಯಾಡ್‌ಗಳನ್ನು ಉಚಿತವಾಗಿ ನೀಡಿದ್ದು, ಇದರಿಂದ ಖರ್ಚು ಕಡಿಮೆಯಾಗುವಂತೆ ಮಾಡಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಬಾಗಮನೆ ಕುಟುಂಬದವರಾದ ನಾಗವೇಣಿ, ನಾರಾಯಣಗೌಡ, ಕಾವ್ಯ, ಶಾಲಾ ಶಿಕ್ಷಕರಾದ ಲೋಲಿಬಾಯಿ, ಭಾಗ್ಯ, ಶುಭ, ಪಿಲೋಮಿನಾಡಿಸೋಜಾ, ನಂದಿನಿ ಮತ್ತಿತರರು ಉಪಸ್ಥಿತರಿದ್ದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!