May 6, 2024

MALNAD TV

HEART OF COFFEE CITY

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಚುನಾವಣೆ – ಅಜ್ಜಂಪುರ ಜಿ.ಸೂರಿ ಶ್ರೀನಿವಾಸ್ ಗೆಲುವು

1 min read

ಚಿಕ್ಕಮಗಳೂರು: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಭಾನುವಾರ ನಡೆದ ಚುನಾವಣೆಯಲ್ಲಿ ಅಜ್ಜಂಪುರ ಜಿ.ಸೂರಿ ಶ್ರೀನಿವಾಸ್ ಗೆಲುವು ಸಾಧಿಸಿದ್ದಾರೆ. ಪ್ರತಿಸ್ಪರ್ಧಿ ಎಂ.ಸಿ.ಶಿವಾನಂದ ಸ್ವಾಮಿ ಎದುರು  650 ಮತಗಳ ಅಂತರದಲ್ಲಿ ಗೆಲವು ಸಾಧಿಸಿದ್ದಾರೆ.

ಅಧ್ಯಕ್ಷೀಯಗಾಧಿ ಕಣದಲ್ಲಿ ಎಂ.ಸಿ.ಶಿವಾನಂದಸ್ವಾಮಿ, ಸುಂದರ್‍ಬಂಗೇರಾ, ಬಿಳಿಗಿರಿ ವಿಜಯಕುಮಾರ್, ಸೂರಿಶ್ರೀನಿವಾಸ್, ಎಚ್.ಡಿ.ರೇವಣ್ಣ ಸ್ಫರ್ಧಿಸಿದ್ದರು. ಅಜ್ಜಂಪುರ ಜಿ. ಸೂರಿ ಶ್ರೀನಿವಾಸ್ ಮತ್ತು ಎಂ.ಸಿ.ಶಿವಾನಂದ ಸ್ವಾಮಿ ನಡುವೆ ತೀವ್ರ ಪೈಪೋಟಿ ನಡೆಸಿದ್ದು, ಅಜ್ಜಂಪುರ ಜಿ.ಸೂರಿ ಶ್ರೀನಿವಾಸ್ ಗೆಲುವು ಸಾಧಿಸಿದ್ದಾರೆ. ಭಾನುವಾರ ಬೆಳಿಗ್ಗೆ 8 ಗಂಟೆಯಿಂದ ಮತದಾನ ಪ್ರಕ್ರಿಯೆ ಆರಂಭಗೊಂಡು ಸಂಜೆ 4ಗಂಟೆಗೆ ಮತದಾನ ಪ್ರಕ್ರಿಯೆ ಮುಕ್ತಾಯಗೊಂಡಿತು. 4 ಗಂಟೆಯಿಂದ ಆರಂಭವಾಗ ಮತ ಎಣಿಕೆ ಕಾರ್ಯ ರಾತ್ರಿ 7:30ರ ವರೆಗೂ ನಡೆಯಿತು. ಆಯಾ ಮತಕೇಂದ್ರಗಳಲ್ಲಿ ಮತ ಎಣಿಕೆ ಕಾರ್ಯ ಏಕಕಾಲದಲ್ಲಿ ಆರಂಭಗೊಂಡಿದ್ದು, ಅಜ್ಜಂಪುರ ಜಿ. ಸೂರಿ ಶ್ರೀನಿವಾಸ್ ಮತ್ತು ಎಂ.ಸಿ.ಶಿವಾನಂದ ಸ್ವಾಮಿ ನಡುವೆ ಕೊನೆಯ ವರೆಗೂ ಪೈಪೋಟಿ ಏರ್ಪಟ್ಟಿತ್ತು. ನರಸಿಂಹರಾಜಪುರ 60, ಬಾಳೆಹೊನ್ನೂರು 55, ಕಳಸ 18, ಯಗಟಿ 104, ಅಜ್ಜಂಪುರ 153, ಕೊಪ್ಪ 103, ಶೃಂಗೇರಿ 157, ಜಯಪುರ 66, ಬೀರೂರು 79, ಆಲ್ದೂರು 58, ಮೂಡಿಗೆರೆ 202 ಚಿಕ್ಕಮಗಳೂರು 421 ಹಾಗೂ ಕಡೂರಿನಲ್ಲಿ 763 ಮತಗಳನ್ನು ಅಜ್ಜಂಪುರ ಜಿ.ಸೂರಿ ಶ್ರೀನಿವಾಸ್ ಮತ ಪಡೆದುಕೊಂಡರು.ನರಸಿಂಹರಾಜಪುರ ಮತಗಟ್ಟೆಯಲ್ಲಿ 67, ಬಾಳೆಹೊನ್ನೂರು 41, ಕಳಸ 8, ಯಗಟಿ 188, ಅಜ್ಜಂಪುರ 203, ಕೊಪ್ಪ 39, ಶೃಂಗೇರಿ 107, ಜಯಪುರ 32, ಬೀರೂರು 147, ಆಲ್ದೂರು 61, ಮೂಡಿಗೆರೆ 98, ಚಿಕ್ಕಮಗಳೂರು 333 ಕಡ 542 ಮತಗಳನ್ನು ಎಂ.ಸಿ.ಶಿವಾ ನಂದಸ್ವಾಮಿ ಪಡೆದುಕೊಂಡರು.

ಜಿಲ್ಲೆಯ ಎಲ್ಲಾ ಸಾಹಿತಿಗಳು ನನ್ನ ಕೈಹಿಡಿದಿದ್ದು, ನನ್ನ ಗೆಲುವಿಗೆ ಸಹಕರಿಸಿದ ಎಲ್ಲಾರಿಗೂ ಧನ್ಯವಾದಗಳನ್ನು ತಿಳಿಸುತ್ತೇನೆ. ಜಿಲ್ಲೆಯಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸುವುದು ನನ್ನ ಕನಸ್ಸು ಮತ್ತು ಗುರಿಯಾಗಿದೆ. ಜಿಲ್ಲೆಯಲ್ಲಿ ಸಾಹಿತ್ಯ ಕ್ಷೇತ್ರವನ್ನು ಇನಷ್ಟು ಅಭಿವೃದ್ಧಿಪಡಿಸಲು ಎಲ್ಲಾರ ಸಹಕಾರ ಪಡೆದು ನಿರಂತರ ಶ್ರಮಿಸುತ್ತೆನೆ.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!